ಪುಟ:ಚೆನ್ನ ಬಸವೇಶವಿಜಯಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nt ೧೫] ಜಲಧರ ಸಹಾರ ದಲು ಪರಸ್ಪರವಾಗಿ ಮನಸೂ ನೋಟವೂ ಕಾದಾಡ ಹತ್ತಿದುವು. ಬಳ ಕ ಕೈಕತ್ತಿಗಳು ಹೋಳ ಹೊಳೆದು ಹೊರಾಡಲಾರಂಭಿಸಿದುವು ರೋಷ ದಿಂದ ಉಭಯಪಕ್ಷದ ಮುಂದಾಳುಗಳಲ್ಲಿ ಪರವಶತೆಯುಂಟಾಯಿತು. ಆನೆ ಆನೆಗಳೂ ಕುದುರೆ ಕುದುರೆಗಳ ರಥ ರಥಗಳೂ ಪ್ರತಿಭಟಿಸಿ ಕಾ ದಾಡನಿಂತುವು. ಆನೆಗಳ ಬೃಂಹಿತವೂ, ಕುದುರೆಗಳ ಹೇಷಾಧ್ವನಿಯೂ, ರಥಗಳ ಚೀತ್ಕಾರವೂ, ಕಾಲಾಳುಗಳ ಭುಜಾಗ್ವಾಲನ ವೀರನಾದಗಳೂ, ಇಂಜಿನಿಯ ಠಂಕಾರವೂ, ಖಡ್ಗಗಳ ಝಣತ್ಕಾರವೂ, ಕಾಳೆಗಳ ಟೀಂ ಕಾರವೂ, ಭೇರಿಗಳ ಭಾಂಕಾರವೂ, ಒಡನೆ ಕೂಡಿ, ರಣಾಂಗಣವನ್ನು ಶಬ್ಲಾಯಮಾನವಾಗಿ ಮಾಡಿದ್ದುವು, ವಾದೃಧನಿಯು ಪ್ರತಿಕ್ಷಣದಲ್ಲಿಯ ಸೈನಿಕರನ್ನು ಉತ್ಸಾಹಗೊಳಿಸಿತು, ಕಾಲಾಳು ಒಬ್ಬರನ್ನೊಬ್ಬರು ಹೆಣಗಿ ಎಡಗೈಯಲ್ಲಿ ಮುಂದಲೆಯನ್ನು ಹಿಡಿದು ಜಡಿದು ಬಗ್ಗಿಸಿ ಬಲ ಗೈಯ ಕತ್ತಿಯಿಂದ ಕತ್ತರಿಸುತ್ತಲೂ, ನಡುವಿಗೆ ನುಗ್ಗಿ ತಬ್ಬಿ ಸುತ್ತಿ ಕೆಡಹಿ ಮೇಲೆ ಕುಳಿತು ಸುರಗಿಯಿಂದ ಹೊಟ್ಟೆಯನ್ನು ಬಗಿಯುತ್ತಿಲೂ, ಮೇಲೆಬೇಳವ ಪ್ರಹಾರಕ್ಕೆ ಗುರಾಣಿಯನ್ನೊಡ್ಡಿ ತಪ್ಪಿಸಿಕೊಳ್ಳುತ್ತ ಲೂ, ಕಾಲ್ವೆ ಸಿಕ್ಕಿದ ಹೆಣಗಳನ್ನು ಓರೆನೂಕಿ ಬಲವಾಗಿ ನಿಂತು ಪ್ರತಿಭ ಟನನ್ನು ಮದಲಿಸುತ್ತಲೂ, ಮಗ್ಗುಲಿಗೆ ಬಂದವನನ್ನು ಹಿಡಿದು ಕೌಂ ಕುಳಲ್ಲಿ ಯುಕುತ್ತಲೂ, ಕೈಗೆ ನಿದವನನ್ನು ಬಾಣದಿಂದ ಹೊಡೆದು ಕೆಡಹುತ್ತಲೂ ಕ್ಷಣಕಾಲದಲ್ಲಿ ವೀರಾವೇಶದಿಂದ ಬುಗುರಿಯಂತೆ ತಿರು ಗುತ್ತಲೂ, ಕೋಪಾವೇಶದಿಂದ ತರಿದಾಡುತ್ತಲೂ, ಯುದ್ಧಾಂಗಣವನ್ನು ರುಂಡಮುಂಡ ರಕ್ತಮಾಂಸಾದಿಗಳಿಂದ ತುಂಬಿಸಿಬಿಟ್ಟರು. ಹೀಗೆ ಕಾಲಾ ೪ಳು ಕಾದಾಡಿ ನಷ್ಟವಾಗಲು, ಹಿಂದಣ ಸೈನ್ಯವು ಮುಂದೆ ಸಾಗಿ, ಆನೆ ಗಳು ಆನಗಳಮೇಲೂ, ಕುದುರೆಗಳು ಕುದುರೆಗಳಮೇಲೂ, ತೇರುಗ ಳು ತೇರುಗಳಮೇಲೂ, ಭಟರು ಭಟರಮೇಲೂ ಬಿದ್ದು ಹೋರಾಡಲಾರಂ ಭಿಸಿದರು. ಬಳಿಕ ಮಹಾತುಮುಲಯುದ್ಧವೆಸಗಿ ಅತ್ಯಂತ ಭೀಕರವೂ ಆವೂ ಆಯಿತು, ಕ್ಷಣಮಾತ್ರದಲ್ಲಿ ಸಕಲ ಸೇನೆಯ ರಕ್ತವೃಷ್ಟಿ; ಯಿಂದ ನೆನದಿತು. ಕಣ್ಣ ಮುಚ್ಚಿ ತೆರೆಯುವುದರೊಳಗೆ ಲಯವಾಗಹತ್ತಿ ತು, ಆನೆಗಳು ಕಡಿವೊಡೆದು ಬೆಟ್ಟಗುಡ್ಡಗಳಂತೆ ಒಬ್ಬೊಟ್ಟಲಾಗಿ ಬಿ

  • ಬ ಬ