ಪುಟ:ಕ್ರಾಂತಿ ಕಲ್ಯಾಣ.pdf/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೨ ಕ್ರಾಂತಿ ಕಲ್ಯಾಣ ಸುರಾಸುರಾಃ ಕಿಂಪುರುಷೋರಗೇಂದ್ರಾಃ ಗಂಧರ್ವ ವಿದ್ಯಾಧರ ಪನ್ನಗಶ್ಚ ಸೀದಂತಿ ಸರ್ವೆ ವಿಷಮಸ್ಥಿತೇನ ತಸ್ಮಿನಮಃ ಶ್ರೀ ರವಿನಂದನಾಯ ||೧|| ದೇಶಾಶ್ಚ ದುರ್ಗಾಣಿ ತಥಾ ಬಲಾನಿ ಸೇನಾನಿವೇಶಾಃ ಪುರ ಪತನಾನಿ ಸೀದುತಿ ಸರ್ವೆ ವಿಷಮಸ್ಥಿತೇನ ತಸ್ಯೆ ನಮಃ ಶ್ರೀ ರವಿನಂದನಾಯ ||೨|| ಭ್ರಷ್ಟಾ ಸ್ವಯಂಭೂ ಭುವನ ತ್ರಯಸ್ಯ ಪಾತಾ ಹರಿಃ ಸಂಹರತೇ ಪಿನಾಕಿ ಏಕಧಾ ಋಗ್ ಯಜು ಸಾಮ ಮೂರ್ತಿ ತಸ್ಯೆ ನಮಃ ಶ್ರೀ ರವಿನಂದನಾಯ 1೩1* ಬಾಗಿಲುಗಳಿಗೆ ಹಾಕಿದ್ದ ಜವನಿಕೆ ಸರಿಸಿದಂತಾಗಿ ಬಿಜ್ಜಳನು ತಿರುಗಿ ನೋಡಿದನು. ಕರಣಿಕನು ನಿರೂಪಗಳನ್ನು ಸಿದ್ಧಪಡಿಸಿ ತಂದಿರಬಹುದೇ ? ಮೊದಲು ಅವುಗಳಿಗೆ ಹಸ್ತಾಕ್ಷರ ಮಾಡಿ ಮಾಧವನಾಯಕನಿಗೆ ಕಳುಹಿಸಬೇಕು. ಆಮೇಲೆ ಸೋಮೇಶ್ವರನ ಪತ್ರ, ಪುನಃ ಅದೇ ಶಬ್ದ, ಜವನಿಕೆಗಳನ್ನು ಸರಿಸಿದಂತೆ. ಬಿಜ್ಜಳನು ತಲೆಯೆತ್ತಿ ನೋಡಿದನು. ಅಂತಃಗೃಹದ ತೆರೆ ಸರಿದು, ದೇಹವಿಲ್ಲದ ರುಂಡವೊಂದು, ಕಿಡಿಯುಗುಳುವ ಕಣ್ಣುಗಳಿಂದ ತನ್ನನ್ನೇ ನೋಡುತ್ತಿರುವುದನ್ನು ಕಂಡನು. ಕಂದುಬಣ್ಣದ ಕೇಶ, ಸುರಗಿಯ ಮೊನೆಯಂತ ತೀಕ್ಷವಾದ ಕಣ್ಣುಗಳು, ಇಲಿ ಹೆಗ್ಗಣಗಳಂತೆ ಮುಂದೆ ಚಾಚಿದ ದೊಡ್ಡ ಮೂಗು.

  • ದೇವದಾನವರು, ಕಿನ್ನರ ಕಿಂಪುರುಷರು, ಗಂಧರ್ವ ವಿದ್ಯಾಧರರು, ಮುಂತಾದವರೆಲ್ಲ ಯಾವನ ಕ್ರೂರ ದೃಷ್ಟಿಯಿಂದ ನಾಶವಾಗುವರೋ ಆ ಶನೈಶ್ಚರನಿಗೆ ನನ್ನ ನಮಸ್ಕಾರಗಳು ||೧||

ದೇಶದುರ್ಗಗಳು, ಸೈನ್ಯ ಬಲ, ಸೇನಾ ನಿವೇಶನಗಳು, ನಗರ ಪಟ್ಟಣಗಳು, ಯಾವನ ಕೂರದೃಷ್ಟಿಯಿಂದ ನಾಶವಾಗುವವೋ ಆ ಶನೈಶ್ಚರನಿಗೆ ನನ್ನ ನಮಸ್ಕಾರಗಳು ||೨|| ಒಂದೇ ಆದ ವೇದ, ಋಗ್ಯಜುಃ ಸಾಮ ಎಂದು ಮೂರಾಗಿ ಕಾಣುವಂತೆ ಮೂರು ಲೋಕಗಳನ್ನು ಸೃಷ್ಟಿಸುವ ಬ್ರಹ್ಮನೂ, ಸಲಹುವ ಹರಿಯೂ, ಸಂಹಾರ ಮಾಡುವ ಶಿವನೂ ತಾನೇ ಆದ ಶನೈಶ್ಚರನಿಗೆ ನನ್ನ ನಮಸ್ಕಾರಗಳು |೩||