ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ [ಸಂಧಿ ೧೦ ೧೧ ಕರ್ಣಾಟಕ ಕಾವ್ಯ ಕಲಾನಿಧಿ '. ಪರಮತತ್ವದ ಬಿತ್ತಿನೊಳಗಂ || ಕುರಗಳ್ಳೇದಾದಂತೆ ರಾಜಿಪ | ವರದ ಸದ್ಯೋಜಾತ ಘನತತ್ಪುರುಷ ನಾಮಕದ || (ು ರಿಪ ಘೋರೇಶಾನಮುಖದಲಿ || ಮೆರೆವ ಮಂಗಳಮೂರ್ತಿ ಪರಮೇ || ಶ್ವರನೆಸೆದನಗಜಾಸಮೇತದಿ ಸಭೆಯ ಮಧ್ಯದಲಿ || - ಉರಗಕುಂಡಲದುತ್ತು ಮಾಂಗದಿ | ಮೆರೆವ ಚಂದ್ರನ ಬಾಳನಯನದ | ಗರಳಕಂಠದ ವಂಕರಾಭಯಕರದ ತನುರುಚಿಯ || ಕರಿಮೃಗಾಜಿನವಸನದಂಗ | ಸ್ಪುರದ ಡಮರುಗ ಕಪಾಲದ | ವುರು ತ್ರಿಶೂಲಾಯುಧದಿ ರಂಜಿಸುತಿರ್ದನಗಜೇಶ | - ನಿಗಮವೇದಾಗಮ ಪ್ರಾಣಾ | ದಿಗಳು ಪಾತಕರಾಗೆಯಣಿಮಾ | ದಿಗಳು ತಾವನ ಚರರು ಸ್ಕೃತಿಗಳು ಕಂಡುಕೀವಾತ || ಜಗವ ನಿರ್ಮಿಸ ಬ್ರಹ್ಮನಂಗನೆ | ಬಗೆಬಗೆಯ ನುತಿಮಾಡುತಿರೆ ಮ | ಜಗದ ದೇವರದೇವನಿದ್ದನು ಸಭೆಯ ಮಧ್ಯದಲಿ || ಗಿರಿಜೆಯರಸನ ಸಭೆಯಲಿರುತಿಹ | ಕರಿವದನ ಬಲಯುತ ಷಡಾನನ | ಧುರವಿಜಯ ವರವೀರಭದ್ರಾಖ್ಯಖಿಳ ಭೂತಗಣ || ಹರನ ವಾಹನವಾದ ವೃಷಭೆ | ಶ್ವರನು ಮೆರೆದಿರಲಾಗ ಶೃಂಗೀ | ಶ್ವರನ ನಾಟ್ಯವದೆಸೆಯುತಿಹ ಸಮಯಕ್ಕೆ ನಡೆತಂದ || * ಕಂಡು ಪುಳಕಿತನಾಗಿ ಗಯನಾ | ಖಂಡಪರಶುವಿನಿದಿರಿನಲಿ ಸಲೆ || ದಿಂಡುಗೆಡಹಿದನೊಡಲ ಜಯಜಯಜಯನಿನಾದದಲಿ || ಕಂಡೆನೋ ಕರುಣಾರಸಾಬ್ಬಿ ಯ | ಕಂಡೆನೋ ಕಾರುಣ್ಯವರ್ತಿಯ | ಕಂಡೆನೆನುತೋಲಾಡಿ ಹರುಷದಿ ನುತಿಸಿದನು ಖಚರ | ೧೨ ೧೩ ೧೪.