ಪುಟ:ಚೆನ್ನ ಬಸವೇಶವಿಜಯಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಂ (ಕಾಂಡ ೨) [ಅಧ್ಯಾಯ ವನ್ನು ಹೂಡಿ ನಿಂಜೆನಿಯಲ್ಲಿ ಎರಡು ಬೆರಲನ್ನೂ ಸೇರಿಸಿ ಕರ್ಣಾಂತವಾಗಿ ಸೆಳೆದು, “ ಎಲೆ ಬ್ರಹ್ಮನೆ, ಬ್ರಹ್ಮ ಹತೃದೋಷವುಂಟಾಗುವುದೆಂದು ಯೋಚಿಸಿ, ಇದುವರೆಗೂ ನಾನು ಸುಮ್ಮನಿದ್ದೆ, ಅದನ್ನು ನೀನು ತಿಳಿದು ಕೊಳ್ಳದೆ ಹೊದೆ; ಮಾಡುವುದೇನು ? ಈ ಏಟನ್ನು ತಡೆದುಕೊ ೨೨ ಎಂದು ಹೇಳಿ, ಬಾಣವನ್ನು ಪ್ರಯೋಗಿಸಿದನು. ಅದನ್ನು ಬ್ರಹ್ಮನು ಕತ್ತರಿಸಿ ಪ್ರತಿಬಾಣವನ್ನು ಬಿಟ್ಟನು. ಅದು ವಿಷ್ಣುವಿನ ಎದೆಗೆ ಹೊ ಕ್ಯು ಗಾಯವನ್ನು ಮಾಡಿತು ಅದರಿಂದ ಹರಿಯು ಕೋಪಗೊಂಡು ಎಲೋ ನೀಚಬ್ರಹ್ಮನೇ ! ನೀನೇ ದೊಡ್ಡವನೆಂಬಹಂಕಾರದಿಂದ ನಮ್ಮೆ ಡನೆ ಕಾದಾಡಿದುದಕ್ಕೆ ಈಗ ಫಲವನ್ನುಣ್ಣು ಎಂದು ಹೇಳಿ, ಭೀಕರವಾದ ತೀಕ್ಷಬಾಣವೊಂದನ್ನು ಪ್ರಯೋಗಿಸಿದನು. ಅದನ್ನು ಬ್ರಹ್ಮನು ನಡು ದಾರಿಯಲ್ಲೆ ಖಂಡಿಸಿ, ವೀರನಾದವನ್ನು ಮಾಡಿ, ಬೆನ್ನಿನ ಬತ್ತಳಿಕೆ ಯಿಂದ ಬ್ರಹ್ಮಾಸ್ತ್ರವನ್ನು ತೆಗೆದು ಧನುಸ್ಸಿಗೆ ಸೇರಿಸಿ ಎಳೆದು ಆರ್ಭಟಿಸಿ ಹೊಡೆದನು. ಅದನ್ನು ಕಂಡು “ ಓಹೋ ಜಗತ್ತು ಹಾಳಾಗುವ ಕಾಲ ಬಂದಿತು ! ಏಲೋ ಮೂರ್ಖಬ್ರಹ್ಮನೆ ! ಈ ಕೂರಬಾಣವನ್ನು ಪ್ರ ಯೋಗಿಸಬೇಡ; ನಿಲ್ಲಿಸು ನಿಲ್ಲಿಸು ' ಎಂದು ಎಲ್ಲರೂ ಕೂಗಿಕೊಂಡರು. ಅ7ರಲ್ಲಿ ವಿಷ್ಣುವು ತನ್ನ ಬತ್ತಳಿಕೆಯಿಂದ ವೈಸ್ವಾಸ್ತ್ರವನ್ನು ತೆಗೆ ದು ನಿಂಜಿನಿಗೆ ಸೇರಿಸಿದನು. ಆ ಬಾಣದ ತೀಕ್ಷಜಾಲೆಯು ಜಗತ್ತನ್ನೆಲ್ಲ ತಲ್ಲಣಗೊಳಿಸಿತು. ಆ ಬಾಣವು ನಿಂಜಿನಿಯಿಂದ ಬಿಡಲ್ಪಟ್ಟ ಕೂಡಲೇ ಫಾ ಲಾಕ್ಷನ ಉರಿಗಣ್ಣಿನಂತೆ ಅಗ್ನಿ ಕಣವನ್ನು ಸುರಿಸುತ್ತ ಬಿರುಸಿನಿಂದ ನುಗ್ಗಿ ತು, ಮಧ್ಯಮಾರ್ಗದಲ್ಲಿ ಬ್ರಹ್ಮಾಸ್ತ್ರ ವೈ.ವಾಸ್ತ್ರ ಗಳೆರಡೂ ಸಂಧಿಸಿ ಖಣಖಣಿಲನೆ ಕಾದಾಡುತ್ತಿದ್ದವು. ಅವೆರಡರ ಪರಸ್ಪರ ಹತಿಯಿಂದ ಬೆಂ ಕಿಯ ಮಳೆಯೇ ಸುರಿಯುತ್ತಲಿದ್ದಿತು. ಅದರಿಂದ ಬ್ರಹ್ಮಾಂಡವೇ ಹೊತ್ತಿ ಉರಿಯುತ್ತಿದ್ದಿತು. ರಣಾಂಗಣದಲ್ಲಿ ಹರಿಬ್ರಹ್ಮರ ಮತ್ತೂ ಅವರ ವಾಹನ ಗಳ ಹೊರತು ಮತ್ತಾರೂ ನಿಲ್ಲಲಾರದೆ ಓಡಿಹೋದರು. ವಿಷ್ಣುವು ಗರು ಡನಿಂದಿಳಿದು ಗದೆಯನ್ನು ತೆಗೆದುಕೊಂಡು ಮುಂದೆ ಬಂದನು. ಅದನ್ನು ಕಂಡು ಬ್ರಹ್ಮನೂ ಹಂಸದಿಂದಿಳಿದು ಗದೆಯನ್ನು ಗ್ರಹಿಸಿ ಹರಕೆ ಬಂದನು. ಓರ್ವರನ್ನೋರ್ವರು ವಂಚಿಸಿ ಪ್ರಹರಿಸಲು, ಆ ಏಟನ್ನು