ಪುಟ:ಚೆನ್ನ ಬಸವೇಶವಿಜಯಂ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೃಸಿಕ್ಕ ಹಕಲೀಲೆ ಯಿತು, ದೇವತೆಗಳೆಲ್ಲರೂ ನಿರ್ವtಗಳಾದೆವೆಂದು ಸಂತೋಷಗೊಂಡರು. ಇತ್ತ ನೃಸಿಹನು ದೈತ್ಯನ ರಕ್ತವನ್ನು ಮಿತಿಮೀರಿ ಪಾನಮಾಡಿದುದರಿಂದ ಅತ್ಯಂತ ಮತ್ತನಾಗಿ, ಹಿರಣ್ಯಕಶಿಪುವಿಗಿಂತಲೂ ಎಂಟುಭಾಗ ಹೆಚ್ಚಾಗಿ ಜಗತ್ತಿಗೆ ಹಿಂಸೆಗೊಡುತ್ತಿರಲು, ಈ ಸಂಕಟದಿಂದ ಬೇಸತ್ತ ದೇವತೆ ಗಳು ಮತ್ತೆ ಶಿವನ ಬಳಿಗೆ ಓಡಿಬಂದು, ಅಡ್ಡ ಬಿಟ್ಟು, C ಜೀಯಾ ! ಒಬ್ಬ ರಾಕ್ಷಸನ ಹಿಂಸೆಯನ್ನು ತಾಳಲಾರದೆ ತಮ್ಮ ಬಳಿಗೆ ಬಂದು ದೂ ರು ಹೇಳಿಕೊಳ್ಳಲಾಗಿ ತಾವು ವಿಷ್ಣುವನ್ನು ಕಳುಹಿಕೊಟ್ಟುದು, ಹಳೆಯ ರೋಗವನ್ನು ಪರಿಹರಿಸುವುದಕ್ಕಾಗಿ ಕೊಟ್ಟ ಔಷಧವು ಹೊಸದೊಂದು ರೋಗವನ್ನು ಹುಟ್ಟಿಸಿದಂತೆಯೂ, ಮೊದಲ ಗಂಡನು ಕೆಟ್ಟವನೆಂದು ಬಿಟ್ಟು ಮತ್ತೊಬ್ಬನನ್ನು ವರಿಸಲು, ಅವನು ಮಾತು ಮಾತಿಗೆ ಪ್ರಹರಿಸು ವ ಕಟುಗನಾದಂತೆಯೂ, ರಾಕ್ಷಸನ ಭಯವು ನಮಗೆ ತಪ್ಪಿದರೂ ಅವನಿ ಗಿಂತಲೂ ಮಿಗಿಲಾಗಿ ಹಿಂಸಿಸುವ ನಿಚ್ಛಾಕೃತಿಯ ಭೂತವು ನನ್ನನ್ನು ಬಾಳಗೊಡಿಸದೆ ಇರುವುದು ?” ಎಂದು ಬಿನ್ನೆಸಿಕೊಂಡರು. ಶಿವನು ಕೇಳಿ ನಕ್ಕು, “ ಹೆದರಬೇಡಿರಿ ಹೋಗಿರಿ, ನೃಸಿಹ್ನನ ಬಾಧೆಯನ್ನು ತ ಪ್ಪಿಸುತ್ತೇವೆ ” ಎಂದು ಸಮಾಧಾನಮಾಡಿ ಕಳುಹಿ, ವೀರೇಶನನ್ನು ಕರೆ ದು, “ ನೀನು ನೃಸಿಲ್ಕನ ಬಳಿಗೆ ಹೋಗಿ ಒಳ್ಳೆಯ ಮಾತಿನಿಂದ ಬಾರೆಂ 'ದು ಕರೆದುಕೊಂಡು ಬಾ; ಅದರಂತೆ ನಡೆಯದಿದ್ದರೆ ಅವನನ್ನು ಕೊಂದು ತಲೆಯನ್ನೂ ಮೈ ತೊವಲನ್ನೂ ತೆಗೆದುಕೊಂಡು ಬಾರೆಂದು ಅಪ್ಪಣೆಮಾ ಡಿ ಕಳುಹಿಕೊಟ್ಟನು, ಕೂಡಲೇ ವೀರಭದ್ರೇಶನು ತನ್ನ ಸೇನೆಯೊಡನೆ ಕೂಡಿ ನೃಸಿಕ್ಕ ನಿಮ್ಮ ಬಳಿಗೆ ಬಂದನು. ಮತ್ತೂ ಇದಿರಿಗೆ ನಿಂತು, ಅಯ್ಯಾ! ಲೋಕಕಂಟಕನನ್ನು ಶಿಕ್ಷಿಸುವುದಕ್ಕಾಗಿ ಬಂದ ನೀನು ಶಿವನಾಜ್ಞೆಯನ್ನು ನೆರವೇರಿಸಿಬಿಟ್ಟ ಬಳಿಕ, ಹಿಂತಿರುಗಿ ಕೈಲಾಸಕ್ಕೆ ಬರುವುದನ್ನು ಮರೆತು, ಲೋಕಕ್ಕೆ ಮತ್ತಷ್ಟು ಹಿಂಸೆಗೊಳಿಸುತ್ತ ನಿಂತುಕೊಳ್ಳಬಹುದೆ ? ಲೋ ಕರಕ್ಷಕ-ಸತ್ವಗುಣಶಾಲಿ-ಯೆನಿಸಿಕೊಳ್ಳುವ ನೀನು ಹೀಗೆ ತಾಮಸ ಸಂಭಾವದಿಂದ ನಡೆದುಕೊಳ್ಳುತ್ತಿರುವುದನ್ನು ನೋಡಿ ಲೋಕವೆಲ್ಲ ಪರಿ ಹಾಸಮಾಡುವುದಿಲ್ಲವೆ ? ಇದು ನಿನಗೆ ಸರಿಯಲ್ಲ; ಬಿಡು; ನಿನ್ನನ್ನು ಕರೆ ದುಕೊಂಡು ಬರುವುದಕ್ಕೆ ಪರಶಿವನಪ್ಪಣೆಯಾಗಿರುವುದು; ನಡೆ, ಎಂದು