ಪುಟ:ಚಂದ್ರಶೇಖರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಭಾಗ. ܧܩ

  • * *

ಆ ಡುವುದು, ಯುವತಿಯರ ಅಳ ಕಾಜಿಯನ್ನ ಕಂಡರೆ ಅದನ್ನು ಸ್ವಲ್ಪ ಊದಿ ಹಾರಿಸಿ ಬಿಟ್ಟು ಓಡಿಹೋಗುವುದು, ನೀವು ನಕಾರೋಹಿಗಳಾಗಿ ನೋಡಿದರೆ, ಈ ಕ್ರೀಡಾಶೀಲ ವಾದ ಹುಡುಗಾಟದ ಮಧುರವಾದ ಪ್ರಕೃತಿಯನುಳ್ಳ ಪ್ರಭಾತವಾಯುವು ಸಣ್ಣ ಸಣ್ಣ ದಾದ ತರಂಗವಾಲೆಗಳಿಂದ ನದಿಯನ್ನು ಸುಸಜ್ಜಿತವಾಗಿ ಮಾಡುತ್ತಿರುವುದು, ಆಕಾಶ ದಲ್ಲಿರುವ ಒಂದೆರಡು ಕಪ್ಪಾದ ಮೇಘಗಳನ್ನು ಹಾರಿಸಿಬಿಟ್ಟು, ಆಕಾಶವನ ಪರಿಷ್ಕಾರ ಮಾಡುತಲಿರುವುದು, ತೀರದಲ್ಲಿರುವ ವೃಕ್ಷಗಳನ್ನು ಮೃದುವೃದುವಾಗಿ ಕುಣಿಸುತಲಿರು ವುದು, ಸ್ನಾನಾವಗಾಹನದಲ್ಲಿ ನಿರತರಾದ ರಮಣಿಯರ ಸಂಗಡ ಮಧುರವಾಗಿ ರಹಸ್ಯ ವಾಗಿ ಏನೇನೋ ಮಾತನಾಡುತಲಿರುವುದು, ತರಣಿದು ತಲದಲ್ಲಿ ಪ್ರವೇಶಮಾಡಿ ನಿಮ್ಮ ಕಿವಿಗೆ ಇಂಪಾಗುವಂತೆ ಮಧುರವಾದ ಸಂಗೀತವನ್ನು ಹಾಡುವುದು, ನೀವು ಮನಸ್ಸಿ ನಲ್ಲಿ ವಾಯುವು ಬಹಳ ಧೀರವ ಕೃತಿಯುಳ್ಳವುದೆಂದೂ, ಬಹಳ ಗಂಭೀರವಾದ ಸ್ವಭಾವ ವುಳ್ಳದುದೆಂದೂ, ಬಹಳ ಆನಂಬರ ಶೂನ್ಯವಾದುದೆಂದೂ, ಮತ್ತು ಸದಾ ಆನಂದಕರವಾ ದುದೆಂದೂ ತಿಳಿಯುವಿರಲ್ಲವೆ ! ಸಂಸಾರದಲ್ಲಿ ಎಲ್ಲರೂ ಹೀಗಾಗಿದ್ದರೆ ಏನುತಾನೇ ಆಗದು ? ಹಡಗನ್ನು ದಡದಿಂದ ಬಿಚ್ಚವಿಟ್ಟು ನೋಡಿರಿ ! ಬಿಸಿಲು ಏರುವುವು- ನೀವು ನೋಡುತಲ ರುವಹಾಗೆ ತರಂಗನಾಲೆಗಳ ಮೇಲೆ ಬಿಸಿಲ ಪ್ರಜ್ವಲಿಸುವುದು, ಅವು ಮೊದಲಿಗಿಂತಲೂ ದೊಡ್ಡ ದೊಡ್ಡವಾಗುವುವು, ರಾಜಹಂಸಗಳು ಅವುಗಳ ಮೇಲೆ ತೇಲಾಡುತ್ತ ಕುಣಿದಾ ದುತ್ತ ಹೋಗುತಲಿರುವುವು, ಸ್ಪು ನಮಾಡುತ್ತೆ ಅನ್ನವನರಾಗಿರುವ ಸುಂದರಿಯರ ಮಣ್ಣು ಕೊಡಗಳು ಅದರಮೇಲೆ ಸ್ಥಿರವಾಗಿ ನಿಲ್ಲಲಾರದೆ ಹೆಚ್ಚು ಕುಣಿದಾಡುವುವು. ಅಲೆ ಗಳು ಬಹಳ ಸ್ಪರ್ಧದುಳ್ಳವುಗಳಾಗಿ ಸು:ದರಿಯರ ಭುಜಗಳ ಮೇಲೆ ಹತ್ತಿ ಕೂಡು ವುವು. ಮತ್ತು ನೀರು ಬಿಟ್ಟ ತೀರಕ್ಕೆ ಬಂದ ಸುಂದರಿಯರ ಸಾಲಗಳ ಮೇಲೆ ಹೋಗಿ ಬೀಳುವುವು, ಬಿದ್ದು ತಲೆಯನ್ನು ಹೊಡೆದುಕೊಂಡು, ದೇಹಿ ಪರ ಪಲ್ಲವ ಮುದಾರಂ ! ಎಂದು ಮೊರೆಯಿಡುವುದು, ಕಟ್ಟಕಡೆಗೆ ಯಾವದೂ ಇಲ್ಲದಿದ್ದರೆ ಅವರ ಕಾಲುಗಳಲ್ಲಿ ರುವ ಅಲತೆಯು ರಂಗನ್ನು ತೊಳೆದು ಮೈಗೆಲ್ಲಾ ಬಳಿದುಕೊಳ್ಳುವುವು .ಆ ತಂಗಾಳಿಮಾ ಗಿದ್ದುದು ಕ್ರಮವಾಗಿ ಅದರ ಕೂಗು ಸ್ವಲ್ಪ ಸ್ವಲ್ಪವಾಗಿ ಹೆಚ್ಚು ಬರುವುದು. ಆಗ ಅದು ಸಾ ರಂಭದಲ್ಲಿದ್ದ ಆ ಜಯದೇವನಿಂದ ರಚಿತವಾದ ಗೀತದಹಾಗೆ ಇಂಪಾಗಿ ಭೈರವೀರಾಗದಲ್ಲಿ ಕಿವಿಯ ಹತ್ತಿರ ನುಡಿಸಿದ ವೀಣಾನಾದದಹಾಗಿರುವುದಿಲ್ಲ. ನೋಡುತ್ತಿ ದ ಹಾಗೆ ಆ ತಂಗಾರು ಬಿರುಗಾಳಿಯಾಗಿ ಎದ್ದು ಗರ್ಜನೆಮಾಡುವುದಕ್ಕೆ ಪ್ರಾರಂಭಿಸಿ, ತಾನೂ ಸಾಕ್ಷಾತೆ 3ಕೃಷ್ಣನಂತೆ ವೇಣುನಾದ ವಿನೋದನೆಂದೂ ತಿಕೃಷ್ಟ ನಿಗೆ ಯಾವ ಅಂಶದಲ್ಲಿಯೂ ಕಡವೆಯಿಲ್ಲವೆಂದೂ ಹೇ ಕೊಂಡು ಅಹಂಕಾರದಿಂದ ಹುಂ ಕಾರಮಾಡುತ್ತ, ತದ್ವಾರಾ ತರಂಗಗಳನ್ನೆಲ್ಲಾ ಉರುಳಾಗಿ ಎಬ್ಬಿಸಿ ತಲೆಕೆಳಗಾಗಿ ಕೆಡಹಿ ಕ್ರಮೇಣ ಅಂಧಕಾರವನ್ನು ತಂದುಹಾಕುವುದು-ಅನಂತರ ಅದು ಹಡಗುಗಳಿಗೆ ಪ್ರತಿ ಕೂಲವಾಗಿ ಅವುಗಳ ಮಾರ್ಗಕ್ಕೆ ಅಡ್ಡವಾಗಿ ಬಂದುನಿಲ್ಲುವುದು, ಹಡಗಿನ ತಲೆಯನ್ನು ಹಿಡಿದು ಕೆಳಗೆ ಬೊಗ್ಗಿಸುವುದು-ಅದಾಗದಿದ್ದರೆ ಹಡಗನ್ನು ಹಿಂದುಮುಂದಾಗಿ ಮಾಡಿರಿ