ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಸಂಧಿ ೪೦ ೪) ಕರ್ಣಾಟಕ ಕಾವ್ಯಕಲಾನಿಧಿ ಮುಡಿಯನೇವರಿಸುತ್ತ ಕಂಕಣ | ಝಡಪುಗಳ ಕರ್ಣಾಭರಣಗಳ | ಸಡಗರದ ವರಹಾರಹೀರಾವಳಿಯ ತಿರುಹುತ್ತ || ಕುಡಿತಗಂಗಳ ಚಪಳದೃಷ್ಟಿಯ | ಜಡಿವ ಕಬರೀಭಾರದಿಂದಿಹ | ಮಡದಿಯರು ಶೃಂಗಾರರಸದಿಂದಿರ್ದರೋಲಗದಿ | ಬಲನು ಸಾತ್ಯಕಿ ಮದನ ಸಾಂಬಕ | ನಲಘುಭುಜನನಿರುದ್ಧನುದ್ಧವ | ಜಲರುಹಾಕ್ಷನ ದಾಸನಕರಾದಿಯಾದವರು || ಹೊಳೆವ ಭೂಷಣಗಳ ದುಕೂಲಗ | ಟೊಲವು ಮಿಗಲಳವಡಿಸಿ ನಿಜಧನು || ಗಳ ಧರಿಸಿ ವರವೀರರಸದಿಂದೆಸೆದರೋಲಗದಿ | ಅಯದಜ್ಞಾನದಲ್ಲಿ ದೇವರ | ಚರಣಕಮಲವ ಸೇಡ' ಬದುಕದೆ | ತರಿಚುಗೆಡೆದರು ನರಕ ಪೌಂಡ್ರಕ ಮಗಧರೆಂಬವರು || ತರುಣರವರಾತ್ನ ಜರು ತಾವೆಂ || ದೊರಲಿಯಡೆಗೆಡದಿರ್ದಗನು ಹರಿ | ಪರಮಕರುಣಾರಸದಿ ನೋಡಲು ಕುಳಿತು ಎಸೆದಿಹರು || ಬಿರುದುಗಳನೊಕ್ಕಣಿಸುತೈತಹ | ಬಿರಿಸಿನತಿಬಲ ದೊರೆಗೊರೆಗಳಖ | ಳರು ನಿಚಾಯುಧಗಳನು ಝಳಪಿಸುತಹಹ ಎಂದೆನುತ || ಹರಿಹರಿದು ಬಂದಿರುತ ಕೈ ಮುಗಿ | ದರಸ ಬಿಡು ಬಿಡು ಮದಕರಿಯ ಮೇ | ಲರವರಿಸಬೇಕೆನುತ್ತ ದುಬುತರಸದಿ ನಿಂದಿಹರು|| ಬಲದ ಭಾಗದ ಭದ್ರಪೀಠಂ | ಗಳಲಿ ಭಾರ್ಗವರಾಮ ಕೌಶಿಕ | ಜಲರುಹಾಸನಪುತ್ರ ಜಯಮಿನಿ ಗೌತಮಾಗಸ್ಯ | ಕುಲದಲಧಿಕ ವಸಿಷ್ಟ ಗಾಲವ | ಸುಲಲಿತಾಂಗವ್ಯಾಸ ಮುನಿ ಕುಲ | ತಿಲಕರೊಪ್ಪಿದರಖಿಳಶಾಂತರಸಪ್ರಭಾವದಲಿ || ೪೨