ಪುಟ:ಚೆನ್ನ ಬಸವೇಶವಿಜಯಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

→ws -4 Ab ಚನ್ನಬಸವೇಈಜಯಂ (ಕಾಂಗ ) ಅಧ್ಯಾಹು' ಆಗ ರಾಕ್ಷಸನ ಸೈನಿಕರು ಹೊರಗಿದ್ದವರ ಮೇಲೆ ಬಿದ್ದು ಎರಡೆ ರಡು ಹೋಳಾಗಿ ಸೀಳಿ, ಶುಂಭಾಸುರನ ಅಪ್ಪಣೆಯ ಮೇರೆ ಆಳೋರಿ ಯನ್ನು ಹತ್ತಲನುವಾದರು. ಕೋಟೆಯ ಮೇಲೆ ದಿಕ್ಷಾಲಕರು ನಿಂತು ಕೆಳಗಿನಿಂದೇರಿಬರುವ ರಾಕ್ಷಸರಮೇಲೆ ಬಾಣವರ್ಷವನ್ನು ಕರೆಯುತ್ತಿ ದ್ದರು. ಅವರೇಟಗೆ ರಾಕ್ಷಸರು ಉರುಳುರುಳಿ ಅಗಳಿನೊಳಗೆ ಬೀಳು ತಿದ್ದರು. ಆಗ ಶುಂಭನು ತನ್ನ ಸೈನಿಕರನ್ನು ಜರೆದು ಹೀಯಾಳಿಸಲು ಕಲಿಭಟರುಗಳು ಬಾಣಹತಿಗೆ ಹೆದರದೆ, ಬಿದ್ದವರನ್ನೇ ಒಟ್ಟಿ ಮೆಟ್ಟಲ ನ್ನು ಮಾಡಿ ಕೋಟೆಗಳನ್ನೇರಿ ಮೇಲಿದ್ದ ದೇವತೆಗಳ ತಂಡವನ್ನೆಲ್ಲ ತರಿದು ತರುಬಿ ಅಬ್ಬರಿಸಿ, ಮಹಾಥೇರೀಗವವನ್ನು ಮಾಡಿದರು. ಈ ಧ್ವನಿಯನ್ನು ಕೇಳ ಪ್ರತಿಗೃಹದಲ್ಲಿ ಹೆಂಗುಸರು ಬಾಗಿಲುಗಳನ್ನು ಮುಚ್ಚಿ, ಒಳಗೆ ಅ ಡಗಿಕೊಂಡು ಕಣ್ಣಾಯ್ದಿಡು, ಬೆರಲುಗಳನ್ನು ನಟಕಗೊಳ್ಳುತ್ಯ, ನ ಸ್ವಾಭರಣಾದಿಗಳನ್ನು ಮುಚ್ಚಿಡುತ್ತ, ಕಳವಳಿಸುತ್ತಿದ್ದರು. ಇನ್ನು ಕೆಲವರು “ ರಾಕ್ಷಸರು ತಮ್ಮ ವಸ್ತುಗಳನ್ನು ಕೊಟ್ಟುಬಿಡಿರೆಂದು ನ್ಯಾ ಯವಾಗಿ ಹೇಳಿಕಳುಹಿದ್ದರೆ ಈ ಪಾಪಿ ದೇವೆಂದ್ರನು ಕೊಟ್ಟು ಬಿಡದೆ ನಮ್ಮನ್ನೆಲ್ಲ ಈ ಅವಸ್ಥೆಗೆ ಗುರಿಮಾಡಬಹುದೆ ? ಅಯ್ಯೋ ! ಕೆಟ್ಟೆವಲ್ಲ !?? ಎಂದು ಆಡಿಕೊಳ್ಳುತ್ತಿದ್ದರು. ಆ ಒಂದು ಕಡೆ ಬೀದಿಯಲ್ಲಿ ರಾಕ್ಷಸ ಸ್ಕೋನವು ಕೋಟೆಯನ್ನು ಕೆಡಹುತ್ತಿರುವರೆಂಬುದನ್ನು ಕೇಳಿ, ದೇ ವೇಂದ್ರನು ಕೆರಳ, ಆಯುಧವನ್ನೆತ್ತಿ ಹೊರಟನು. ದೇವತೆಗಳು ಕಿಡಿಗ ಣ್ಣಾದರು. ದಿಕ್ಖಾಲಕರೆಲ್ಲರೂ ಮತ್ತೊಂದು ವೇಳೆ ರೋಪಾವೇಶದಿಂದ ಆಯುಧಗಳನ್ನು ರುಳಪಿಸುತ್ತ ರಾಕ್ಷಸಸ್ತೋಮದಮೇಲೆ ಬಿದ್ದು , ಇರಿ ದು ಕೊಳ್ಳುತ್ತ ಬಂದರು. ಸಿಕ್ಕಿದವರ ಜುಟ್ಟುಗಳನ್ನು ಹಿಡಿದು ತಿರುಹಿ ಕೋಟೆಯಿಂದಾಚೆಗೆ ಬಿಸುಡುತ್ತಿದ್ದರು. ತಲೆಗಳನ್ನು ಒಡೆದು ಹೊಟ್ಟೆ ಗಳನ್ನು ಬಗಿದು, ನಡುಗಳನ್ನು ಮುರಿದು, ಎದೆಯನ್ನು ನೀ೪, ರಾಕ್ಷಸ ಸೈನ್ಯವನ್ನು ನಾಶಗೊಳಿಸಿ, ಕೋಟೆಯಿಂದ ಎಲ್ಲರನ್ನೂ ಕೆಡಹಿದರು. ಆರೊಳಗೆ ಸಂಧ್ಯಾಕಾಲವಾಯಿತು. ರಾಕ್ಷಸರು ಕೋಟೆಯ ಸುತ್ತ ಲೂ ಬೀಡನ್ನು ಬಿಟ್ಟು ಪಟ್ಟಣವನ್ನು ಮುತ್ತಿಗೆ ಹಾಕಿದ್ದರು. ಇತ್ಯ ಪಟ್ಟಣದೊಳಗೆ ದೇವೇಂದ್ರನು ಚಿಂತಾಕುಲನಾಗಿ ಸಕಲ ದಿಕ್ಕಾಲಕ