ಪುಟ:ಕುರುಕ್ಷೇತ್ರ ಗ್ರಂಥ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಕುರುತ್ರ! ಶ್ರೇಯಸ್ಕರ...! ರ್ಹತುಂಬ ಕುಂಕುಮ, ಕೊರಳತುಂಬ ಮಂಗಲಸೂತ್ರ, ಕೈತುಂಬ ಬಳೆ ಇವೆ. ನಮ್ಮ ಐರ್ಯ ಗಳು! ಈ ಅಖಂಡ ಸೌಭಾಗ್ಯಗಳು ನಮ್ಮ ಸಂಗಡ ಒರು ತಿರುವಾಗ, ನಾನು ಅದಕ್ಕೆ ಎರವ ಗಲಾ? ಬೆನೆ ನನ್ನ ಪ್ರಯಾಣದ ಸಿದ್ಧತೆಯನ್ನು ಮಾಡಿರಿ.” ಎಂದು ಹೇಳಿದಳು! ಅಹನ ಆರ್ಯ ಸ್ತ್ರೀ ಯ ರೇ, ನೀವು ಧನ್ಯರು! ಪರಮಧನ್ಯರು!! ಆ ಬಳಿಕ ಶ್ರೀಮಂತರ ಡೇರೆಯ ಬಳಿಯ ಪ್ರಶಸ್ತವಾದ ಬೈಲಿನಲ್ಲಿ ಚಿತೆಯು ಸಿದ್ದ ವಾಯಿತು. ಆದರಮೇಲೆ ಲಕ್ಷ್ಮೀಬಾಯಿಯು ಪತಿಯ ಶವವನ್ನಿಟ್ಟರು. ಲಕ್ಷ್ಮೀಬಾಯಿಯು ಬಿಳಿಯ ಪತಲವನ್ನುಟ್ಟು, ಹಗೆತುಂಬ ಕುಂಕುಮ ಹಚ್ಚಿಕೊಂಡು ಸರ್ವಾಲಂಕಾರಗ ಳನ್ನಿಟ್ಟುಕೊಂಡಳು. ಭಾನುವಿನ ಹೆಂಡತಿ ಯಾದ ಪಾರ್ವತಿಬಾಯಿಯು ಆ ಸಾಧಿಯ ಉಡಿತುಂಬಿದಳು. ಬಳಿಕ ಆ ಪುಣ್ಯವಂತಳು ಎಲ್ಲರ ಅಪ್ಪಣೆಯನ್ನು ಕೇಳಿಕೊಳ್ಳುತ್ತ, ಚಿತೆಯಬಳಿಗೆ ಹೋದಳು. ಆಗ ಅಪ್ಪನು ಹೊರಳಾಡಿ ಅಳುವವನೂ, ಅತ್ತ ಧೀರ ನಾದ ಭಾವುಸಾಹೇಬನು ಮೂಢನಂತೆ ಕಣ್ಣೀರು ಸುರಿಸುವದನ್ನೂ ನೋಡಿ ನೆನೆದವರ ಕಣು ಗಳಲ್ಲಿ ನೀರುಸುರಿದವು! ದು:ಖಾತಿಶಯದಿಂದ ಭಾವೂಸಾಹೇಬನಿಗೆ ಮೂರ್ಛ ಬಂದಿತು. ಲಕ್ಷ್ಮೀಬಾಯಿಯು ತನ್ನ ಮೈಮೇಲಿನ ಅಲಂಕಾರಗಳನ್ನೆಲ್ಲ ತನ ದಾಸಿಗೆ ಕೊಟ್ಟು, ಚಿತೆಗೆ ಅಗಿ ಸಂಸ್ಕಾರ ಮಾಡಿ ಅದನ್ನು ಹತ್ತಿ, ಪತಿಯ ಮಸ್ತಕವನ್ನು ತೊಡೆಯಮೇಲೆ ಇಟ್ಟುಕೊಂಡು ಕುಳಿತು ಕಣ್ಣು ಮುಚ್ಚಿಕೊಂಡು ಶ್ರೀ ಲಕ್ಷ್ಮೀ-ನಾರಾ ಯಣನನ್ನು ಧ್ಯಾನಿಸತೊಡಗಿದಳು! ಆಗ ನುಂಗಲವಾದ್ಯಗಳು ಭೋರ್ಗರೆಯುತ್ತಿದ್ದವು; ಬಾಹ್ಮಣರು ವೇದಘೋಷದಾಡುತ್ತ ಚಂದನ, ಕರ್ಪುರ, ತುಪ್ಪ ಇತ್ಯಾದಿ ಜಾಲಾ ಗಾಹಿಪದಾರ್ಥಗಳನ್ನು ಚಿತೆಯಮೇಲೆ ಸುರಿಯುತ್ತಿದ್ದರು. ಚಿತೆಯು ನಾಲ್ಲೂಕದೆ ಲಿಂದ ಪ್ರಜ್ವಲಿಸಿತು. ಆಗ ಆ ಸತಿಯು ಮಿಸುಕಲಿಲ್ಲ, ಉಸ್ಸೆಂದು ಉಸುರಲಿಲ್ಲ! ಒಂದು ಪ್ರಹರದಲ್ಲಿ ಚಿತೆಯು ಸುಟ್ಟು ಬೂದಿಯಾಯಿತು. ಎಲ್ಲರೂ ಸತಿಯನ್ನು ಕೊಂಡಾಡುತ್ತ, ಚಿತೆಯನ್ನು ನಮಸ್ಕರಿಸುತ್ತ ಹೊರಟುಹೋದರು, ಪ್ರಿಯವಾಚ ಕರೇ, ದೈವಬಲ ತಪ್ಪಿದಬಳಿಕ, ಮಲ್ಲಾರರಾಯನೇನು ಮಾಡುವನು, ಮೇಹೇಂದಳೆ ಯೇನು ಮಾಡುವನು? = ೯ ನೆಯ ಪ್ರಕರಣ-ಉಮೆಯ ಹೀಗೆ ಗೊವಿಂದಪಂತಬುಂದೇಲೇ, ಬಳವಂತಾದಮೇಹೇಂದಳೇಯೆಂಬವರಿಬ್ಬರು ಐರರು ರಣಭೂಮಿಯಲ್ಲಿ ಬಿದ್ದದ್ದರಿಂದ, ಮರಾಟರ ಉತ್ಸಾಹವು ಕುಗ್ಗಿತು. ಪ್ರಮುಖ ಸರದಾರರು ಮುಂದಿನ ಪರಿಣಾಮವನ್ನು ಕುರಿತು ಆಲೋಚಿಸತೊಡಗಿದರು. ಮಹ ದಾಜಿಸಿಂದೆಯು ತನ್ನ ಡೇರೆಯಲ್ಲಿ ಯಶವಂತರಾವಸವಾರನ ಸಂಗಡ ಹೀಗೆ ಆಲೋಚಿ ಸುತ್ತ ಕುಳಿತಿರುವಾಗ, ಡೇರೆಯ ಹೊರಗೆ ಯಾವ ಒಬ್ಬ ಸ್ತ್ರೀಯು ಮಂಜುಲಸ್ವರ