ಪುಟ:ಚಂದ್ರಶೇಖರ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಚೆದೆ. ಹು ಕು ೦. NAN ಇಂಗ್ಲೀಷರ ಸಂಗಡ ಯುದ್ಧವು ಆರಂಭವಾಯಿತು, ಅದರೊಂದಿಗೆ ಮಿಾರ ಕಾಸಿಮನ ಅಧಃಪತನವೂ ಆರಂಭವಾಯಿತು, ಮಾರಕಾನಿವನು ಮೊದಲೇ ಕಾಟ್ಟಾ ಯುದ್ಧದಲ್ಲಿ ಸೋತಿದ್ದನು. ಅನಂತರ ಗುರಗ ೧ಖಾನನ ಅಪನಂಬಿಕೆಯು ಪ್ರಕಾಶವಾಯಿತು. ನವಾಬನಿಗೆ ಇದ ಭರವಸೆಯು ನಿರ್ವಾಣವಾಗಿ ಹೋಯಿತು, ನಬಾಬನಿಗೆ ಈ ಸವ ಯದಲ್ಲಿ ಎದ್ದಿಯು ವಿಕೃತವಾಗುತ್ತ ಬಂದಿತು. ಬಂದಿಗಳಾಗಿದ್ದ ಇಂಗ್ಲಿಷಗನ್ನು ವಧೆ ಮಾಡಕೆಂದು ಯೋಚಿಸಿದನು. ಇತರರ ವಿಚಾರದಲ್ಲಿ ಅಹಿತಾಚರಣೆಯನ್ನು ಮಾಡ ಲಾರಂಭಿಸಿದನು. ಈ ಸಮಯದಲ್ಲಿ ಮಹಮ್ಮದತಕಿರು ಕಳುಹಿಸಿದ ದಳನಿಯು ಸಮಾಚಾರವು ಬಂದು ಮುಟ್ಟಿತು. ಜ್ವಲಂತವಾದ ಅಗ್ನಿಯಲ್ಲಿ ೯ ತಾಹುತಿಯಾದ ಹಾಗಾಯಿತು. ಇಂಗ್ಲೀಷರ ಅವಿಶ್ವಾಸಿಗಳಾದರು. ಸೇನಾಪತಿಯು ಅವಿಶ್ವಾಸಿಯೆಂದು ಬೋಧೆಯಾಯಿತು. ರಾಜ್ಯಲಕ್ಷ್ಮಿಯು ವಿಶ್ವಾಸಘಾತಿನಿಯಾದಳು. ಇನ್ನು ಸಹಿಸುವು ದು ಅಸಾಧ್ಯ ವಿಾರಕಾಸಿಮನು ಮಹಮ್ಮದತಕಿಗೆ, ದಳನಿಯನ್ನು ಇಲ್ಲಿಗೆ ಕಳುಹಿಸಿ ಪ್ರಯೋಜನವಿಲ್ಲ. ಅಲ್ಲಿಯೇ ಅವಳಿಗೆ ವಿಷವನ್ನು ಕೊಟ್ಟು ವಧ ಮಾಡುವುದೆಂದು ಬರೆದು ಕಳುಹಿಸಿದನು. ಮಹಮ್ಮದತಕಿಯು ತಾನೇ ಕೈಯಲ್ಲಿ ವಿಷಗಾತ್ರವನ್ನು ತೆಗೆದುಕೊಂಡು ದಳ ನಿಯ ಬಳಿಗೆ ಹೋದನು, ಪಳನಿಯು, ಮುಹಮ್ಮದತಕಿಯು ಹತ್ತಿರೆ ಎಂದುದನ್ನು ಕಂಡು ವಿಸ್ಮಿತೆ ಯಾದಳು, ಕೊಪಛರಿತೆಯಾಗಿ, ಇದೇನು, ಖಾಸಾಹೆಬ ! ನನಗೆ ಅವನಾದೆ ಮಾಡುವಿರೇನು ? ಎಂದಳು. ಮಹಮ್ಮದತಕಿಯು ತಲೆಯನ್ನು ಕೈಯಿಂದ ಹೊಡೆದುಕೊಂಡು, ಅದೃಷ್ಯ ! ಅದು ತಮ್ಮ ವಿಚಾರದಲ್ಲಿ ಅಪ್ರಸನ್ನವಾಗಿದೆ ಎಂದನು. ದಳನೀ-(ನಕ್ಕು ) ತನಗೆ ಯಾರು ಹೇಳಿದರು ? ಮಹಮ್ಮದತಕಿ - ತಾವು ನಂಬಲಾರಿರಿ. ಪರವಾನೆಯೇ ಬಂದಿದೆ. `ದಳನೀ-ತಾವು ಪರವಾನೆಯನ್ನು ಓದಲಾರದೆ ಹೋದಿರಿ. ಮುಹಮ್ಮದತಕಿಯು, ನವಾಬನು ರ್ಸೈ ಮೊಹರು ಮಾಡಿ ಕಳುಹಿಸಿದ್ದ ಪರವಾನೆ ಯನ್ನು ಓದುವುದಕ್ಕೆ ಕೈಗೆ ಕೊಟ್ಟನು. ದಳನಿಯು ಪರವಾನೆಯನ್ನು ಓದಿ, ನಕ್ಕು, 19 |