ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹದಿನಾಲ್ಕನೆಯ ಪ್ರಕರಣ.
೭೧


ಹುತ್ತದೊಳಗಣಿಂದ ಒಂದು ನಾಗರಹಾವು ಹೊರಕ್ಕೆ ಬಂದು ಆ ರಾಜಕುಮಾರನ ಕಾಲನ್ನು ಕಚ್ಚಿತು. ತತ್‌ಕ್ಷಣವೇ ಲೋಹಿತಾಸ್ಯನು " ಹಾ! ಮಾತೆಯೇ! " ಎಂದು ಕೂಗುತ್ತ, ಬಾಯಿಂದ ನೊರೆಸುರಿಯುತ್ತಿರಲು ನೆಲದಮೇಲೆ ಬಿದ್ದು ಮೂರ್ಛಗೊಂಡನು. ಆ ಬ್ರಾಹ್ಮಣ ಬಾಲಕರದನ್ನು ಕಂಡು ಭಯವಟ್ಟು ಒಡನೆಯೇ ಓಡಿಹೋಗಿ ಅಳುತ್ತ ಚಂದ್ರಮತಿಗೆ ಈ ಸಂಗತಿಯನ್ನು ತಿಳಿಸಿದರು. ಎಂದಿನಂತೆ ಮಗನು ಕಾಲಕ್ಕೆ ಸರಿಯಾಗಿ ಮನೆಗೆ ಬಾರದಿದ್ದುದರಿಂದಲೇ ಕಳವಳಗೊಂಡಿದ್ದ ಚಂದ್ರಮತಿಯು ಸಿಡಿಲಂತಹ ಈ ದುರ್ವಾರ್ತೆಯನ್ನು ಕೇಳಿ ಮೂರ್ಛಿತೆಯಾಗಿ, ಬಳಿಕ ಎಚ್ಚತ್ತು ಗಟ್ಟಿಯಾಗಿ ಅಳುತ್ತೆ, ಕಲಹಕಂಟಕಿಯಬಳಿಗೆ ಹೋಗಿ ಮಗನ ವಿಷಯವನ್ನು ತಿಳಿಸಿ, ಹೋಗಿ ನೋಡಿಕೊಂಡು ಬರುವುದಕ್ಕೆ ಅನುಜ್ಞೆಯನ್ನು ಕೇಳಲು ಕಠಿನ ಚಿತ್ತೆಯಾದ ಆ ಮದವತಿಯು ಕೆಲಕಾಲ ಏನೇನೋ ಹೇಳಿ ಮನೆಗೆಲಸಗ ಳೆಲ್ಲವೂ ಮುಗಿಯುವವರೆಗೂ ಹೋಗಕೂಡದೆಂದು ನಿರ್ಬಂಧಗೊಳಿಸಿದಳು. ಆ ಉತ್ತಮಾಂಗನೆಯು ಉಕ್ಕಿ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊ೦ಡು ತಾಳ್ಮೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಮನೆಗೆಲಸಗಳನ್ನು ಮಾಡಿ, ತರುವಾಯ ಕಲಹಕಂಟಕಿಯಿಂದ ಅಪ್ಪಣೆಯನ್ನು ಪಡೆದು, ಗಾಡಾಂಧಕಾರದಲ್ಲಿ ಒಬ್ಬಳೇ ಹೊರಟು ಬ್ರಾಹ್ಮಣ ಬಾಲಕರು ತಿಳಿಸಿದ ಕುರುಹಿನಿಂದ ಹುಡುಕುತ್ತ ಆಲದಮರದಬಳಿಗೆ ಹೋಗಿ, ಅಲ್ಲಿ ನಿದ್ರಿಸುತ್ತಿರುವವ ನ೦ತೆ ನೆಲದಮೇಲೆ ಮಲಗಿದ್ದ ಲೋಹಿತಾಸ್ಯನನ್ನು ಕಂಡು ಎದೆಯನ್ನು ಬಡಿದುಕೊಳ್ಳುತ್ತೆ ಸ್ವಲ್ಪ ಕಾಲ ಅಳುತ್ತಿದ್ದು, ಅಷ್ಟರಲ್ಲಿ ಸ್ವಲ್ಪ ಧೈರ್ಯವನ್ನು ತಂದುಕೊಂಡು, ಮುಂದೆ ಮಾಡಬೇಕಾದ ಕಾರ್ಯವನ್ನಾಲೋಚಿಸುತ್ತ, ಲೋಹಿತಾಸ್ಯನು ಮೃತನಾದನೆಂದು ನಿಷ್ಕರ್ಷಿಸಿ ಆ ರಾತ್ರಿಯೇ ದಹನ ಸಂಸ್ಕಾರವು ನಡೆಯಬೇಕಾದುದರಿಂದ, ಸುತ್ತಮುತ್ತಲೂ ಇದ್ದ ತೋಪಿನಲ್ಲಿ ಕಾಷ್ಟಗಳನ್ನು ಆಯ್ದು ಹೊರೆಕಟ್ಟಿ ತಲೆಯಮೇಲೆ ಹೊತ್ತುಕೊಂಡು, ಮಗನನ್ನು ಹೆಗಲಮೇಲೆ ಹೊತ್ತುಕೊಂಡು ಪ್ರೇತಭೂಮಿಗೆ ಹೊರಟಳು. ನಡುಹಗಲಲ್ಲಿಯಾದರೂ ಮನೆಯನ್ನು ಬಿಟ್ಟು ಎಂದೂ ಹೊರಕ್ಕೆ ಹೊರಡಲರಿಯದಿದ್ದ ಈ ಸುಕುಮಾರಿಯು ನಿಶಾಸಮಯದಲ್ಲಿ ಒಂಟಿಯಾಗಿ ಅರಣ್ಯ ಮಾರ್ಗದಲ್ಲಿ ಮಿತಿಮೀರಿದ ದುಃಖದಿಂದ ನಡೆಯುತ್ತ, ಪಿತೃಭೂಮಿಯನ್ನು