ಪುಟ:ಚಂದ್ರಮತಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒ೦ಭತ್ತನೆಯ ಪ್ರಕರಣ. ೪೯ ವಿನೋದವಾಗಿ ಸಂಚರಿಸುತ್ತಿರುವಾಗ ಉದ್ಯಾನವಾಲಕನು ಎತ್ತುಗಳನ್ನು ಹೂಡಿ ಏತದಿಂದ ನೀರನ್ನೆತ್ತಿ ಗಿಡಗಳಿಗೆ ತಿರುಗಿಸುತ್ತೆ ಜಾಗ್ರತೆಯಾಗಿ ಏತವನ್ನೆಳೆಯದಿದ್ದಾಗ ಆ ಎತ್ತುಗಳನ್ನು ತನ್ನ ಕೈಯಲ್ಲಿದ್ದ ಬಿದಿರುಕಡ್ಡಿಯಿಂದ ರಕ್ತಬರುವಂತೆ ಗಟ್ಟಿಯಾಗಿ ಹೊಡೆದನು. ಆಗ ನಮೂಾನದಲ್ಲಿಯೇ ಸಂಚ ರಿಸುತ್ತಿದ್ದ ಚಂದ್ರಮತಿಯು ಅವನ ಕ್ರೂರ ಕೃತ್ಯವನ್ನು ಕಂಡು ಬಹುಕೋ ಪಿಸಿ, ಇನ್ನೊಂದು ಬಾರಿ ಆ ಎತ್ತುಗಳನ್ನು ಅಷ್ಟು ಕ್ರೂರವಾಗಿ ಹೊಡೆದ ಪಕ್ಷದಲ್ಲಿ ತನ್ನ ತಂದೆಯೊಡನೆ ಹೇಳಿ ಅವನ ಕೆಲಸವನ್ನು ತೆಗೆಯಿಸಿಾಕು ವೆನೆಂದು ಹೆದರಿಸಿದಳು. ಚ೦ದ್ರಮತಿಗೆ ಆವುದಾದರೂ ನೂತನ ವಿಷಯ ವನ್ನು ಬೋಧಿಸಬೇಕೆಂದಾಲೋಚಿಸುತ್ತೆ ನಮಾನದಲ್ಲಿಯೇ ಇದ್ದ ವಿದ್ಯಾ ನಮುದ್ರನು, 'ಇದನ್ನೊಂದು ಲಕ್ಷವನ್ನಾಗಿ ಮಾಡಿಕೊಂಡು ಚಂದ್ರಮತಿ ಯನ್ನು “ ಅವನ ಮೇಲೆ ನೀನಿಷ್ಟು ಕೋನಮಾಡುವುದಕ್ಕೆ ಕಾರಣವೇನು? : ಎಂದು ಕೇಳಿ ದನು ಚಂದ್ರ - ನನಗೆ ಇದುವರೆಗೂ ಯಾರೂ ಹೇಳದಿದ್ದರೂ, ನಿವಾರಣ ವಾಗಿ ವತುವನ್ನು ಹೊಡೆಯುವುದು ನನ್ನ ಮನಸ್ಸಿಗೆ ಬಲುತನ್ನಾಗಿ ತೋರಿ ದುದರಿಂದ ಅವನ ಮೇಲೆ ಕೋಪಿಸಿಕೊಂಡೆನು. ಮನುಷ್ಯನಲ್ಲದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳ ಬೇಕಾದ ಧರ್ಮಗಳನ್ನು ಕುರಿತು ತಿಳಿಸುವುದಾಗಿ ತಾವ ಮೊದಲೇ ಅಪ್ಪಣೆ ಕೊಡಿಸಿರಿ. ಈಗ ಅದನ್ನು ನನ್ನ ವಿಷಯದಲ್ಲಿ ಅನುಗ್ರಹಿಸಿ ಅಪ್ಪಣೆ ಕೊಡಿಸುವಿರಾ? ಗುರು- - ಪಶು ಮೊದಲಾದ ಪ್ರಾಣಿಗಳು ನಮ್ಮ ಉವಯೋಗಕ್ಕೋ ಸುಗವೇ ನಿರ್ಮಿತವಾದುವುಗಳಾದರೂ, ಅವುಗಳು ನಮ್ಮ ಒಳಿಯಲ್ಲಿ ವಷ್ಟು ಕಾಲವೂ ಹೊಟ್ಟೆಯ ತುಂಬ ಆಹಾರವನ್ನು ಕೊಟ್ಟು ನೀರನ್ನು ಕುಡಿಯಿಸಿ, ಅವುಗಳ ಪೋಷಣೆಯನ್ನು ಕ್ರಮವಾಗಿ ವಿಚಾರಿಸಿಕೊಳ್ಳುತ್ತೆ ಪ್ರೇಮದಿಂದಾದರಿಸುವುದು ನಮಗೆ ಧರ್ಮವಾಗಿರುವುದು. ಯಾವಾಗಲೂ ಅವುಗಳಿ೦ದ ಶಕ್ತಿಗೆ ಮಾರಿದ ಕಾರ್ಯವನ್ನು ಮಾಡಿಸಲಾಗದು; ಪ್ರಾಣಿಗಳ ಮುದಿತನದಿಂದಾಗಲಿ, ಆಯಾಸದಿಂದಾಗಲಿ, ರೋಗದಿಂದಾಗಲಿ, ಆಹಾರಾದಿ ಗಳ ಲೋಪದಿಂದಾಗಲಿ, ಚೆನ್ನಾಗಿ ಕೆಲಸಮಾಡಲಾರದಂತಹಕಾಲದಲ್ಲಿ ವೇಗ ವಾಗಿ ನಡೆಯಲಿಲ್ಲವೆಂದೂ, ಕೆಲಸಮಾಡಲಿಲ್ಲವೆಂದೂ ಅವುಗಳನ್ನು ಹೊಡೆ