ಪುಟ:ಚೆನ್ನ ಬಸವೇಶವಿಜಯಂ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಂ (ಕಾಂಡ ೪) [ಅಧ್ಯಾಯ ದ ಪ್ರವಾಹವು ಹೊರಟಿತು. ಅವನ ಸೇನೆಯು ಕುಯ್ದಾಗಿ ಅರಿಯಮೇ ಲೆ ಬಿದ್ದಿರುವ ಪೈರಿನಂತೆ ಯುದ್ವಾಂಕಣದಲ್ಲಿ ಜರಗಿತು. ತ್ರಿಪುರದ ಕೋ ಟೆಯು ಖಣಿಖಣಿಲನೆ ಶಬ್ದ ಮಾಡಿತು, ಈತನೇ ಧನುರಿದ್ದಾಮೃತ್ಯುಂಜ ಯನು ! ಈತ ಬಾಣಲೋಕಸೃಪ್ತಿಕನಾದ ಬ್ರಹ್ಮನು ! ಎಂದು ಸಕಲರೂ ಪಣ ಖಸ್ವಾಮಿಯನ್ನು ಕೊಂಡಾಡಿದರು. ಅಸ್ಟ್ರಲ್ಲಿ ವಿದ್ಯು ಸ್ಟಾಲಿಯು ಮತ್ತೆ ಚೇತರಿಸಿಕೊಂಡು, ಬೇರೆ ರಥವ ತ್ತೀರಿ, ಸರ್ಪಾಸ್ತು ದಿಗಳನ್ನು ಪ್ರಯೋಗಿಸಲು, ಅವನ್ನು ಕುಮಾರನು ಪ್ರತ್ಯಸ್ತ್ರಗಳಿಂದ ಖಂಡಿಸಿ,ನಿನ್ನ ಮಂತ್ರಾಸ್ತ್ರಗಳ ಆಡಂಬರವೆಲ್ಲ ಮುಗಿದುಹೋಯಿತೆ ? ಎಂದು ಹಂಗಿಸಲು, ರಾಕ್ಷಸನು ಕೋಪವೇರಿ, ಮತ್ತೆ ತಿ ಓವಾದ ಎಂ ಟು ಬಾಣಗಳನ್ನು ಬಿಟ್ಟನು. ಪೂಣ್ಮುಖನು ಅವನ ದಾರಿಯಲ್ಲೆ ಖಂಡಿ ನಿ, ಶಕ್ರಾಯುಧವನ್ನು ಪ್ರಯೋಗಿಸಲು, ಅದು ಮಹಾಗ್ನಿ ಕಣವನ್ನು ಸುರಿಸುತ್ತ ಹೋಗಿ, ಕ್ಷಣಾರ್ಧದಲ್ಲಿ ವಿದ್ಯುನ್ಮಾ ಲಿ ಯ ಎದೆಯನ್ನ ಗಿದು ಬೆನ್ನನ್ನು ಸೀಳಿಕೊಂಡು ಹೋಯಿತು. ಕಾಲೆ ಯಂತೆ ರಕ್ಷವು ದೇಹದಿಂದ ಹರಿಯಲು, ವಿದ್ಯುನ್ಮಾಲಿಯು ಮೂರ್ಛಗೊ೦ಡು ಭೂಮಿಯ ಮೇಲೆ ಬಿದ್ದನು. ರಾಕ್ಷಸರು ಅವನನ್ನು ಎತ್ತಿ ರಥದಲ್ಲಿಟ್ಟು ಪಟ್ಟಣಕ್ಕೆ ಸಾಗಿಸಿದರು. ಉಳಿದ ರಾಕ್ಷಸಸೈನ್ಯವನ್ನೆಲ್ಲ ಕುವರನು ಉತ್ತರಿಸಿ, ಜಯ ಭೇರಿಯ ವಾದ್ಯದೊಡನೆ ಹಿಂತಿರುಗಿದನು. ಅತ್ತ ಕಮಲಾಕ್ಷನು ತನ್ನ ತ ಮೈನು ಪರಾಜಿತನಾಗಿ ಬಂದನೆಂಬ ಕೋಪದಿಂದ ಘುಡುಘುಡಿಸಿ, ಅಪರಿ ಮಿತವಾದ ಬಲವನ್ನು ಕೂಡಿಕೊಂಡು, ಅಣ್ಣನಾದ ತಾರಕಾಕ್ಷನಿಂದ ವೀಳ ಯವನ್ನು ಪಡೆದು, ತ್ರಿಪುರವನ್ನು ಬಿಟ್ಟು ದೇವತೆಗಳ ಮೇಲೆ ಸಾಗಿ ಬಂದ ನು, ದಿಕ್ಕಾಲಭೈರವನಾದ ಕಮಲಾಕ್ಷನು ಬರುತ್ತಿರುವನು ! ನಿಷFರಮೇ ಘ ಜಂಝಾನಿಲನು ಬರುತ್ತಿರುವನು ! ಎಂದು ಕಹಳೆಗಳು ಮುಂದೆ ಕೂ ಗುತ್ತಿದ್ದುವು. ಈ ಮಹಾರಾಕ್ಷಸನ ಸೈನ್ಯವು ಸಾಂದ್ರವಾಗಿ ನಿಂತಿರುವ ಮಹಾದೇವಸೇನೆಯಮೇಲೆ ಹೋಗಿ ಬೀಳು, ಸಮುದ್ರಸಮುದ್ರಗಳು ಕೂಡಿದಂತೆ ಮಹಾಕೊಲಾಹಲದೊಡನೆ ಭೀಕರವಾಗಿ ತೋರಿತು, ಕರಿ ತುರಗರಥಪದಾತಿಗಳು ಒಂದನ್ನೊಂದು ಸಂಧಿಸಿ ಧನುಸ್ಸು ಬಾಣ ಕತ್ತಿ ಗ. ದ ತೋಮರ ಕುಂತ ಪರಶು ಮುಸಲ ಮೊದಲಾದ ಆಯುಧಗಳಿಂದ ಹೊಡೆ