ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೬

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೪೬ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ಗೌರ್ಮೆಂಟ್ ಬ್ರಾಹ್ಮಣ

ದೊಡ್ಡ ಜಾತಿಯಲ್ಲಿ ಹುಟ್ಟಿ... ಜನಿವಾರವನ್ನೇ ಎಸಿದವ... ಸ್ವಜಾತಿಯ ವೈರುಧ್ಯಗಳನ್ನು ಖಂಡಿಸುವುದು ಫ್ಯಾಷನ್ ಮಾಡಿಕೊಂಡಿರುವ ಸಮಾಕಾಲೀನ ಸಂದರ್ಭದಲ್ಲಿ ನಿಮ್ಮ ಕೃತಿ, ನನ್ನಂಥವರನ್ನು ಸ್ವವಿಮರ್ಶೆಗೆ ಹಚ್ಚುತ್ತದೆ ಮತ್ತು ನೈಜತೆಯ ನೆಲೆಗೆ ಬರಲು ಎಚ್ಚರಿಸುತ್ತದೆ!

ನನ್ನ ಸ್ವಂತ ಚಿಕ್ಕ ಗ್ರಂಥಾಲಯಕ್ಕೆ ನಿಮ್ಮ ಕೃತಿ ಸೇರಿಸಿ ಹೆಮ್ಮೆ ಪಡುತ್ತಿದ್ದಾಗಲೇ ಕೆಲವೊಬ್ಬರ ಮುಖ ಸಪ್ಪೆಯಾದರೆ... ನನ್ನ ಮನೆಗೆ ದೊಡ್ಡಪ್ಪ ಅಣ್ಣ ತಾಯಿಯವರನ್ನು ನೋಡಲು ಬರುವ ಅಕ್ಕ ಪಕ್ಕದ ಬ್ರಾಹ್ಮಣರು 'ಈ ಪುಸ್ತಕ ಏಕೆ ನಿನ್ನ ಹತ್ತಿರ' ಎಂದಾಗ ನಾನು ಅದೇ ವೇಗದಲ್ಲಿ ನನ್ನ ಹತ್ತಿರ ಭಗವದ್ಗೀತೆ, ಕೃಷ್ಣಾವತಾರ, ರಾಮಾಯಣಗಳೂ ಇವೆ ಗೌರ್ಮೆಂಟ್ ಬ್ರಾಹ್ಮಣವೂ ಇದೆ ಎಂದು ಹೇಳಿ ಬಾಯಿ ಮುಚ್ಚಿಸಿದ್ದೇನೆ...'

ಪ್ರಮೋದ್ ತುರ್ವಿಹಾಳ್

ರಾಯಚೂರು