ಪುಟ:ಚೆನ್ನ ಬಸವೇಶವಿಜಯಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಲಿಂಗೋದ್ಭವಂತಿ: 1 ವಾಗುವುದು ದುರ್ಲಭವೆಂದಿತು. ಅದನ್ನು ಕೇಳಿದಳೂಡಲೇ ಬ್ರಹ್ಮನು ದಿಗಿಲು ಬಿದ್ದು ಬೆರಗಾದನು, ಮತ್ತೂ ಆ ಕೇತಕಿಯೊಡನೆ ಮೈತ್ರಿಯಿಂ ದ ಮೆಲ್ಲಗೆ ಬಂದು ಮಾತನಾಡತೊಡಗಿದನು-- ಎಲೆ ಕೇತಕಿಯೇ ನಾನು ಶಿವನ ಮಸ್ತಕವನ್ನು ಕಂಡು ಬರುತ್ತೇನೆಂದು ವಿಷ್ಣುವಿನೊಡನೆ ಭಾಷೆ ಗೊಟ್ಟು ಬಂದೆನು. ಈಗ ನಾನು ನೋಡದೆ ಬಂದೆನೆಂದರೆ ಬಹು ಆವ ಮಾನವಾಗುವುದು, ಅದಕ್ಕಾಗಿ ನೀನು ಈಗ ನನ್ನ ಮಾನವನ್ನು ಕಾ ಮಾಡಬೇಕು, ಇದರಮೇಲೆ ನಾನು ನಿನ್ನೊಡನೆ ಹೆಚ್ಚು ಹೇಳಿಕೊಳ್ಳಬೇಕಾ ದುದೇನಿದೆ ? ಎಂದನು. ಆಗ ತಾಳೆಯು ಆಗಲಿ ಬಾರೆಂದು ಹಿಂತಿರುಗಿ ನೂರ: ದ ರಣಾಂಗಣಕ್ಕೆ ಕರೆದುಕೊಂಡುಬಂದಿತು, ಅತ್ಯವಿಷ್ಣುವು ಎಷ್ಟೋ ದೂರ ಭೂಮಿಯನ್ನು ಕರೆದುಕೊಂಡು ಹೋದರೂ ಕಡೆಗೆ ಮ ಅವನ್ನು ಕಾಣದೆ ಬೇಸತ್ತು, ಅಸಾಧ್ಯವೆಂದು ನಿಶ್ಚಸಿ, ಹಿಂತಿರುಗಿ ರ ಣಾಂಗಣಕ್ಕೆ ಬಂದು, ತನಗಿಂತಲೂ ಮುಂದಾಗಿ ಬಂದು ನಿಂತಿರುವ ಬ್ರ ಹ್ಮನನ್ನು ಕಂಡು, ನೀನು ಶಿವನ ಶಿರಸ್ಸನ್ನು ಕಂಡುಬಂದೆಯಾ ? ಎಂದು ಕೇಳಲು, ಬ್ರಹ್ಮನು ಕಂಡೆನೆಂದು ನುಡಿದನು. ಅದಕ್ಕೆ ಸಾಕ್ಷಿಯಾರೆಂ ದು ಹರಿಯು ಕೇಳಲು, ಕೇತಕಿಯನ್ನು ತೋರಿಸಿದನು, ಬ್ರಹ್ಮನು ಶಿ ವನ ಶಿರಸ್ಸನ್ನು ನೋಡಿದುದು ದಿಟವೆಂದು ಅದು ನುಡಿಯಲು, ನೀನು ಅ ನೃತವಾದಿ; ಅದು ಕಾರಣ, ಇನ್ನ ಮುಂದೆ ಪೂಜೆಗೆ ಅಯೋಗ್ಯನಾಗೆ ದ ವಿರುವು ಕೇತಕೀರಾಜನಿಗೆ ಶಾಪವನ್ನಿತ್ತನು. ಅದು ಗೋಳಾಡು ತ ಹೊರಟು ಹೋಯಿತು. ಬಳಿಕ ಲಿಂಗವು ಭೀಕರಾಕಾರವನ್ನು ಧ ರಿಸಿತು. ಇದನ್ನು ನಾವು ನೋಡಿ ಸೈರಿಸಿಕೊಳ್ಳುವೆವೇ ! ಎಂದು ವಿಷ್ಣು ಬ್ರಹ್ಮ ರು ಬೆದರಿ ಸ್ತುತಿಮಾಡಿದರು. ಆಗ ಶಿವನು ಶಾಂತರೂಪವನ್ನು ಧ ರಿಸಿದನು ಹರಿಬ್ರಹ್ಮರೀರ ಜಯಜಯ ! ಶಂಕರ ! ಮಹಾದೇ ವ ! ಎಂದು ಮೊದಲಾಗಿ ಸ್ತುತಿಸಿ, ನಮ್ಮ ನ್ನು ಉದ್ದಾರ ಮಾಡಬೇಕೆಂ ದು ಪ್ರಾರ್ಥಿಸಿದರು ಅವರ ಸ್ತುತಿಗೂ ಭಕ್ತಿಭಾವಕ್ಕೂ ಈಶ್ವರನು ಮೇ ಚೈ, ಕರುಣದಿಂದ ಪ್ರಸನ್ನನಾಗಿ, ಪಂಚಮುಖ ದಶಭುಜ ಜಟಾಪಟಲ ಚಂದ್ರರೇಖೆ ಮೊದಲಾದುವುಗಳನ್ನು ಧರಿಸಿ, ನಿಜರೂಪದಿಂದ ಪ್ರತ್ಯಕ್ಷ ನಾದನು, ಆಗ ಅವರಿ:ರರೂ ಸಂತುಷ್ಯರಾಗಿ, ಅತಿಶಯಭಕ್ತಿಯಿಂದ