ಪುಟ:ಕೆಳದಿನೃಪವಿಜಯಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಕೆಳದಿನೃಪವಿಜಯಂ ಕಡೆಗಾಲದಗ್ರದೊಳ್ಳಿಗೆ ಕಡಲ್ಗವ್ರದೊಳೆ ಮೇರೆವರಿವಂತಿರೆ ಸೆ ! ರ್ವಡೆವೆರಸೈದುತ್ತನಿಬ ರ್ಜಡೆಯದ ಕೊ೦ಟೆಯ ಸಮೀಪಮಂ ಸಾರುತ್ತುಂ || ಮುತ್ತಿಗೆಯನಿಕ್ಕೆ ಕೇಳು ಸು ವೃತ್ತಂ ವೆಂಕಟನ್ನ ಪಾಲನರಿಕುಲಕಾಲಂ | ಪತ್ರಿಚಯವೆರಸು ತದ್ದು ರ್ವೃತರ ಸೇನಾಸಮೂಹಕಂದಿದಿರಾಂತಂ ೧೦ - ಇಂತಾ ವೆಂಕಟಪ್ಪನಾಯಕಂ ಜಡೆಯದ ಕೊಂಬೆಯಂ ವೇತ್ಸೆ ಸಿದ ತುರಷ್ಕರ ಸೈನ್ಯದಿರ್ಚಿ ನಿಂದು ಕೈಗೆಯಾ ಸಮರಾಂಗಣದಾಳಂ ಬರಖಾನನಂ ಕುಂಬಿಡಿಸಿ, ಅಂಕುಶಖಾನನ ಬಿಂಕವಂ ಮುರಿದು, ಸಲಾ ಬತಖಾನನಂ ನಿಲವಿಕೆಗೆಡಿಸಿ, ಬಹಿಲಿಮಖಾನನಂ ಬಹಿರ್ಮುಖನೆನಿಸಿ, ಮಂಜಳಖಾನನಂ ರಂಜನೆಗೆಡಿಸಿ, ಶಾರೆಯಖಾನನ ಲೂಟಿಯಂ ನಿಲಿಸಿ, ಮಹಮುದಖಾನನಹಮಿಕೆಯಂ ತೀರ್ಚಿ, ಅಂಮದಖಾನನ ಹೆಮ್ಮೆ ಯಂ ಮುರಿದು, ಸಂಜರಖಾನನಂ ಭಂಜನೆಗೈದು, ಸರ್ಜಾಖಾನನ ಗರ್ಹ ನೆಯಂ ನಿಲಿಸಿ, ಹೈದರಮಲ್ಲಿನಾಯಕನಂ ಕೈದುವನಿಕ್ಕಿಸಿ, ಬರಿಗಿದು ದೇವೀನಾಯಕನಂಪರಾಭವಂಗೈದು, ಇಂತುರುಬ ತರುಬಿದ ತುರುಷ್ಯ ಸೈನ್ಸಸಾಗರಮಂಕಲಂಕಲವರ್ನಿಂದು ನಿತ್ತರಿಸಲಮ್ಮದೆ ಮುರಿದು ಮುತ್ತಿ ಗೆದೆಗೆದನಂತರಂ || ೧೧ ಮತ್ತಂ ಹನುಮನರೇಂದ್ರನ ಪಚಯಂವೆರಸು ತುಡುಗುಣಿಯ ಕೊಂಟೆಯುಮಂ || ಮುತ್ತಿದ ಯವನರ ಸೈನ್ಯದ ಮೊತ್ತವನಂಕದಳ ಸದೆದು ಮುರಿದೊಡಿಸಿದಂ || ೧೦