ಪುಟ:ಚೆನ್ನ ಬಸವೇಶವಿಜಯಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿ ವಕ,ವುದರಿಂದ, ಚನ್ನಬಸವೇಶನು ತನಗೆ ಮಾವನಾದ ಬಸವೇಶನನ್ನೇ ಗುರುಭಾವದಿಂದ ಕಂಡು, ಆತನಿಂದಲೇ ಮೇಲ್ಕಂಡ ಸಂಸ್ಕಾರವನ್ನು ಪಡೆದನು, ತನಗೆ ಹಿರಿಯನೂ ಸಂಸ್ಕಾರಾಧಿಕಾರಿಯೂ ಆಗಿದ್ದ ಬಸವೇಶ ನನ್ನು ಚೆನ್ನಬಸವೇಶನು ಗುರುಭಾವದಿಂದ ಕಾಣುತ್ತಿದ್ದಂತೆಯೇ, ಚೆನ್ನ ಬಸವೇಶನಲ್ಲಿ ಶಿವಜ್ಞಾನಾಧಿಕ್ಯವನ್ನು ನೋಡಿಯೂ, ಆತನಿಂದ ಪಟ್ಟಿ ನಿದ್ದಾಂತಬೋಧೆಯನ್ನು ತಾನು ಪಡೆದೂ ಕೂಡ, ಬಸವೇಶನು ಆ ಚೆನ್ನ ಬಸವೇಶನನ್ನೂ ಗುರುಭಾವದಿಂದ ಕಂಡಿದ್ದನು. ಚೆನ್ನಬಸವೇಶನು ಶಿವ ಜ್ಞಾನವರಿಯೇ ತಾನಾಗಿದ್ದು ದರಿಂದ ಭೂತಲದಲ್ಲಿ ಬಸವಾದಿಪ್ರಮಥ ರೆಲ್ಲರಿಗೂ ಕಾಲೋಚಿತವಾಗಿ ಜ್ಞಾನೋದಯವನ್ನು ಮಾಡಿ, ಎಚ್ಚ ರಿಸಿ, ಎಲ್ಲರನ್ನೂ ಪಟ್ಟಲಮಾರ್ಗನಿಷ್ಠರಾಗುವಂತೆ ಮಾಡುತ್ತಿದ್ದನು. ಬಸವೇಶನು ಭಕ್ತಿಪರವಶತೆಯಿಂದ ಜಂಗಮರಲ್ಲಿ ಯೋಗ್ಯತಾವಿಶೇಷ ವೊಂದನ್ನೂ ಅಕ್ಷಿಸದೆ, ತನ್ನ ಪ್ರಾಣದಂತೆಯೇ ಅವರನ್ನು ಕಾಣುತ್ತಿದ್ದ ನು, ಚೆನ್ನಬಸವೇಶನು ಹಾಗಲ್ಲ ; ಜಂಗಮರು ( ಜಾನಂತೃತಿಶಯಾ ದೈತುಶಿವಂವಿಶ್ವಪ್ರಕಾಶಕಂ 1 ಸ ಸರೂಪತಯಾತೇತುಜಂಗವಾಂತಿಕಿ ರಿತಾಃ” ಎಂಬ ವಚನದರ್ಥದಂತೆ ಸಸ್ಪರೂಪಜ್ಞಾನಿಗಳಾಗಿರತಕ್ಕುದೇ ಜಂ ಗಮಲಕ್ಷಣವೆಂದು ವಿಧಿಸಿ, ಎಲ್ಲರನ್ನೂ ಅಂತಹ ಜ್ಞಾನಿಗಳನ್ನಾಗಿ ಮಾಡುವು ದಕ್ಕೆ ಅವಶ್ಯಕವಾದ ನಿರ್ಬಂಧವನ್ನು ಕೂಡ ಕಲ್ಪಿಸಿದ್ದನು. ಪಟ್ಟಲಜ್ಞಾ ನಿಗಳಲ್ಲದವರು ತನ್ನರಮನೆಗೆ ಪ್ರವೇಶಿಸಲಾಗದೆಂದು ಕಟ್ಟಪ್ಪಣೆಯನ್ನು ಮಾಡಿ, ತನ್ನರಮನೆಯ ೬ ಬಾಗಿಲುಗಳಲ್ಲಿ ೬ ಮಂದಿ ಪಟ್ಟಿಲಬಕ್ಕಿಗ ಳನ್ನು ಕಾವಲಿರಿಸಿ, ಹೊರಗಿನಿಂದ ಬರುವವರನ್ನೆಲ್ಲ ಅವರು ಪಲವಿ ಚಾರವಾಗಿ ಪ್ರಕ್ಷ ಮಾಡಿ, ಅದಕ್ಕೆ ರಕ್ತ ತರವನ್ನು ಕೆಟ್ಟವರನ್ನೇ ಒ ಳಕ್ಕೆ ಬಿಡುವಂತೆ ಏರ್ಪಡಿಸಿದ್ದನು. ಈ ಕಾರಣದಿಂದಲೇ ಚೆನ್ನಬಸವೇ ಶನನ್ನು ಪಟ್ಟಲಸ್ಥಾಪನಾಚಾನೆಂದು ವೀರಶೈವರು ನಂಬಿರುವರು. ಈ ತನು ಬಾಲಬ್ರಹ್ಮಚಾರಿಯಾಗಿದ್ದು, ಗೃಹಸ್ಥಾಶ್ರಮವನ್ನು ಸ್ವೀಕರಿಸದೆ, ನಿರಾಭಾರಿ (ಯತಿ) ಯಾಗಿಯೇ ಮುಕ್ತನಾದನು. ಅಲ್ಲಮಪ್ರಭುವು ಕ ಲ್ಯಾಣಪಟ್ಟಣದಲ್ಲಿ ಆರೋಹಿಸಿದ್ದ ಶೂನ್ಯನಿಷ್ಕಾಸನದ ಪಟ್ಟವೇ ಚೆನ್ನಬ ಸವೇಶನಿಗೆ ಪ್ರಭುವಿನಿಂದ ವಹಿಸಿಕೊಡಲ್ಪಟ್ಟಿತು.