ಪುಟ:ಚತುರ್ಥಾಂಶಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ 6. © ಟ ) • 6 ವ ಬ ವಿಷ್ಣು ಪುರಾಣ [ಅಧ್ಯಾಯ ತನ-ಶ್ರುತಿ! ವಿಕೃತಕ ಕ್ಷುರ್ವಿಕೃತೋಮುಖಃ ' ಎಂಬ ಪ್ರತ್ಯುಕ್ತ ಪ್ರಭಾ ವವನು, ಜ್ಞಾನಬಿರ್ಯಾದಿಗಳನು ಅಜೇಯವು ; ಆವ ಪರಮಾತ್ಮನ ಅಪಹೃತ ನಿತ್ಯವಿಭೂತಿಗೆ ಕಲಾಮುಹೂರ್ತ ಮೊದಲಾದ ಸ್ವರೂಪವುಳ್ಳ ಕಾಲವು ಪರಿಣಾಮ ಕಾರಣವಾಗದೆ ಇದ್ದಿತು ; +ಆವ ಪರಮಾತ್ಮಂಗೆ ಕರ್ಮಕೃತವಾದ ದೇವಾದಿ ನಾಮರೂಸ ಜನನಾಶರಹಿತವು ಆಗಿ ಇದ್ದಿ ತೋ ; ಆವ ಪರಮಾತ್ಮನ ಅನುಗ್ರಹದಿಂದ ನಾನು ಸಕಲ ಭೂತವಾತಗಳ ಸೃಷ್ಟಿ ಕತುಣವಾಗಿ, ಆವ ಪರಮಾತ್ಮನ ಕೋಪದಿಂದ ರುದ್ರನು ಸಂಹಾರ ಕರ್ತುವಾದನು ; ಅವ ಪರವಾಸದೇವನು ತಾನೇ ಸೃಷ್ಟಿ ಸಂಹರ್ತೃಗಳಾದ ನಮ್ಮ ಮಧ್ಯದಲ್ಲಿ ಸ್ಥಿತಿಕಾರಣನಾದ ವಿಷ್ಣುವಾಗಿ ಅದನು ; ಆವ ಪುರು ಪನು ನನ್ನ ರೂಪವನ್ನಾಶ್ರಯಿಸಿದವನಾಗಿ ಜಗತೃಷ್ಟಿಯಂ ಮಾಡುತ ಲಿದ್ದಾನು; ಆವ ಪರಮಾತ್ಮನು ವಿಷ್ಣು ರೂಪಿಯಾಗಿ ಸ್ಥಿತಿ ಕರ್ತೃವಾಗಿ ಇರು ತಲಿದ್ದಾನು ; ಆವ ಪರಮಾತ್ಮನು ರುದ್ರರೂಪದಿಂದ ಈ ಪ್ರಸಂತವನು ಕಬಳಸುತಲಿದ್ದಾನು ; ಮತ್ತು (ಟಿನ ಪರಮಾತ್ಮನು ಅನಂತ ರೂಪದಿಂದ ಸಮಸ್ಯ ಪ್ರಪಂಚವನ್ನು ಧರಿಸಿ ಇದ್ದಾನು ; ) ....... ..ಆವ ಪರಮಾ ತ್ಯನೇ ಇಂದ್ರಾದಿ ರೂಪದಿಂ ಜಗತ್ತಂ ಪರಿಪಾಲಿಸುತಿದ್ದಾನು; ಚಂದ್ರಸೂರ ರೂಪುಗಳಾಗಿ ಜಗತ್ತಿನ ಅಂಧಕಾರನಿವೃತ್ತಿಯಂ ಮಾಡುತಲಿದ್ದಾನು ; ಸಮಸ್ಯವಾದ ಪ್ರಜೆಗಳ ಸಾಕಾದಿಗಳಿಗಾಗಿ ಅಗ್ನಿ ಸ ರೂಪವನಾಶ್ರಯಿಸಿ ದ್ಯಾನು ; ಮತ್ತು ಆವ ನಿತ್ಯನಾದ ಪರಮಾತ್ಮನು ಭೂರೂಪವಾಗಿ ಸಮಸ್ಯ ಲೋಕಂಗಳನು ಭರಿಸುತಲಿದ್ದಾನು ; ಮತ್ತು ವಾಯುರೂಪಿಯಾಗಿ ಚೇತ ನಾಚೇತನಗಳ ಚಲನವ್ಯಾಪಾರವನು ಮಾಡುತಲಿದ್ದಾನು ; (ಜಲರೂಪಿ ಯಾಗಿಯ ಅನ್ನ ರೂಪಿಯಾಗಿಯ ಸಮಸ್ತ ಲೋಕಗಳಿಗೆ ತೃಪ್ತಿಮಾ ಡುತಲಿದ್ದಾನು ;) ಆಕಾಶರೂಪಿಯಾಗಿ ಜಗದ ಕ್ಷಣದಲ್ಲಿ ತತ್ಪರನಾಗಿ ವಿಜ್ಞಾಪನೆ-+, ಈ ಭಾಗಗಳಲ್ಲಿರುವ ವಾಕ್ಯಗಳು ಈ ಮಾತೃಕೆಯಲ್ಲಿ ಬಹುವ್ಯಸ್ತ * ಗಳಾಗಿದ್ದುವು ; ಅವನ್ನು ಕೈಯಲ್ಲಾದಮಟ್ಟಿಗೆ ಸಂಸ್ಕೃತ ಮೂಲಪ್ರತಿಯನ್ನು ಇಟ್ಟು ಕೊಂಡು ಕ್ರಮಪಡಿಸಿರುತ್ತೇವೆ.

  1. ಅದು ಕಾರಣ ಆ ಸಮಸ್ತ ಶರೀರೆಗಳು ಆತನ ಅಂಶಗಳು-ಎಂದು ಒಂದು ವಾಕ್ಯವಿದೆ, ಇದು ಸಂಸ್ಕೃತಪ್ರತಿಯನ್ನು ನೋಡಿದ್ದಲ್ಲಿ ಇಲ್ಲಿಗೆ ಅನುಚಿತ ವೆಂದು ತೋರುತ್ತದೆ.

m.

= = =

- er - - pr 4