ಪುಟ:ಕುರುಕ್ಷೇತ್ರ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬ್ಬೋಧಿನಿ. ಬರೆಯುವುದನ್ನು ಅಭ್ಯಾಸಮಾಡಬೇಕು, ಎದುರಿಗೆ ಹೇಳುವ ಅರ್ಥ ವನ್ನು ಕೇಳುವವರು ಗ್ರಹಿಸಿಕೊಳ್ಳದಿದ್ದರೆ, ಕಡಲೇ ಸರಿಯಾಗಿ ಪುನಃ ಹೇಳಬಹುದು. ಕಾಗದದಲ್ಲಿ ಬರೆಯಲ್ಪಟ್ಟಿರುವುದು ತಿಳಿಯದೆ ಹೋದರೆ, ಪುನಃ ಆ ಕಾಗದವನ್ನು ಕೇಳಿ ತಿಳಿದುಕೊಳ್ಳುವುದಕ್ಕಿಲ್ಲ. ಬರೆದವ ರಿಂದ ಮತ್ತೊಂದು ಕಾಗದ ಬರಬೇಕಾದರೆ, ಅನೇಕ ದಿನಗಳಾಗಬ ಹುದು. ಆದುದರಿಂದ ಕಾಗದಗಳನ್ನು ಬರೆಯುವವರು ತಮ್ಮ ಅರ್ಥ ವನ್ನು ಓದಿಕೊಳ್ಳುವವರಿಗೆ ಸ್ವಲ್ಪವೂ ಅನುಮಾನವಿಲ್ಲದೆ ತಿಳಿದುಕೊಳ್ಳು ವಂತೆ ಸ್ಪಷ್ಟವಾಗಿ ಬರೆಯಬೇಕು. 2. ಕಾಗದಗಳಲ್ಲಿ ಬರೆಯಲ್ಪಡುವ ಸಂಗತಿಗಳು ಅನೇಕ ದಿವಸ ಗೆಳ ವರೆಗೂ ನಿಲ್ಲತಕ್ಕವಾದುದರಿಂದ, ನಾವು ಯಾರಿಗೆ ಬರೆಯುವೆವೊ ಅವರ ವಿಷಯವಾಗಿ ನವಗೆ ಇರತಕ್ಕೆ ಮರ್ಯಾದೆ ವಿಶ್ವಾಸ ಮುಂತಾ ದುದನ್ನು ವ್ಯಕ್ತಪಡಿಸಲಿಕ್ಕೆ ತಕ್ಕ ರೀತಿಯಿಂದ ಅವನ್ನು ಬರೆದಿರಬೇಕು. ಪೂರ್ವದಿಂದಲೂ ನಡೆದುಬಂದಿರುವ ಪದ್ಧತಿಯ ಪ್ರಕಾರ ಇಂತಿಂತಾ ಜನರಿಗೆ ಬರೆಯುವಾಗ ಹೀಗೆ ಹೀಗೆ ಮೇಲುವಿಳಾಸ, ಒಳಗಿನ ಅಂಕಿತ (ಒಕ್ಕಣೆ) ಮುಂತಾದವುಗಳನ್ನು ಬರೆಯಬೇಕೆಂದು ವಿಧಾಯಕವಾಗಿದೆ. ಇಂಗ್ಲೀಪಿ ಭಾಷೆಯ ಸ್ಥಾನವು ಅಭಿವೃದ್ಧಿಯಾದ ಮೇಲೆ, ಈ ಪೂರ್ವದ ರೀತಿಯು ಬಹಳ ತೊಡಕಾದುದೆಂದೂ, ಪ್ರತಿ ಕಾಗದದಲ್ಲಿಯೂ ಈ ವಿಧವಾಗಿ ಬರೆಯುವುದು ಕೆಲಸಕೇಡೆಂದೂ, ಅನೇಕರು ಮೊದಲಿನ ಪದ ತಿಯ ಸರಣಿಯನ್ನು ತ್ಯಜಿಸುತಲಿದಾರೆ. ಪೂರ್ವದಲ್ಲಿ ಜನರಿಗಿದ್ದಷ್ಟು ಕಾಲವಿರಾಮವು ಈಗಿನವರಿಗೆ ಇಲ್ಲವಾದುದರಿಂದ, ಕಾಗದ ಬರೆಯುವ ಕೆಲಸವನ್ನು ಸಾಧ್ಯವಾದಮಟ್ಟಿಗೆ ಕಡಮೆ ಮಾಡಿಕೊಳ್ಳಬೇಕೆಂಬ ಕುತೂಹಲವು ಸಹಜವಾದುದೇ ಸರಿ, ಮತ್ತು ಕಾಗದಗಳನ್ನು ಬರೆಯು ವುದರಲ್ಲಿ, ಬರೆಯುವವನ ಅವಸರ, ಓದಿಕೊಳ್ಳುವವನಿಗೂ ಅವನಿಗೂ ಇರುವ ಬಳಕೆ, ವಿಷಯ, ಗೌರವ, ಇವೆಲ್ಲಾ ನೋಡತಕ್ಕವುಗಳು. ಸಾಧಾರಣವಾದ ವಿಷಯದಲ್ಲಿ ಒಂದು ಮಾತನ್ನು ಬರೆಯಬೇಕೆಂದು ಬರೆಯುವ ಚೀಟಿಯಲ್ಲಿ, ಅತಿ ದೀರ್ಘವಾದ ಒಕ್ಕಣೆಯನ್ನು ಬರೆದರೆ, ನಾಲ್ಕು ವರ್ಷದ ಹುಡುಗನ ತಲೆಯ ಮೇಲೆ ಒಂದು ಧಡಿಯ ಭಾರದ • 6