ಪುಟ:ಚೋರಚಕ್ರವರ್ತಿ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಡಿಲ್ಲ. ನಾನು ನಿಶ್ಚಯ ಮಾಡಿರುವುದೇನೆಂದರೆ-ತಮ್ಮಲ್ಲಿ ಕೆಲಸಕ್ಕೆ ಇರತಕ್ಕವರಿಂದ ಈ ಕಳ್ಳತನವು ನಡೆದಿಲ್ಲ. ಹೊರಗಿನವರಾರೋ ಈ ದುಪ್ಪಾ ವನ್ನು ಮಾಡಿಸಬೇಕೆಂದು ನಾನು ಮುಕ್ತಕಂಠನಾಗಿ ಹೇಳುವೆನು. ಅವರ ರಾಗಾದರೆ ಕಳ್ಳರನ್ನು ಕಂಡುಹಿಡಿಯುವುದು ಅಸಾ ಧ, ನಾವು ಮೊದಲು ಯೋಚಿಸಿದ್ದ ಕೂ ಇದಕ್ಕೂ ಅಜಗಜ ನ್ಯಾಯವಾಗಿರುವುದು. ಅರಿಂದಮು-ಈಗಿನ ಅಪರಾಧಿಯು ಚೌದಲ್ಲಿ ನಿಷ್ಣಾತನಾ ಗಿರಬೇಕು. ಸಾಮಾನ್ಯರಿಗೆ ಇಂತಹ ಕೆಲಸವು ಸಾಧ್ಯವಲ್ಲ. ಕಳ್ಳನು ಸಿಕ್ಕವುದಾದರೆ, ಮಹಾಸಾಹಸವೇ ಸರಿ. ನಾನಾದರೋ ಕೆಲಸ ಮಾಡುವುದಕ್ಕೆ ಬಂದಿರುವೆನು. ಸಾಧ್ಯವಾದಷ್ಟು ಕೆಲಸ ಮಾಡಿ ನೋಡುವೆನು, ಪ್ರಕೃತದಲ್ಲಿ ಫಲಾಫಲಗಳು ಸಂಪೂರ್ಣ ವಾಗಿ ಅಜ್ಞಾತವಾಗಿರುವುವು. ಅಮರ-ತಮ್ಮ ಮಾತನ್ನು ಕೇಳಿ, ನನ್ನ ಆಸೆಯೆಲ್ಲವೂ ನಿರಾಶೆಯಾಯಿತು. ನನಗೆ ಸಮಸ್ತ ದಿಕ್ಕುಗಳೂ ಶೂನ್ಯವಾಗಿ ಕಾಣಲಾರಂಭಿಸಿರುವುವು. ಅರಿಂದಮುನಿರಾಶನಾಗುವುದು ಧಿರನ ಲಕ್ಷಣವಲ್ಲ. ನಾನು ಕೈಗೊಂಡ ಕೆಲಸವನ್ನು ವಿಹಿತವಾಗಿಯೇ ಪೂರ್ತಿಗೊಳಿಸುವೆನು. ನಾನು ಕೈಹಾಕಿದ ಕೆಲಸವಾವುದೂ ಇಂದಿನವರೆಗೂ ವಿಫಲವಾಗಿಲ್ಲ. ಹೀಗಿರುವಲ್ಲಿ ಈ ಕೆಲಸದಲ್ಲಿ ಮಾತ್ರ ವಿಫಲವಾಗುವುದೆಂದರೇನು ? ಒಂದೆರಡು ದಿನಗಳು ನಿರೀಕ್ಷಿಸಿಕೊಂಡಿರೋಣಾಗಲಿ, ದೇವರು ಎಲ್ಲವನ್ನೂ ಸುಮುಖವಾಗಿಯೇ ನೆರವೇರಿಸಿ ಕೊಡುವನು.