ಪುಟ:ಚತುರ್ಥಾಂಶಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ವಿಷ್ಣು ಪುರಾಣ [ಅಧ್ಯಾಯ ತಾ೦ ತೃಪ್ಲಾಂ ಸಂತ್ಯಜೇತ್ ಪ್ರಾಜ್ಞಸ್ಸು ಖೇನೈವಾಭಿದೂರತೇ || ಜೀರಂತಿ ಜೀಲ್ಯತಃ ಕೇಶಾ ದ೦ತಾ ಜೀರಂತಿ ಜೀರತಃ || ಧನಾಶಾ ಜೀವಿತಾಶಾ ಚ ಜೀರತೋಪಿ ನ ಜೀಲ್ಯತಃ ! ) (ಟೇಕು- ಈ ವಿಷಯಭೋಗಗಳಿಂದ ಕಾವಸಂಕಲ್ಪವು ಉಪಶಾಂ ತಿಯನೆಯ ದುದಾಯಿತು, ಅದೆಂತೆಂದೊಡೆ-ಹವಿಸ್ಸಿನಿಂದ ಅಗ್ನಿಯು ಹೇಗೆ ತೃವಿಯನೆಯ್ದ ದೋ, ಹಾಗೆ ಭೂಮಿಯಲ್ಲಿರುವ ವಿಹಿ ಯವ ಹಿರಣ ಪಶು ಸ್ಟಿಯರುಗಳ ವಿಷಯದಲ್ಲಿ ಆರಿಗೂ ಆಸೆ ಪಲ್ಯಾಪವಾಗದು. ಆದು ದಿಂದ ತೃಸ್ಥೆಯನ್ನು ಪರಿತ್ಯಾಗ ಮಾಡಬೇಕು.) ಸಕಲ ಭೂತಂಗಳ ಯ ಸಮದೃಷ್ಟಿ ಭಾವವು ಆವ ಪರಂತಕ್ಕೆ ಹುಟ್ಟದೋ, (ಆವರೆಗೆ) ಆ ಪುರುಷಂಗೆ ಸುಖವಿಲ್ಲ; ಆಮೇಲೆ ಸಮದೃಷ್ಟಿ ಭಾವನಾಗಲು ಅವಂಗೆ ಸಕಲ ದಿಕ್ಕುಗಳು ಸುಖಂಗಳ ಪುವು, ಆವುದಾನೊಂದು ತೃಪೈಯು ದುರ್ಮತಿಗ ೪೦ದ ಬಿಡಲಶಕ್ಯವಾಗಿ ಜೀರ್ಣವಾಗದೆ ಇದ್ದಿತೋ, ತಾದೃಶ ತೃಪೆಯನ್ನು ಪ್ರಜ್ಞನಾದ ಪುರುಷನು ಬಿಡುವುದಿಂದ ಸುಖದಿಂ ವರ್ಧಿಸುವನು. ಇನ್ನು ಜರಾವಸ್ಸ ಪಾಸವಾದಲ್ಲಿ ಪುರುಷನ ಕೇಶಗಳು ದಂತಗಳು ಜೀರ್ಣವಾಗು ತಲಿದ್ದಾವು; ಬದುಕಬೇಕೆಂಬ ಆಸೆಯ ಧನಕಾಂಕ್ಷೆಯ ಜೀರ್ಣವಾಗದೆ ಇದ್ದೀತು, ವಿಷಯಾಸಕ್ಕೆ ಚಿತ್ರನಾದ ನನಗೆ ಸಹಸ್ರ ವರ್ಷ ಪೂರ್ತಿಯಾ ಯಿತು. ಹಾಗಾದರೂ ದಿನದಿನಕೆ ತೃಪ್ಲೇ ಹುಟ್ಟು ತಲಿದ್ದೀತು. ಅದಿಂದಲೀ ತ್ಥಿಯಂ ತ್ಯಜಿಸಿ ಪರಬ್ರಹ್ಮನಲ್ಲಿ ಚಿತ್ರವನಿರಿಸಿ ಬಿಡಲ್ಪಟ್ಟ ಸುಖದುಃಖ ವುಳ್ಳವನಾಗಿ, ಮಮತಾಬುದ್ದಿ ಯಂ ಬಿಟ್ಟು, ಮೃಗಂಗಳೊಡನೆ ಸಂಚರಿಸು ವೆನು” ಎಂದು ವಿಚಾರಮಾಡಿ, ಪುರುವಿಗೆ ಯೌವನವ ಕೊಟ್ಟು ಆತನ ಜರೆಯಂ ತೆಗೆದುಕೊಂಡು, ಅವನಂ ರಾಜ್ಯದಲ್ಲಿ ಅಭಿಷೇಕವಂ ಮಾಡಿ, ತಾನು ತಸವಂ ಮಾಡಬೇಕೆಂಬ ಇಚ್ಛೆಯಿಂದ ವನವಂ ಪ್ರವೇಶಿಸಿದನು. ಉಳಿದ ಮಕ್ಕಳಲ್ಲಿ ಆಸ್ಟ್ರೇಯನಿಕ್ಕಂ ದುರ್ವಸುವಿಗೆ, ಪಶ್ಚಿಮದಿಕ್ಕಂ ದುಷ್ಯನಿಗೆ, ಉತ್ತರದಿಕ್ಕಂ ಅನುವಿಂಗೆ, ದಕ್ಷಿಣದಿಕ್ಕಲ ಯದುವಿಗೆ, ನಿಯಾ ಮಿಸಿ, (ಅವರನ್ನು ಮಂಡಲನ್ನಪರನ್ನಾಗಿ ಮಾಡಿ, ಪುರುವನ್ನು ಸರಪ್ರಥಿ ವೀಪತಿಯನ್ನಾಗಿ) ಪ್ರತಿಷ್ಠೆ ಮಾಡಿ, ತಾನು ವನದಲ್ಲಿ ತಪೋನಿಷ್ಠನಾದನು. ಎಂಬಲ್ಲಿಗೆ }ಪರಾಶರರು ಮೈತ್ರೇಯಂಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ದಶಮೋಧಾಯಂ. 8 ಣ m