ಪುಟ:ಗಿಳಿವಿಂಡು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ನಿನ್ನಡಿದಾವರೆಯೆದೆಯಲಿ ಮನ್ಮನೋಭ್ರಮರಕದೆಯಲಿ ತೃಷಾಂತಮುಚ್ಚರಂ 11 ಹೆ೦ಗಸು

  • ನಾರಿ ನಾನೆಂದಕಟ ರೂಪಗೋಸಾಯಿ

ನನಗೀಯನೆನುವನೇಂ ದರ್ಶನದ ಭಾಗ್ಯಂ ? ಹೆಮ್ಮೊಗವ ನೋಡದೇನವನ ವೈರಾಗ್ಯಂ ? ಏತರೀ ವ್ರತವೋ !'-ಎಂದಳು ಮಿರಾಬಾಯಿ,

  • ಇವನಾದೊಡಂ ಗಂಡ ? ಗೋಕುಲದೊಳೆಲ್ಲ

ಹೆಂಗಸಲ್ಲದ ಗಂಡಸಿಲ್ಲಿ ಬರಸಲ್ಲ ! ಅರಿಯಲಿವನಿಲ್ಲಿಹುದನಟ್ಟದಿರಳಲ್ಲ ಬೃಂದಾವನದ ದೇವಿ ! ಇವನದೇಂ ಬಲ್ಲ ? ಬಲ್ಲವರ ಬಲ್ಲನೀ ಸಾಧುವೆಂದರಿವಂ ಜಗದೊಳಗದವರೆಲ್ಲ ಹೆಮ್ಮಕ್ಕಳಂದು ? ನನ್ನ ಹೃದಯೇಶ ಜಗದೀಶಸವನೂರುವಂ ಶ್ರೀಕೃಷ್ಣನೈಸೆ ಭುವನಕೆ ಗಂಡಸೊಂದು ? ರಾಧ ಯಾರೆಂಬುದಂ ಗೋಸಾಯಿ ಮರವಂರಾಧೆಯಹ ಮುನ್ನಮೇಂ ಗಿರಿಧಾರಿ ದೂರವಂ ? 11 ಆಶ್ವತ (ಅಕ್ಷರ)=ನಾಶವಾಗದ 1 ಚೈತನ್ಯದೇವನ ಪ್ರಖ್ಯಾತನೊಬ್ಬ ಶಿಷ್ಯ,