ಪುಟ:ಕೃಷ್ಣ ಗೋಪೀವಿಲಾಸಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ


ಮಿಸುಕದಂತಿವರ ಕಾವಲನಿಮ್ಮ ದಾನವ | ನೆಸೆದನಚ್ಯುತನ ಭಯದೊಳು ||೨೯
ಇತ್ತಲಾಕಾರಗಾರದೊಳು ದೇವಕಿದೇವಿ | ಪೆತ್ತಳು ಗಂಡುಶಿಶುವನು ||
ಮೃತ್ಯು ರಕ್ಕಸ ಬಂದು ಹಸುಳೆಯ ಕಿತ್ತುಕೊಂ | ಡೆತ್ತಿ ಕಡಿದ ಶಿಲಾ ತಲದಿ ||೩೦
ಇಂತಾರು ಮಕ್ಕಳ ಹಡೆದಳು ಕಾಂತೆ ಕೈ । ತಾಂತಗೊಪ್ಪಿಸಿ ಬಸವಳಿದು ||
ಚಿಂತಿಸಿ ಮರುಗುತ್ತ ನಾಥ ನಾಥನೆ ಲಕ್ಷ್ಮೀ| ಕಾಂತ ರಕ್ಷಿಪುದೆಂದಳಬಲೆ ||೩೧
ಇರಲು ಕ್ಷೀರಾಬ್ಧಿಯೋಳ್ ರವಿಂದನೇತ್ರ ತಾ | ನೊರಗಿರ್ದ ಫಣಿರಾಜನೊಡನೆ ||
ಪರಮಪವಿತ್ರ ದೇವಕಿಯ ಗರ್ಭದೊಳು ನೀ | ನಿರು ಕಾರ್ಯವುಂಟೆಂದು ನಗುತ ||
ಎನಲು ಹಸಾದವೆನುತಲಹಿರಾಜ ತಾ || ನನುಪಮೆಯುದರದೊಳಿರ್ದು ||
ಅನಘನಾಕ್ಷಣ ರೋಹಿಣಿಯ ಪೊಡೆಯನು ಪೊಕ್ಕು | ಜನಿಸಿದ ನಂದಗೋಕುಲದಿ||
ದೇವಕಿಯುದರದೊಳೊಡನೆ ದೇವೋತ್ತಮೆ | ನಾವಿರ್ಭವಿಸಲದ ಕಂಡು ||
ದೇವಸಮೂಹವೆರಸಿ ಬಂದು ನಾಲ್ಮೋಗ 1 ನಾವಧೂಮಣಿಗೆ ವಂದಿಸಿ ||೩೪
ತಾಯೆ ನಿನ್ನಯ ಗರ್ಭದೊಗಳಖಿಲಾಂಡಶ್ರೀ| ನಾಯಕನವತರಿಸುವನು ||
ಆಯಾಸವೇ ತಕಿನ್ನಚ್ಯುತ ನಿನಗೆ ನಿ | ರಾಯಾಸದೊಳು ಸುತನಹನು ||೩೫
ಇದುವೆ ವೈಕುಂಠ ಕ್ಷೀರಾಬ್ಧಿಯಾದುದು ನಿನ್ನಾ ! ಉದರಮಧ್ಯವೆ ವಿಷ್ಣುಪದವು ||
ಯದುಕುಲತಿಲಕನ ಮಾತೆ ದೇವಕಿ ನಿನ್ನ | ಪದಕಮಲಕೆ ವಂದಿಸುವೆನು ||೩೬
ಇಂತು ಸನ್ನು ತಿಗೆಯ್ದು ಕಮಲಜನನಿತರೊ | ಳಂತರ್ಧಾನವನು ಕೈಕೊಂಡ ||
ಸಂತಸದಿಂ ವಸುದೇವನ ಕಾಂತೆ ನಿ | ತಾಂತಸುಖದೊಳಿರುತಿರಲು ||೩೭
ಆವನಿತಾಮಣಿಗಾದುದು ನವಮಾಸ | ಶ್ರಾವಣಬಹುಳಾಷ್ಟಮಿಯೊಳು ||
ಪಾವನರೋಹಿಣಿ ವೃಷಭಲಗ್ನದೊಳಾಗ | ಶ್ರೀವರನವತರಿಸಿದನು ||೩v
ತರುಣಾರ್ಕಸದೃಶಕಿರೀಟದ ಕಾಂತಿಯಿಂ| ದರಳಿದ ಸರಸಿಜಾನನದ ||
ಕರುಣಾಕಟಾಕ್ಷಪಾಂಗದ ತೆರೆಯೊಳಗಾಳ್ಯಾ | ಮರಕತಮಕರಕುಂಡಲದ ||೩೯
ಬಿರಿದ ಸಂಸಗೆಯ ಜರೆವ ನಾಸಿಕದ ಮುದ್ದು | ಗರೆವ ವದನದಂತರುಬೆಯಾ ||
ನರಕಂಬುಕಂಠದೊಳ್ ಚಂದ್ರಮನಂದದೆ | ಮೆರೆವ ವಜ್ರದ ಮಣಿಸಿರಿಯಾ ||೪೦