ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ (ಸಂಧಿ ೩೦ 11 ಕರ್ಣಾಟಕ ಕಾವ್ಯ ಕಲಾನಿಧಿ ಕರೆಸೆ ಬಂದರು ರಾಮ ಸಾತ್ಯಕಿ | ಧುರವಿಜಯ ಪ್ರದ್ಯುಮ್ನ ಕೃತವರ್ಮ || ಕರು ಬ೨ಕ್ಯನಿರುದ್ದ ಸಾಂಬನು ಮುಖ್ಯ ಯಾದವರು || ಪರಮಹರುಷದೊಳಗಿಬರೊಡನತಿ | ತ್ವರಿತದಲಿ ನಡೆಯಿಂದಲೈದುತ || ಪುರವ ಹೊಕೊವಂಟಡರಿದನು ವರರತುನಮಯ ರಥವ || ಕ್ಷೀರಸಾಗರಮಥನ ಹರುಷದಿ | ಚಾರುವನವೈಭವಕೆ ತೆರಳಲು | ಸೇರಿತಾಗಪ್ಯಾಂಗನಾ ಒನವತಿವಿನೋದದಲಿ || ಭೂರಿ ಷೋಡಶಸಾಸಿರದ ಹೈಂ | ಗಾರನಾರೀವೃಂದ ಕಂಕಣ | ಚಾರುನೂಪುರಝಣಝಣಧ್ವನಿಯಿಂದಲೈದಿದರು || - ಅನಿಬರಿಗೆ ನವರತ್ನ ವಿರಚಿತ | ಕನಕಪಲ್ಲಕ್ಕಿಗಳ ತರಿಸನೆ | ಮನಸಿಜನ ಪಿತನಾಜ್ಞೆಯಲಿ ಸೇವಕರು ತತ್‌ಕ್ಷಣಕೆ | ಅನುವರಿತು ತಂದಿಡಲು ವನಿತಾ | ಜನರು ಮುದದಿಂದೇ' ನಡೆದುದು | ತನತನಗೆ ಕೆಳದಿಯರ ವಿವಿಧತರೋಪಚಾರದಲಿ || ಮುರಜ ಡಿಂಡಿಮ ಭೇರಿ ತಂಬಟ | ಸರಗೊಳಿಪ ಹೆಗ್ದಾಳೆ ಶಂಖಗ | ಳುರು ತರದ ಘನವಾದ್ಯ ರಭಸಗಳೆಲ್ಲ ವೊಂದಾಗಿ || ಶರಧಿಯೇ ಘೋಷವನು ನೆರೆ | ಮುರಿದು ದಿಕ್ಕಟ ಬಿರಿಯಲೊ ದರುವು | ವರರೆ ಪೇಳುವೆನೇನನಸುರಾಂತಕನ ಗಮನದಲಿ || ೬ನು ನರನಾಟಕವೊ ದೇವಗೆ | ಮಾನಿನಿಯರೊಡಗೂಡಿ ತಾ ನೆರೆ | ಮಾನುಷತ್ವದಲಖಿಳ ವಿಭವಾಸ್ಪದಕ ನೆಲೆಗೊಟ್ಟು || ಸಾನುರಾಗದಿ ಬರುತಿರಲು ವೈ | ಮಾನಿಕರು ಕೈಮುಗಿದು ಜಯ ಜಯ | ದಾನವಾಂತಕ ಕೃಷ್ಣ ಜಯಜಯ ಎಂದರಭ್ರದಲಿ || 4 ೨