ಪುಟ:ಚೆನ್ನ ಬಸವೇಶವಿಜಯಂ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ವೀರಶೈವಮತದ ಪೌರಾಣಿಕಗ್ರಂಥಗಳಲ್ಲಿ ಅತಿಪ್ರಸಿದ್ಧ ವಾದುವುಗಳು ಬಸವೇಶ್ವರಪುರಾಣ ಚೆನ್ನಬಸವೇಶ್ವರಪುರಾಣಗಳು, ಬಸವೇಶ್ವರನು ಭಕ್ತಿ ಪ್ರಾಧಾನ್ಯದಿಂದ ಲೋಕೋತ್ತರನೆನಿಸಿಕೊಂಡಂತೆಯೇ ಚೆನ್ನಬಸ ವೇಶನು ಜ್ಞಾನಪ್ರಾಧಾನ್ಯದಿಂದ ಲೋಕಪೂಜ್ಯನಾದನು. ಇವರೀರರ ನ್ನು ನಾಯಕರನ್ನಾಗಿಟ್ಟು ರಚಿಸಿದುವುಗಳ ಮೇಲೆಕಂಡ ಎರಡು ಪುರಾ ಣಗಳಾಗಿರುವುವು. ಮೊದಲನೆಯ ಬಸವೇಶಪುರಾಣದಲ್ಲಿ ಬಸವೇಶ್ವರನಿಗೆ ಸಂಬಂಧಿಸಿದ ಹೆಚ್ಚು ವಿಷಯಗಳೂ, ಇನ್ನು ಕೆಲಶರಣರ ಚರಿತ್ರಗಳೂ ಮಾ ತ್ರವೇ ಪ್ರತಿಪಾದಿತವಾಗಿದ್ದುವು. ಚೆನ್ನಬಸವೇಶನ ವಿಷಯವು ಅದರಲ್ಲಿ ಹೆಚ್ಚಾಗಿ ಬರೆಯಲ್ಪಟ್ಟಿರಲಿಲ್ಲ. ಅದು ಕಾರಣ, ಚೆನ್ನಬಸವೇಶನ ಚಾರಿತ್ರ ವನ್ನೂ, ತದಂಗಗಳಾದ ಇತರ ವಿಷಯಗಳನ್ನೂ, ಶಿವನ ಸಂತವಿಂಶತಿ ಲೀ ಲೆಗಳನ್ನೂ ಸೇರಿಸಿ, ಶ್ರೀ ವಿರೂಪಾಕ್ಷಪಂಡಿತರು ( ಚೆನ್ನಬಸವಪುರಾ ೧೨” ಎಂಬ ಗ್ರಂಥವನ್ನು ರಚಿಸಿದರು. ಈ ಗ್ರಂಥನಾಯಕನಾದ ಚೆನ್ನಬಸವೇಶನ ವಿಷಯವಾಗಿ ವಿಚಾರ ಮಾಡಿದರೆ, ಜಗತ್ತಿನಲ್ಲಿ ಶಿವಭಕ್ತಿಯನ್ನುದ್ದರಿಸುವುದಕ್ಕಾಗಿ ಬಸವೇಶನು ಅವತರಿಸಿ, ತನ್ನ ಪವಿತ್ರ ಕಾವ್ಯವನ್ನು ಆತನು ಅತುಲವಾಗಿ ನೆರವೇರಿಸಿದ ರೂ, ಶಿವೋಪದಿಸ್ಮ ವಾದ ಅಸಾಧಾರಣವೀರಶೈವಮತಪಟ್ಟಜ್ಞಾನಸಾ ರವನ್ನು ಜಗತ್ತಿನಲ್ಲಿ ಬಿತ್ತರಿಸಿದ ಮಹಾಮಹಿಮನು ಈ ಚೆನ್ನಬಸವೇಶ ನೇ ಆಗಿರುತ್ತಾನೆ. ಈತನು ಬಸವೇಶನ ಅಗ್ರಜೆಯಾದ ನಾಗಾಂಬಿಕೆಯ ಉಬ್ಬರದಲ್ಲಿ ಶಿವಪ್ರಸಾದದಿಂದುದ್ಭವಿಸಿದನು, ಈತನ ಜನನಕಾಲವು ಚೆನ್ನ ಬಸವೇಶ್ವರಪುರಾಣದಲ್ಲಿ ತಿಳಿಯಿಸಲ್ಪಟ್ಟಿಲ್ಲ. ಇತರ ಕೆಲವು ಗ್ರಂಥಗಳಲ್ಲಿ ಅದು ಸೂಚಿಸಲ್ಪಟ್ಟಿದ್ದರೂ, ಪರಸ್ಪರ ವಿರುದ್ದವಾಗಿದೆ. ಮತ್ತೂ ಆ ಕಾಲ ವು, ಶಾಸನಶೋಧನದಿಂದ ಗೊತ್ತಾಗಿರುವ ಬಿಜ್ಜಳನ ಆಳಿಕೆಯ ಕಾಲಕ್ಕೆ ಸಂಘಟಿಸುವುದಿಲ್ಲ. ಬಸವೇಶನು ಕಲ್ಯಾಣವನ್ನು ಸೇರಿ ಮಂತ್ರಿಯಾಗಿದ್ದ ನಂತರ ಈತನು ಜನಿಸಿದನೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಇದರಿಂ ದ ಬಸವೇಶನು ಮಂತ್ರಿತ್ವವನ್ನು ವಹಿಸುವುದಕ್ಕೆ ಅರ್ಹವಾದ ವಯಸ್ಸು.