ಪುಟ:ಕುರುಕ್ಷೇತ್ರ.djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


53 ಲೇಬ್ಯಬೋಧಿನಿ ಚೇರಿಯಿಂದ ಬರುವ ಹುಕುಮುಗಳಿಗೆಲ್ಲಾ “ ನಿರೂಪ” ವೆಂದು ಹೆಸರಿ ಟ್ಟಿದ್ದರು. ಈಗಲೂ ಕೆಲವು ಸಂದರ್ಭಗಳಲ್ಲಿ ಈ ಪದವನ್ನು ಉಪ ಯೋಗಿಸುತ್ತಾರೆ. 30. ಯಾವ ಯಾವ ಕೆಳಗಿನ ಅಧಿಕಾರಿಗಳಿಗೆ ಹುಕುಮನ್ನು ಎರೆಯ ಬಹುದೋ, ಅವರು ಆ ಮೇಲ್ಪಟ್ಟ ಅಧಿಕಾರಿಗಳಿಗೆ ಬರೆಯು ವಾಗ “ ಅರ್ಜಿ' ಅಥವಾ 'ಇಲ್ಲ' ಎಂದು ಬರೆಯಬೇಕು, ಇದು ತಾಲ್ಲೂಕು ಕಚೇರಿಗಳಿಂದ ಡೆಪ್ಯುಟಿ ಕಮಿಷನರೆ ಅಥವಾ ತಾಲ್ಲೂಕಿನ ಅಧಿಕಾರವನ್ನು ವಹಿಸಿರುವ ಅಸಿಸ್ಟೆಂಟ್ ಕಮಿಾಪನಕ ಮತ್ತು ಅವರಿಗೆ ಮೇಲ್ಪಟ್ಟ ಅಧಿಕಾರಿಗಳಿಗೆ ಬರೆಯುವ ಕಾಗದಗಳ ನಮೂನೆಯಾಗಿದೆ. 31, ಕೆಲವರು ಸರ್ಕಾರೀ ಕಾಗದಪತ್ರಗಳಲ್ಲಿ ವಿಶೇಷವಾಗಿ ಹಿಂ ದುಸ್ತಾನಿ ಅಥವಾ ಇಂಗ್ಲೀಪ ಪದಗಳನ್ನು ಅನಾವಶ್ಯಕವಾದ ಸ್ಥಳಗಳಲ್ಲಿ ಉಪಯೋಗಿಸುತ್ತಾರೆ. ದೇಶಭಾಷೆಯಲ್ಲಿ ವಿಶೇಷವಾಗಿ ಹೆಚ್ಚಾದ ಮಾತು ಗಳನ್ನು ಉಪಯೋಗಿಸದೆ, ಅರ್ಥವನ್ನು ತಿಳಿಯಪಡಿಸುವುದು ಅಸಾಧ್ಯ ವಾಗಿರುವಾಗಲೂ, ಅನ್ಯಭಾಷೆಯ ಪದವು ಸಾಧಾರಣವಾಗಿ ಎಲ್ಲರಿಗೂ ತಿಳಿ ಯುವಂತೆ ತಕ್ಕ ಕನ್ನಡದ ಪದಕ್ಕಿಂತ ಹೆಚ್ಚಾದ ವಾಡಿಕೆಯಲ್ಲಿರುವಾಗ ಲೂ, ಅನ್ಯದೇಶೀಯ ಪದಗಳನ್ನು ಉಪಯೋಗಿಸಬಹುದೇ ಹೊರತು, ಕಂಡ ಕಂಡ ಸ್ಥಳಗಳಲ್ಲೆಲ್ಲಾ ಅವನ್ನು ಉಪಯೋಗಿಸುವುದು ಸರಿಯಲ್ಲ. ಪೂರ್ವದಲ್ಲಿ ಮುಸಲ್ಮಾನರ ದೌಲತಿದ್ದು ದುದರಿಂದಲೂ, ಬಹು ದಿವಸದ ವರೆಗೂ ಮಹರಾಷ್ಟ್ರ ಭಾಷೆಯಲ್ಲಿ ಸರ್ಕಾರೀ ಕಾಗದ ಪತ್ರಗಳು ನ ಡೆಯುತಿದ್ದುದರಿಂದಲೂ, ಸರ್ಕಾರೀ ನಡವಳಿಕೆಗಳಲ್ಲಿ ಅನ್ಯದೇಶೀಯ ಪ ದಗಳು ಇಷ್ಟು ವಾಡಿಕೆಗೆ ಬಂದವು. ಈಗ ಕನ್ನಡದಲ್ಲಿ ಬರೆಯುವಾಗ ಸಾಧ್ಯವಾದ ಮಟ್ಟಿಗೂ ಬರೀ ಕನ್ನಡದ ಮಾತುಗಳನ್ನೇ ಉಪಯೋಗಿ ಸುವುದಕ್ಕೆ ಯಾವ ವಿಧವಾದ ಅಡ್ಡಿಯೂ ಇಲ್ಲ.