ಪುಟ:ಕೆಳದಿನೃಪವಿಜಯಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xyi ಮನೋಹರವಾಗಿಯೂ ಬರೆಯ ಬಲ್ಲನು. 1 ಸಂಕಣನಾಯಕನು ಅಂಕು ತಖಾನನೊಡನೆ ಮಾಡಿದ ಕಾಳಗವು ಬಹು ಸ್ವಾರಸ್ಯವಾಗಿ ವರ್ಣಿಸಲ್ಪ ಟ್ವಿದೆ, ಆದರೆ ಒಟ್ಟಿನಮೇಲೆ ನೋಡಿದರೆ ಚರಿತ್ರಕಥನಕ್ಕೆ ಹೆಚ್ಚು ಪ್ರಶಸ್ತಿ ಕೊಟ್ಟಿರುವಹಾಗೂ, ಏ ಥಕಾವ್ಯರಚನೆಯನ್ನೆ ಮುಖ್ಯೋದ್ದೇಶ್ಯವನ್ನಾಗಿಟ್ಟುಕೊಳ್ಳದಿದ್ದಂತೆಯೂ ಕಾಣುತ್ತದೆ. ಅದರಿಂದಲೇ ಇದರಲ್ಲಿ ದೊಡ್ಡದೊಡ್ಡ ವ್ಯತಗಳು ಕಡಿಮೆ; ಕಂದಗಳ 2 ಮತ್ತು ಗದ್ಭವೇ ಹೆಚ್ಚಾಗಿ ಉಪಯೋಗಿಸಲ್ಪಟ್ಟಿವೆ. ಭಾಷೆಯು ಸುಲಭವಾಗಿದೆ. ಹಳಗನ್ನಡವಾದರೂ ಅದರ ಬಿಗಿಯಿಲ್ಲ; ಹೊಸಗನ್ನಡರೂಪಗಳ ಪ್ರಯೋಗಗಳ ಹೇರಳವಾಗಿವೆ; ಮರಾಟ ಅಥವಾ ಹಿಂದೂಸ್ಥಾನಿಯ ಪದಗಳು ಅಲ್ಲಲ್ಲೇ ಉಪಯೋಗಿಸಲ್ಪಟ್ಟಿವೆ. ಉದಾ:-ಗನೀಮ, ಜಿಲೆಯ, ತಕತೆ, ಬಕತರ, ಬೊಕ್ಕಸೀಸ, ಮೇರು ಮಾನಿ, ಸಲಾಮು, ಹುಕುಂ, ಇತ್ಯಾದಿ. ಈತನು ( ಅನಂತರ ' ಎಂಬ ಅರ್ಥದಲ್ಲಿ ' ನಂತರ ' ಎಂಬ ಪದವನ್ನು ಉಪಯೋಗಿಸುತ್ತಾನೆ. ಇದನ್ನು ಸಾಧುವೆಂದು ಹೇಳುವುದಕ್ಕಾಗುವುದಿಲ್ಲ. ಆದರೂ ಮರಾಟ ಯಲ್ಲಿ ಈ ರೂಪವುಂಟು, ಆದುದರಿಂದ ಇದು ತದ್ಭವರೂಪವೆಂದು 1 ಇದಕ್ಕೆ ಉದಾಹರಣೆಯಾಗಿ II ೪೦, ೬೯, III ೬೫; ೬೬; V ೩: VII ೧, ೨॰ ೪೧: ಈ ಪದ್ಯಗಳನ್ನು ಹೇಳಬಹುದು, 2 ಈ ಕವಿಯು, ಕಂದದ ಮೊದಲನೆಯ ಮತ್ತು ಮಾರನೆಯ ನಂದಗ ಇಲ್ಲಿ ನಾಲ್ಕುನಾಲ್ಕು ಮಾತ್ರೆಗಳ ಮರುಮರು ಗಣಗಳಿರಬೇಕೆಂಬ ನಿಯಮವ ನಿಟ್ಟುಕೊಂಡಂತಿಲ್ಲ, ಒಟ್ಟು ಹನ್ನೆರಡುಮಾತ್ರೆಗಳಾದರೆ ಸರಿಯೆಂದು ಭಾವಿಸಿದ ಹಾಗೆ ತೋರುತ್ತದೆ, ಆದುದರಿಂದ ಅಲ್ಲಲ್ಲೇ ಮೂಗುಮಾತ್ರೆಯ ಒಂದು ಗಣ , ಐಮಮಾತ್ರೆಯ ಒಂದುಗಣ, ಆಮೇಲೆ ನಾಲ್ಕು ಮಾತ್ರೆಯ ಬಂದುಗಣ ಈ-ತಿ ಹನ್ನೆರದ ವತ್ರಗಳುಳ್ಳ ಎನ್ನೆ ಕಂದಪಾವಗಳು ಕಂಡುಬರುತ್ತವೆ, ಅಂಥ ಪಾದಗಳನ್ನು ನಕ್ಷತ್ರ ಚಿಹ್ನೆಯಿಂದ ಗುರುತುಮಾಡಿದ್ದೇವೆ, ಹೀಗೆಯೇ 'ಜಗಣಂ ವಿಷಮದೊಳಾಗದು, ಜಗಣಂ ಮೇಣ ನಗಣಮಕ್ಕೆ ಯಾರನೆಯುಡಿಯೊಳೆ 'ಎಂಖ ಸೂತ್ರಕ್ಕೂ ವಿರೋಧವಾಗಿ ಬರೆದ ಕಲವು ಕಂದಗಳಿವೆ, ಉದಾ:-X 103, XI 5, XIl 2, ... ... .