ಪುಟ:ಚೆನ್ನ ಬಸವೇಶವಿಜಯಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#೬ ಚನ್ನಬಸವೇಶವಿನಯಂ (Fಂದ ) [ಅಧ್ಯಾಯ ಇವು ಏತಕ್ಕೆ ? ಸುಮ್ಮನೆ ಯಜ್ಞಯಾಗಾದಿಗಳ ಹವಿಸ್ಸನ್ನುಂಡು ತೃ ಏಪಟ್ಟಿರಬಹುದಲ್ಲವೆ ? ಯದ್ಧ ದಲ್ಲಿ ಸೋಲುಗೆಲವುಗಳು ಯಾರಧೀನವಾ ಗಿರುವುವು ? ಶಿವಕುಮಾರನಿಗಾದರೂ ಆಗಬೇಕಾದುದು ಆಗದೆ ಬಿಟ್ಟಿತೆ? ಅದುಕಾರಣ, ನಾನು ಈಗ ಹಿಮವತ್ಪರ್ವತದ ತಪ್ಪಲಿಗೆ ಹೋಗಿ ಅಲ್ಲಿ ಶಿವನನ್ನು ಕುರಿತು ತಪಸ್ಸನ್ನಾಚರಿಸಿ, ಸತ್ತವರನ್ನು ಬದುಕಿಸುವ ಸಂಜೀ ವಿನೀಮಂತ್ರವನ್ನು ಉಪದೇಶ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಹೊರಟುಹೋಗಿ ತಪಸ್ಸಿನಲ್ಲಿದ್ದನು. ಈ ಸುದ್ದಿಯನ್ನು ರಾಕ್ಷಸಗುರು ವಾದ ಶುಕ್ರನು ಕೇಳಿ, ಬೃಹಸ್ಪತಿಯು ಕುಳಿತಿದ್ದ ಬಳಿಗೆ ಹೋಗಿ, ಇದಿ ರಾಗಿ ಕುಳಿತು, ಸಂಜೀವಿನೀಮಂತ್ರವನ್ನು ಪಡೆಯಬೇಕೆಂದು ತಾನೂ ಶಿವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸುತ್ತಿದ್ದನು. ಹೀಗೆ ಹಲವುಕಾ ಲವಿರಲು, ಶಿವನು ಪ್ರಸನ್ನನಾಗಿ, ಎಲೆ ಗುರುಶುಕ್ರರುಗಳಿರಾ ನಿಮ್ಮ ಜ್ಞಾ ರ್ಥವೇನು ? ಏತಕ್ಕೆ ತಪಸ್ಸನ್ನು ಮಾಡುವಿರಿ ? ಎಂದು ಕೇಳಲು, ಅವ ರೀರ್ವರೂ ತಮ್ಮ ತಮ್ಮ ಬಯಕೆಗಳನ್ನು ವಿಜ್ಞಾವಿಸಿದರು. ಅವರಿಬ್ಬರ ಇವೂ ಒಂದೇ ಆಗಿರುವುದನ್ನು ಈಶ್ವರನು ಕೇಳಿ, ಇನ್ನು ನಾನು ಇವರಿಗೆ ಮಂತ್ರೋಪದೇಶವನ್ನು ಮಾಡದೆ ಇರುವುದಕ್ಕೂ ಆಗುವುದಿಲ್ಲ, ಮಾಡಿಬಿಟ್ಟರೆ ದೈತ್ಯರಿಂದ ಮಹಾಬಾಧೆಯು ಸಂಭವಿಸದೆ ಹೋಗುವು ದಿಲ್ಲ; ಅದಕ್ಕಾಗಿ ಒಂದುಪಾಯವನ್ನು ಮಾಡಿ ಇವರಿಂದ ಅಸಾಧ್ಯವೆನಿಸಿ ಬಿಡಬೇಕೆಂದು ಯೋಚಿಸಿ, ಅವರಿಬ್ಬರ ಹೆಸರನ್ನೂ ಹಿಡಿದು ಕರೆದು, ನಿಮ್ಮ ಸ್ವಾರ್ಥವನ್ನು ನಾನು ಕೊಡುತ್ತೇನೆ, ನಾನು ಹೇಳಿದಂತೆ ಮಂತ್ರ ಪುರಶ್ಚರಣೆ ಮಾಡಲು ನಿಮ್ಮಿಂದ ಸಾಧ್ಯವಾದರೆ ಮಾಡಿರಿ; ಹೇಗೆಂದರೆಚಚ್ಛಿಕವಾಗಿ ಒಂದು ದೊಡ್ಡ ಕುಂಡವನ್ನು ತೆಗೆಯಬೇಕು, ಆಗರಲ್ಲಿ ದೊಡ್ಡ ಬೆಂಕಿಯನ್ನೊಟ್ಟಬೇಕು, ಅದರೊಳಗೆ ನಿವಿಬ್ಬರೂ ನುಗ್ಗಿ ಉರಿ ಯ ಮಧ್ಯದಲ್ಲಿ ತಲೆಯನ್ನು ಕೆಳಗು ಮಾಡಿ ಆಕಾಶದಲ್ಲಿ ನಿಶ್ಚಲರಾಗಿ ನಿಂ ತು, ಅಗ್ನಿಯ ಹೊಗೆಯನ್ನು ಉಚ್ಚಾನಿಸುತ್ತ ಈ ಮಂತ್ರಪುನಶ್ಚರಣೆ ಯನ್ನು ದಿವ್ಯಸಹಸ್ರವರ್ಷಗಳವರೆಗೆ ಮಾಡುತ್ತಿದ್ದರೆ ಸಂಜೀವಿನಿ ಮಂ ಇದು ನಿಮಗೆ ಸಿದ್ಧಿಸುವುದು ಎಂದು ನುಡಿದನು, ಅದನ್ನು ಕೇಳಿ ಬೃಹ ಸ್ಪತಿಯು ಗಡಗಡನೆ ನಡುಗಿ, ನನ್ನಿಂದಿದು ಅಸಾಧ್ಯವೆಂದು ಹೇಳಿ, ಶಿವನ