ಪುಟ:ಕ್ರಾಂತಿ ಕಲ್ಯಾಣ.pdf/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೬ ಕ್ರಾಂತಿ ಕಲ್ಯಾಣ ವಿಚಿತ್ರ ಚಿಕಿತ್ಸಾ ವಿಧಾನ, ಲಾವಣ್ಯವತಿ ಶಿಲವಂತರ ವಿವಾಹ, ನಾರಣ ಕ್ರಮಿತನಿಂದ ಆ ವಿವಾಹಕ್ಕೆ ಪ್ರತಿಭಟನೆ, ಬಿಜ್ಜಳನಿಂದ ವರ್ಣಸಂಕರವನ್ನು ಕುರಿತ ಮನವಿಯ ವಿಚಾರಣೆ, ಬಸವೇಶ್ವರನ ದೇಶನಿರ್ವಾಸನ, ಈ ಘಟನೆಗಳನ್ನು ನಿರೂಪಿಸಿದೆ. ಆರನೆಯ ಮತ್ತು ಕೊನೆಯ ಭಾಗವಾದ, “ಕ್ರಾಂತಿ ಕಲ್ಯಾಣದಲ್ಲಿ ಬಸವೇಶ್ವರನ ನಿರ್ವಾಸಾನಂತರ ಕಲ್ಯಾಣದಲ್ಲಿ ತಲೆದೋರಿದ ನಿರಾಶೆಯ ಪರಿಸ್ಥಿತಿ, ತನ್ನ ವಿರುದ್ಧ ನಡೆಯುತ್ತಿದ್ದ ಸಂಚನ್ನು ಎದುರಿಸಲು ಬಿಜ್ಜಳನ ತಂತ್ರ ಶರಣಧರ್ಮದ ವಿನಾಶಕ್ಕಾಗಿ ಬಿಜ್ಜಳನ ನಿರ್ಧಾರ, ಮಧುವರಸಾದಿಗಳ ಕಗ್ಗೂಲೆ, ಜಗದೇಕಮಲ್ಲ-ಬೊಮ್ಮರಸರಿಂದ ಬಿಜ್ಜಳನ ವಧೆಗೆ ಹೂಡಿದ ಸಂಚು ಕಾರ್ಯಗತವಾದುದು, ಬಿಜ್ಜಳನ ದಬ್ಬಾಳಿಕೆ ದುರಾಡಳಿತಗಳಿಂದ ತಪ್ಪಿಸಿಕೊಳ್ಳಲು ಶರಣರು ಕಲ್ಯಾಣವನ್ನು ಬಿಟ್ಟು ಹೋದದ್ದು, ಅದರಿಂದ ಶರಣರಿಗಾದ ಕಷ್ಟ ಪರಂಪರೆಗಳು, ಪರಿಸಮಾಪ್ತಿ, ಈ ಪ್ರಸಂಗಗಳನ್ನು ವಿವರಿಸಿದೆ. ಇದರೊಡನೆ ಅಖ್ಯಾಯಿಕೆಯ ಉತ್ತರಾರ್ಧ ಮುಗಿಯುತ್ತದೆ. ಈ ಎಲ್ಲ ಘಟನೆಗಳ ಬಗೆಗೆ ಚರಿತ್ರೆ ಪುರಾಣ, ದಂತಕಥೆಗಳಲ್ಲಿಯೂ ಶರಣರ ವಚನಗಳೇ ಮೊದಲಾದುವುಗಳಲ್ಲಿಯೂ ದೊರಕುವ, ಅನೇಕ ಸಂದರ್ಭಗಳಲ್ಲಿ ಪರಸ್ಪರ ವಿಸಂವಾದಿಯಾದ ಉಲ್ಲೇಖಗಳನ್ನು ಕಲ್ಪನೆಯ ಆಶ್ರಯದಿಂದ ಸಮನ್ವಯಗೊಳಿಸಿ, ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ಪುನರಚಿಸಲು ಪ್ರಸ್ತುತ ಕಾದಂಬರಿಯಲ್ಲಿ ಪ್ರಯತ್ನಿಸಿದೆ. ಐತಿಹಾಸಿಕ ವ್ಯಕ್ತಿಗಳಾದ ಜಗದೇಕಮಲ್ಲ-ಬೊಮ್ಮರಸರೇ ಪುರಾಣ ದಂತಕಥೆಗಳ ಜಗದೇವ-ಮಲ್ಲಬೊಮ್ಮರೆಂಬುದು ಈ ಲೇಖಕರ ಗ್ರಹಿಕೆ. ಹೆಸರುಗಳನ್ನು ಪಲ್ಲಟಗೊಳಿಸಿ ವಾಸ್ತವವ್ಯಕ್ತಿಗಳನ್ನು ಸೂಚ್ಯವಾಗಿ ನಿರ್ದೆಶಿಸುವ ಕವಿ ಸಮಯವು ನಮ್ಮಲ್ಲಿ ಹಿಂದಿನಿಂದ ಪ್ರಚಾರದಲ್ಲಿರುವ ಸಂಗತಿಯು ನಮ್ಮ ಪ್ರಾಚೀನ ಸಾಹಿತ್ಯದ ಅಧ್ಯಯನದಿಂದ ತಿಳಿದುಬರುವುದು. - “ಕಲಚುರಿಗಳ ಕರ್ತೃತ್ವವು ಕಟ್ಟುವುದಕ್ಕಿಂತ ಕೆಡಿಸುವ ಕಾರ್ಯದಲ್ಲಿ ಹೆಚ್ಚಾಗಿ ವ್ಯಯವಾದುದರಿಂದ ಅವರ ಕೈವಾಡವನ್ನು ಕನ್ನಡ ನಾಡಿನ ಚಾರಿತ್ರಿಕ ವೃತ್ತಾಂತದಲ್ಲಿ ನಾವು ಮರೆಯುವಂತಿಲ್ಲ.” - “ಯುದ್ದಗಳೂ ಕಲಹಗಳೂ ಆಗಾಗ ನಡೆಯುತ್ತಿರುವಾಗಲೂ ಒಟ್ಟಿನ ಮೇಲೆ ಸುಖಶಾಂತಿಯಿಂದ ಬಾಳಿದ ಕನ್ನಡ ನಾಡಿನಲ್ಲಿ ಕಲಚುರಿಗಳ ಆಕ್ರಮಣದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಯಿತು. ರಾಜಕೀಯ ರಂಗದಲ್ಲಿ ಮಾತ್ರವಲ್ಲ, ಇತರ ರಂಗಗಳಲ್ಲಿಯೂ ಇದೇ ಕಾಲಕ್ಕೆ ಗಲಭೆಗಳಿದ್ದವು. ಹಿಂಸಾಮಯ ಅತಿಕ್ರಮಣದಿಂದ ಆರಂಭವಾದ ಕಲಚುರಿ ರಾಜ್ಯಕ್ರಾಂತಿ ಬಗೆಬಗೆಯ ರಾಜಕೀಯ