ಪುಟ:ಕ್ರಾಂತಿ ಕಲ್ಯಾಣ.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨೬ ಕ್ರಾಂತಿ ಕಲ್ಯಾಣ ಸಮೃದ್ಧಿಗಳು ಹೆಚ್ಚಿದವು. ಪ್ರಜೆಗಳು ಸುರಕ್ಷಿತರಾದರು. ಧಾರ್ಮಿಕ ಸ್ವಾತಂತ್ರ್ಯ ದೇಶದಲ್ಲಿ ಪ್ರತಿಷ್ಠಿತವಾಯಿತು. ಅವರ ಅನುಮತಿ ಪಡೆದು ಸ್ಥಾಪಿತವಾದ ಮಹಮನೆ ಅನುಭವಮಂಟಪ ಪ್ರತಿಷ್ಠಾನಗಳು ಅತ್ಯಲ್ಪ ಕಾಲದಲ್ಲಿ ಪ್ರಭಾವಶಾಲಿಯಾಗಿ ಬೆಳೆದು, ನಾವು ಉದ್ದೇಶಿಸಿದ್ದ ಧಾರ್ಮಿಕ, ಸಾಮಾಜಿಕ ಸುಧಾರಣೆಗಳು ಕಾರ್ಯಗತವಾದವು. ಇದಕ್ಕಾಗಿ ಶರಣರು ಯಾವಾಗಲೂ ಬಿಜ್ಜಳರಾಯರಿಗೆ ಕೃತಜ್ಞರಾಗಿದ್ದಾರೆ. ಚಾಲುಕ್ಯ ರಾಜ್ಯದ ಎಲ್ಲ ಕಡೆ ಭೀತಿ ಆತಂಕಗಳನ್ನು ಉಂಟುಮಾಡುವ ಈ ಘೋರಕೃತ್ಯ ಯಾವ ರೀತಿ ನಡೆಯಿತು, ಅದರ ಕಾರಣಗಳೇನು, ಹಂತಕರಾರು, ಎಂಬ ವಿವರಗಳೊಂದೂ ಈಗ ನಮಗೆ ತಿಳಿಯದು. ಅವುಗಳೇನೇ ಇರಲಿ, ಚಾಲುಕ್ಯ ಇತಿಹಾಸದಲ್ಲಿ ಇದು ಅತ್ಯಂತ ವಿಷಾದಕರ ದುರ್ಘಟನೆ ಎಂಬುದು ನಿರ್ವಿವಾದ. ಮುಂದೆ ಇದರಿಂದ ಆಗಬಹುದಾದ ದುಷ್ಪರಿಣಾಮಗಳೇನು ಎಂಬುದನ್ನು ಈಗಲೇ ಹೇಳುವುದು ಯಾರಿಗೂ ಸಾಧ್ಯವಿಲ್ಲ. ಚಾಲುಕ್ಯ ರಾಜ್ಯದ ಪುನಃಪ್ರತಿಷ್ಠೆಗಾಗಿ ಪ್ರಯತ್ನಗಳು ನಡೆಯಬಹುದು. ಸರ್ವಾಧಿಕಾರಕ್ಕಾಗಿ ಸ್ಪರ್ಧೆ ಹೋರಾಟಗಳು ಮೊದಲಾಗಬಹುದು. ಇವೆರಡೂ ಅಸಂಭವವಲ್ಲ. ಮುಂದೆ ಒದಗಬಹುದಾದ ಅಶಾಂತ ಪರಿಸ್ಥಿತಿಯಿಂದ ಸಾಮಾನ್ಯ ಪ್ರಜೆಗಳು ಕಷ್ಟಕ್ಕೀಡಾಗುವರು. ಸುವ್ಯವಸ್ಥಿತವಾಗಿ ನಡೆಯುತ್ತಿದ್ದ ನಮ್ಮ ಬದುಕು ದುರ್ಭರವಾಗುವುದು. - “ಸರ್ವಾಧಿಕಾರಿ ಬಿಜ್ಜಳರಾಯರು ಮತ್ತು ಅವರ ಮಂತ್ರಿಮಂಡಲ, ಕಳೆದ ಕೆಲವು ತಿಂಗಳಿಂದ ತಳೆದಿದ್ದ ವಿಚಿತ್ರ ಮನೋಭಾವವೇನೆಂಬುದು ನಿಮಗೆಲ್ಲ ತಿಳಿದಿದೆ. ಅದರ ಫಲವಾಗಿ ಹರಳಯ್ಯ ಮಧುವರಸ ಶೀಲವಂತರ ಮೇಲೆ ವರ್ಣಸಂಕರದ ಮಿಥ್ಯಾಪವಾದ ಹೊರಿಸಲ್ಪಟ್ಟಿತು. ಧರ್ಮಾಧಿಕರಣದಲ್ಲಿ ವಿಚಾರಣೆ ನಡೆದು ಆ ಮೂವರು ಶರಣರು ಶೂಲಕ್ಕೇರಿಸಲ್ಪಟ್ಟರು. ಕಲ್ಯಾಣದ ಶೈವಮಠಗಳನ್ನು ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸಲು ಅಧಿಕಾರಿವಲಯಗಳಲ್ಲಿ ರಹಸ್ಯ ಮಂತ್ರಾಲೋಚನೆಗಳು ನಡೆದವು. ಘಟನೆಗಳಿಂದ ಭಯಭೀತರಾದ ಶರಣರು ಸಹ್ಯಾದ್ರಿಯ ವನಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿಕೊಂಡರು. ಮಹಮನೆಯ ಶರಣರು ಈ ವಿಚಾರದಲ್ಲಿ ನನ್ನ ಸಲಹೆ ಕೇಳಿದಾಗ ನಾನು, 'ಅನ್ನದ ಹಂಗಿಗಾಗಿ ಬದುಕುವುದಕ್ಕಿಂತ ಸಮಯಾಚಾರಕ್ಕಾಗಿ ಪ್ರಾಣಗಳನ್ನು ತ್ಯಜಿಸಲು ನಾವು ಸಿದ್ದರಾಗಬೇಕು. ಮರಣವೇ ಮಹಾನವಮಿ,' ಎಂದು ಉತ್ತರ ಕಳುಹಿಸಿದೆ. ಆ ಸಂದರ್ಭದಲ್ಲಿ ನಾನು ಕಳುಹಿಸಿದ ವಚನವಿದು : “ಜೋಳವಾಳಿನವ ನಾನಲ್ಲ. ವೇಳೆಯಾಳಿನವ ನಾನಯ್ಯ ! ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ.