ಪುಟ:ಕುರುಕ್ಷೇತ್ರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ 6 ದಿ ಲೇಬೈಬೋಧಿಸಿ 121 48. ವ್ಯವಹಾರ ಬಿದ್ದಾಗ ಲೆಕ್ಕಗಳು ಎಷ್ಟು ಕ್ರಮವಾಗಿ ಇಡ ಲ್ಪಟ್ಟಿದ್ದರೆ ಅವು ಅಷ್ಟು ಹೆಚ್ಚಾದ ನಂಬುಗೆಗೆ ಅರ್ಹವಾಗಿರುವುವು ತಮ್ಮ ಲೆಕ್ಕದ ಸಂಗತಿಗಳು ಕ್ರಮವಾಗಿಯೂ ಫಲಿತಾಂಶ ಸುಲಭವಾಗಿ ಕಾಣ ಬರುವಂತೆಯೂ ಇರತಕ್ಕದ್ದು ಸರಿಯಾದ ವರ್ತಕರಿಗೆಲ್ಲಾ ಅ ತ್ಯಾವಶ್ಯಕವಾದ ವಿಷಯ, ಇತರರಿಗೆ ಮೋಸಮಾಡಬೇಕೆಂದು ದುರಾ ಲೋಚನೆಯಿಂದ ನಡೆಯುವವರು ತಮ್ಮ ಲೆಕ್ಕಗಳನ್ನು ಇತರರಿಗೆ ಜೀ ವಾಳ ತಿಳಿಯದಂತೆ ತೊಡಕಾಗಿ ತಯಾರಾಡಬೇಕೆಂದು ಕೋರುವರೇ ಹೊರತು, ನ್ಯಾಯವಾದ ಮಾರ್ಗದಲ್ಲಿ ಹೋಗುವವರಿಗೆ ಅದರಿಂದ ಯಾವ ಲಾಭವೂ ಇಲ್ಲ, ಲೆಕ್ಕದ ಬುಕ್ಕುಗಳನ್ನು ಬಿಚ್ಚಿ ಮಧ್ಯೆ ಹಾಳಗಳ ನ್ನು ಬದಲಾಯಿಸುವುದಕ್ಕೆ ಅವಕಾಶವಿಲ್ಲದೆ ಅವು ಭದ್ರವಾದ ರಟ್ಟುಗಳಿ೦ ದ ಕಟ್ಟಲ್ಪಟ್ಟಿರಬೇಕು, ಹಾಳಗಳಿಗೆ ಮೊದಲೇ ಸರಿಯಾಗಿ ಪುಟ ಸಂಖ್ಯೆ ಯನ್ನು ಹಾಕಿರಬೇಕು, ತೊಗಲಿನ ರಟ್ಟು ಕಟ್ಟಿ ದಪ್ಪ ಕಾಗದಗಳನ್ನು ಹಾಕಿ ಮಾರುವ ಬುಕ್ಕುಗಳು ಇದಕ್ಕೆ ಬಹಳ ಅನುಕೂಲವಾದುವು. ಅವುಗಳಿಗೆ ಸರಿಯಾಗಿ ಗೆರೆಗಳನ್ನು ಹಾಕಿ ಅಚಿನ ಅಂಕಿಗಳಿಂದ ಹಾಳ ಗಳ ಸಂಖ್ಯೆಯನ್ನು ಮೊದಲೇ ಹಾಕಿರುವವು ಇನ್ನೂ ಮೇಲಾಗಿರು 3 ಎ ವ ವವು. 49. ಇಂಗ್ಲೀಪಿ ವರ್ತಕರ ಅಂಗಡಿಗಳಲ್ಲಿ ಸಾಧಾರಣವಾಗಿ ವರ್ಷಕ್ಕೊಂದು ಸಲ ಸರಕಿನ ಝಡ್ತಿಯನ್ನು ಮಾಡುತ್ತಾರೆ, ಹೀಗೆ ಮಾಡುವುದರಿಂದ ವರ್ತಕನಿಗೆ ತನ್ನ ಸ್ಥಿತಿಯು ಚೆನ್ನಾಗಿ ಗೊತ್ತಾಗು ವುದು, ಅದರಿಂದ ಈ ಪದ್ಧತಿಯನ್ನನುಸರಿಸಿ ಆಗಾಗ ನಮ್ಮವರೂ ನಡಿಸುವುದರಲ್ಲಿ ಗುಣವುಂಟು. ಆದರೆ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾತ್ರ ಇದು ಅವಶ್ಯಕವಾಗಿರುವುದು. 50, ಮೇಲೆ ಹೇಳಿರುವ ಸಂಗತಿಗಳನ್ನೆಲ್ಲ ಚೆನ್ನಾಗಿ ಓದಿ ತಿಳಿ ದುಕೊಂಡವರಿಗೆ ಇತರ ಲೆಕ್ಕಗಳನ್ನು ಬರೆಯುವ ಮಾರ್ಗವನ್ನು ಗ್ರ. ಹಿಸುವುದು ಕಷ್ಮವಾಗಿರಲಾರದು, ಇನ್ನು ಕೆಲವು ನಮೂನೆಗಳನ್ನು ಈ ಕೆಳಗೆ ಸೂಕ್ಷ್ಮವಾಗಿ ತೋರಿಸಿದೆ.