ಪುಟ:ಚೆನ್ನ ಬಸವೇಶವಿಜಯಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೆನ್ನಬಸವೇನಬಿಜಯಂ (ಕಾಂಡ೨) [ಅಧ್ಯಾಯ ಶಿವನ ಮುಂದುಗಡೆಗೆ ಸರಿಸಿ, ಧನುಸ್ಸನ್ನು ನಾದ ಮಾಡಿ, ಬಾಣವನ್ನು ತೊಡಿಸಿ, ಶಿವನನ್ನು ಕುರಿತು ನೀನೆಯೊ ಮಹೇಶನೆಂಬುವನು ? ಎಂದು ಕೇಳುತ್ತ, ಒಂದರಹಿಂದೊಂದಾಗಿ ಅಗಣಿತವಾದ ಬಾಣಗಳನ್ನು ಅತಿ ಕರ ಚಮತ್ಕಾರದಿಂದ ಪ್ರಯೋಗಿಸುತ್ತ ಬಂದನು. ದಾನವನ ಅದ್ಭುತಕರತ ಮತ್ಕಾರವನ್ನು ಶಿವನು ಕಂಡು, ಮತ್ತೊಂದು ಬಾಣವನ್ನು ತಾನು ಪ್ರ ಯೋಗಿಸಿ, ಲೀಲಾಮಾತ್ರದಿಂದ ರಾಕ್ಷಸನ ಬಾಣಗಳನ್ನೆಲ್ಲ ನಡುದಾರಿಯ ಲೈ ಛೇದಿಸಿ ಅವನನ್ನು ಬೆರಗುಗೊಳಿಸಿದನು. ಜಲಂಧರನಾದರೋ 'ಆಹಾ! ಈಗ ನಿನ್ನ ಪೌರುಷವನ್ನು ನೋಡುತ್ತೇನೆ, ಮತ್ತೆ ನನ್ನ ಬಾಣಗಳನ್ನು ಕಡಿ, ನೋಡುವ ?” ಎಂದು ಹೇಳಿ, ರೋಷಾವೇಶದಿಂದ ಬಾಣಾಸಾರ ವನ್ನು ಕರೆದು, ಸಕಲ ದಿಕ್ಕುಗಳನ್ನೂ ತುಂಬಿಬಿಟ್ಟನು. ಶಿವನು ಪ್ರತಿಬಾ ಇವನ್ನೆಸೆದು ಅವುಗಳನ್ನೆಲ್ಲ ಕತ್ತರಿಸಿದುದಲ್ಲದೆ ಜಲಂಧರನ ಅತುಲಪ್ರತಾ ಸಕ್ಕೆ ಮೆಚ್ಚಿ ತಲೆದೂಗಿ, ಪ್ರಸನ್ನನಾಗಿ, ನಿಜರೂಪವನ್ನು ತೋರಿಸಿದನು. ಆ ಕೂಡಲೇ ದಾನವೇಶ್ವರನು ತನ್ನ ಹೃದಯದಲ್ಲಿ ಧ್ಯಾನಗೋಚರವಾಗಿ ಕುವ ಪರವಸ್ತುವೇ ಮುಂದೆ ಬಂದು ನಿಂತಿರುವುದನ್ನು ನೋಡಿದನು, ಬಾ ಣಗಳನ್ನು ಬಿಸುಟು ದೀರ್ಘದಂಡವಾಗಿ ನಮಸ್ಕರಿಸಿ, ಭಯಭಕ್ತಿಯಿಂದ ಪರಶಿವನನ್ನು ಸ್ತುತಿಸಿದನು. ಶಿವನಾದರೆ- ಮಗನೆ ! ನಿನ್ನ ಭಕ್ತಿಗೆ ನಾನು ಮೆಚ್ಚಿರುವೆನು, ನಿನ್ನ ಇಷ್ಟಾರ್ಥವೇನು ? ಕೇಳೆಂದು ನುಡಿದನು. ಆಗ ದೈತ್ಯನು- “ ಸ್ವಾಮೀಾ ! ದುರಹಂಕಾರದಿಂದ ಅಜ್ಜನಾದ ನಾನು ಸಚ್ಚಿದಾನಂದಸ್ವರೂಪನಾದ ನಿನ್ನ ಮೇಲೆ ಕೈಮಾಡಿದೆನು, ಈ ನನ್ನ ದು ಸ್ಮ ಶರೀರವನ್ನು ನೀನು ಈಗಳೇ ನೀ೪ ಬಿಸುಟು ನನ್ನ ಆತ್ಮನನ್ನು ನಿನ್ನೊ ಡನ ಐಕ್ಯಮಾಡಿಕೊ ” ಎಂದು ಪ್ರಾರ್ಥಿಸಿದನು. ಆಗ ಶಿವನು ಆ ಪಾ. ರ್ಥನೆಯಂತೆಯೇ ಅವನಿಗೆ ಸಾಯುಜ್ಯಪದವಿಯನ್ಶಿಯಲು ಕೃಪೆಮಾಡಿ ದನು. ತನ್ನ ಪಾದವ ಹೆಬ್ಬೆರಳಿನಿಂದ ಭೂಮಿಯಮೇಲೆ ಒಂದು ಚಕ ವನ್ನು ಬರೆದು ಅದನ್ನು ತನ್ನ ಮೂರು ಕಣ್ಣಿನಿಂದಲೂ ನೋಡಿದನು, ಸೂ ರಚಂದ್ರರೇ ಆ ಚಕ್ರದ ಹಲ್ಲುಗಳೂ, ಅಗ್ನಿಯೇ ಅದರ ಸುತ್ತುಪಟ್ಟಿ ಯೂ ಆದುವು. ಆ ಚಕ್ರವನ್ನು ಶಿವನು ಎತ್ತಿ ಜಲಂಧನ ಕೊರಲಿಗೆ ಪ್ರಯೋಗಿಸಲು, ಥಟ್ಟನೆ ಶಿರಸ್ಸನ್ನು ಛೇದಿಸಿತು. ಅವನ ಆತ್ಮವು ಜ್ಯೋ