ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ೧೫. ೧೭ ಗಯಚರಿತ್ರೆ ಶರಣುಗಿರಿಜಾನಾಥ ಪುರಹರ | ಶರಣು ಗಂಗಾಧರ ವೃಷಧ್ವಜ | ಶರಣು ಸುರಸಂರಕ್ಷದಕ್ಷ ಸುಶೀಕ್ಷಭಾಳಾಕ್ಷ್ಯ || ಶರಣು ಸುರನಗಚಾಪಶಂಕರ | ಶರಣು ರವಿಶಶಿವ ಲೋಚನ | ಶರಣು ಶರಣವಕುಲವಿಮೋಚನ ಶರಣು ಶರಣೆಂದ | ಶರಣು ನಾನಾ ಭೂತಪಾಲಕ | ಶರಣು ಡಮರುಗಶೂಲಹಸ್ತ್ರನೆ | ಶರಣು ಬಾಣಾಸುರನಿವಾಸಾಶ್ರಿತ ಜಗದ್ವಂದ್ಯ 11. ಶರಣು ವಾಣೀನಾಥಸನ್ನು ತ | ಶರಣು ವಿಶ್ವವರೂಥ ಶಂಕರ | ಸರಣು ಶಾಶ್ವತವರ್ತಿ ಸ್ಮರಹರ ಶರಣು ಶರಣೆಂದ || * ಶರಣು ಮೃತ್ಯುಂಜಯ ಸನಾತನ | ಶರಣು ನಿಗಮವಿದೂರ ಭರ್ಗನೆ | ಶರಣು ವರಶುಭ್ರಾಂಗ ರಜತಗಿರೀಶ ಭವನಾಶ | ಶರಣು ಭಕ್ಕಾಪಾಯನಘಕುಲ | ಗಿರಿಕುಲಿಶ ಸರ್ವೇಶ ಗೌರೀ | ವರಕೃಪಾನಿಧಿ ಶರಣು ಶರಣಾಗತನ ಸಲಹೆಂದ || - ವಿಶ್ವಮಯ ವಿಶ್ವೇಶ ರಾಜಿತ | ರಾಜಿತ | ವಿಶ್ವ ಪೂಜೆತ ವಿಶ್ವಮೂರ್ತಿಯೆ || ವಿಶ್ವ ವಿಶ್ರುತ ಜನಕಸುರಮುನಿಸನ್ನು ತಾಂಘ್ರಯುಗ | ಶಾಶ್ವತಾಮಲದೇಹ ವರಪರ | ಮೇಶ್ವರನೆ ಪುರಾರಿಯಭವನೆ | ವಿಶ್ವಪಾಲಕ ಶಿವನೆ ರಕ್ಷಿ ಪುದೆನುತಲೆಗಿದನು || ಏನು ಖಚರಾಧೀಶ ವದನವ | ದೇನು ಕಳೆಗುಂದಿದೆ ನಿರೋಧನ | ದೇನು ನಿನಗೊದಗಿದ ಮಹಾಯಸವೇನು ಲೋಕಗಳ | ನೀ ನಿಮಿಷದೊಳ್ ಚರಿಸಿ ಜಗ | ದೊಳು ಸಾನುರಾಗದಿ ಮರಳಿ ಬಪ್ಪ ಸ | ಮಾನಸಾಹಸಿಗಿನಿತು ದೈನ್ಯವದೇನು ಹೇಳೆಂದ || ೧ ೧೮ ೧೯