ಪುಟ:ಚಂದ್ರಶೇಖರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಚಂದ್ರಶೇಖರ. ಶೇಖರನು ನವಾಬನಿಗೆ ವರ್ತಮಾನವನ್ನು ಕೊಡಬೇಕೆಂದು ಅಪೇಕ್ಷಿಸಿದನು. ಅದಕ್ಕೆ ರಮಾನಂದಸ್ವಾಮಿಯು ನಿಷೇಧಮಾಡಿ, ನಾನು ಅಲ್ಲಿಗೆ ಸಮಾಚಾರವನ್ನು ಕಳುಹಿಸು ವೆನೆಂದು ಹೇಳಿದನು. ಚಂದ್ರಶೇಖರನು ಗುರುವಿನ ಅಪ್ಪಣೆಯುಪಕಾರ ಒಂದು ಸಣ್ಣ ದೋಣಿದುನ್ನು ಮಾಡಿಕೊಂಡು ಅವಿಯಟನನ್ನು ಅನುಸರಿಸಲಾರಂಭಿಸಿದನು, ರಮಾ ನಂದಸ್ವಾಮಿಯು ಅದು ಮೊದಲ್ಗೊಂಡು ಶೈವಲಿನಿಯನ್ನು ಕಾಶ್‌ಗೆ ಕಳುಹಿಸುವುದಕ್ಕೆ ಉಪಯುಕ್ತರಾದ ಶಿಪ್ಪರನ್ನು ಹುಡುಕುತಲಿದ್ದನು. ಆಗ ಅಕಸ್ಮಾತ್ತಾಗಿ ಶೈವಲಿ ನಿಯು ಬೇರೆ ದೋಣಿಯಲ್ಲಿ ಇಂಗ್ಲೀಷರ ಸಂಗಡ ಹೋಗಿದ್ದಳೆಂದು ತಿಳಿದುಬಂದಿತು. ರಮಾನಂದಸ್ವಾಮಿಗೆ ವಿಷವುಸಂಕಟಕ್ಕೆ ಬಂದಿತು, ಈ ಪಾಪಿಖ್ಯೆಯು ಫಾಸ್ಟರನನ್ನು ಅನುಸರಿಸಿದಳ, ಅಥವಾ ಚಂದ್ರಶೇಖರನನ್ನು ಅನುಸರಿಸಿ ಹೋದಳೆ ? ಎಂದು ಶಂಕಿ ಸುತ್ತ, ರಮಾನಂದಸ್ವಾಮಿಯು, ಚಂದjಶೇಖರನಿಗೋಸ್ಕರ ನಾನು ಪುನಃ ಸಂಸಾರದಲ್ಲಿ ಲಿಪ್ತನಾಗಬೇಕಾಗಿ ಬಂದಿತೆಂದು ಹೇಳಿಕೊಂಡು ಅವನೂ ಅದೇ ಮಾರ್ಗವಾಗಿ ಹೊರ ಟನು, - ರಮಾನಂದಸ್ವಾಮಿಯು ಚಿರಕಾಲದಿಂದೆ ಸದವಪದಲ್ಲಿ ದೇಶಗಳನ್ನೆಲ್ಲಾ ಭ್ರಮಣ ಮಾಡಿದ್ದನು. ಅವನು ಉತ್ಪದನಾಜಕನು. ಅವನು ನದಿಯತೀರದ ಮಾರ್ಗ ವಾಗಿ ಕಾಲುಹಾದಿಯಲ್ಲಿ ಶೀಘ್ರವಾಗಿ ಶೈವಲಿನಿಯ ಹಿಂದೆ ಬಂದನು. ಅವನು ವಿಶೇಷ ವಾಗಿ ಆಹಾರ ನಿದ್ರಾ ವಶೀಭೂತನಾಗಿ ಇರಲಿಲ್ಲ. ಅಭ್ಯಾಸಬಲದಿಂದ ಅದನ್ನೆಲ್ಲಾ ವಕ ಮಾಡಿಕೊಂಡಿದ್ದನು. ಕ್ರಮವಾಗಿ ಬಂದು ಚಂದ್ರಶೇಖರನನ್ನು ಹಿಡಿದನು. ಚಂದ್ರ ಶೇಖರನು ತೀರದಲ್ಲಿ ರಮಾನಂದಸ್ವಾಮಿಯನ್ನು ಕಂಡು, ಅಲ್ಲಿಗೆ ಬಂದು ಅವನಿಗೆ ಪ್ರಣಾ ವವನ್ನು ಮಾಡಿದನು. ರವಾನಂದಸ್ವಾಮಿಯು, ಬಂದು ತಡವೆ ನವದೀಪಕ್ಕೆ ಹೋಗಿ, ಅಧ್ಯಾಪಕರ ಸಂ ಗಡ ಶಾಸ್ತು ಲಾಸಮಾಡಬೇಕೆಂದು ಇಸ್ಮವುಳ್ಳವನಾಗಿದ್ದೇನೆ-ನಡೆ, ನಿನ್ನ ಸಂಗಡ ಬರು ವೆನೆಂದು ಹೇಳಿ, ರಮಾನಂದಸ್ವಾಮಿಯು ಚಂದ್ರಶೇಖರನ ದೋಣಿಗೆ ಹತ್ತಿದನು. - ಇಂಗ್ಲೀಷರು ಅಲ್ಲಿ ತಮ್ಮ ಹಡಗುಗಳಿರುವದನ್ನು ಕಂಡು ತಮ್ಮ ದೋಣಿಗಳನ್ನು ಅಲ್ಲಿ ಕಟ್ಟಿ ದಡಕ್ಕೆ ಹತ್ತಿದರು. ಶೈವಲಿನಿಯು ದೋಣಿಯೂ ಅಲ್ಲಿಯೇ ನಿಂತಿತು. ಇದ ನ್ನೆಲ್ಲಾ ಅವರಿಬ್ಬರೂ ಮರೆಯಲ್ಲಿ ನಿಂತು ನೋಡಿದರು, ನೋಡುತ್ತಿದ್ದ ಹಾಗೆ, ಪ್ರತಾ ಪನೂ ಶೈವಲಿನಿಯ ನೀರಿನಲ್ಲಿ ಧುಮುಕಿ ಈಜಿಕೊಂಡು ಪಲಾಯನವಾಗಿ ಹೋದರು. ಅಲ್ಲಿಂದ ದೋಣಿಯನ್ನು ಹತ್ತಿ ಪಲಾಯನವಾದರು, ಇವರೂ ದೋಣಿಯನ್ನೇರಿ ಅವರ ಚಿನ್ನಪ್ಪಿದರು. ಅವರು ಸ್ವಲ್ಪ ದೂರದಲ್ಲಿ ದೋಣಿಯನ್ನು ಕಟ್ಟಿದುದನ್ನು ಕಂಡು ಇವರೂ ಅದಕ್ಕೆ ಸ್ವಲ್ಪ ದೂರದಲ್ಲಿ ದೋಣಿಯನ್ನು ಕಟ್ಟಿದರು ರಮಾನಂದಸ್ವಾಮಿಯು ಅತ್ಯಂತ ಬುದ್ಧಿವಂತನು. ಚಂದ್ರಶೇಖರನನ್ನು ಕುರಿತು, ಈಜುವಾಗ ಪ್ರತಾಪನೂ ಕೈವಲಿನಿಯ ಇಬ್ಬರೂ ಮಾತನಾಡುತಲಿದ್ದುದು ಏನು ? ಗೊತ್ತಾಯಿತೆ ? ಎಂದು ಕೇಳಿದನು.