ಪುಟ:ಕುರುಕ್ಷೇತ್ರ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


99 ಲೇಬೋಧಿನಿ. ೧೦. ಗುತ್ತಿಗೆಯ ಕೆಲಸದ ಕರಾರು. ೧V೯೫ನೆಯು ಏಪ್ರಿಲ್ ೪ನೇ ತಾರೀಖಿನಲ್ಲಿ ಶಿವನಾಪುರದ ಶಿವರಾ ಯರವರಿಗೆ ಇದೇ ಊರಲ್ಲಿ ಬೆಂಗಳೂರಿಂದ ಬಂದು, ಕಂಟ್ರಾಕ್ಟು ಕೆಲಸ ಗಳನ್ನು ಮಾಡಿಸುತಿರುವ ಮೇಸ್ತಿ ) ಪಾಪಣನು ಬರೆದುಕೊಟ್ಟ ಕರಾ ರು ಹೇಗೆಂದರೆ :-ನೀವು ಈ ಊರಿನ ದೊಡ್ಡ ಬೀದಿಯಲ್ಲಿ ೫ನೇ ಸಂಖ್ಯೆ ಯ ನಿವೇಶನದಲ್ಲಿ ಕಟ್ಟಿಸುತಿರುವ ಮಹಡೀ ಮನೆಯ ಕಾಮಗಾರಿ ಯನ್ನು ಈ ತಾರೀಖಿನ ಲಾಗಾಯಿತು ಆರು ತಿಂಗಳೊಳಗಾಗಿ ಇಟ್ಟಿಗೆ, ಗಾರೆ ಮತ್ತು ಮರಗೆಲಸವನ್ನೆಲ್ಲಾ ಮಜಬೂತಾಗಿ ತಮ್ಮ ಅಂದಾಜ ಮತ್ತು ಸ್ಥಾನಿಗೆ * ಅನುಸಾರವಾಗಿ ಕಟ್ಟಿ ಪೂರೈಸಿ ಕೊಡಲುಳ್ಳವನು. ಅದಕ್ಕೆ ನನ್ನ ಕೆಲಸ ನಡೆದಹಾಗೆಲ್ಲಾ ವಾರಕ್ಕೊಂದು ಸಲ ಕೆಲಸವನ್ನು ಅಳತೆಮಾಡಿಕೊಂಡು, ಆದ ಕೆಲಸಕ್ಕೆ ಇದಕ್ಕೆ ಸೇರಿಸಿರುವ ದರಗಳ ಪಟ್ಟಿಯ ಮೇರೆಗೆ ಆಗುವ ಮೊಬಲಗನ್ನು ತಾವು ಪಾವತಿ ಮಾಡಬೇಕು. ಉಪಯೋಗಿಸುವ ಸಾಮಾನಿನಲ್ಲಿಯೇ ಆಗಲೀ, ಕೆಲಸದ ಮಜಬೂತಿನ ವಿಷಯದಲ್ಲಿಯೇ ಆಗಲೀ ತಕರಾರು ಉಂಟಾದರೆ, ಅದರ ವಿಷಯದಲ್ಲಿ ನನ್ನ ಕಡೆಯವರಾದ ಒಬ್ಬರೂ ತಮ್ಮ ಕಡೆಯವರಾದ ಇಬ್ಬರೂ ನಿಂತು ಫೈಸಲ್ಮಾಡುವಂತೆ ಇಬ್ಬರೂ ಒಪ್ಪಿಕೊಳ್ಳತಕ್ಕದ್ದು, ಈ ವಿಷಯದಲ್ಲಿ ಯಾವುದೊಂದು ಹೆಚ್ಚು ಕಡಮೆ ಬಂದರೂ, ನನ್ನ ಸ್ವಂತ ಖರ್ಚಿನಿಂದ ನಾನು ಸರಿಮಾಡಿಕೊಳ್ಳತಕ್ಕವನು, ಮತ್ತು ಕಟ್ಟಡವು ಪೂರೈಸಲ್ಪಟ್ಟ ಮೂರು ವರ್ಷದೊಳಗಾಗಿ ಸಾಮಾನು ಅಥವಾ ಕಾಮಗಾರಿಯ ಕೊರತೆ ಯಿಂದ ಕಟ್ಟಡಕ್ಕೆ ಯಾವುದೆಂದು ಕೇಡು ಸಂಭವಿಸಿದರೂ ಅದನ್ನು ಸರಿಮಾಡಲು ನಾನೇ ಜವಾಬ್ದಾರನಾಗಿರತಕ್ಕದ್ದು, ಈ ರೀತಿಯಾಗಿ ನನ್ನ ಮನಃಪೂರ್ವಕವಾಗಿ ಒಪ್ಪಿ, ಈ ಕರಾರನ್ನು ಬರೆದುಕೊ ತೃದೇನೆ.

  • * ಮನೆ ' ಅಂದರೆ ಮನೆಯನ್ನು ಈ ರೀತಿಯಾಗಿ ಕಟ್ಟಬೇಕೆಂಬುವ ನಮೂನೆ ಮತ್ತು ಅಳತೆಗಳನ್ನು ತೋರಿಸುವ ನಕ್ಷೆ ಅಥವಾ ಚಿತ್ರಸಹ.