ಪುಟ:ಚೋರಚಕ್ರವರ್ತಿ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ನನ್ನ ಜೀವಿನಲ್ಲಿ ಹೇಗೋ ಬಂದಿತು, ನಿನ್ನೆಯ ದಿನ ನಾನು ಜೀವಿ ನಲ್ಲಿ ಕೈ ಹಾಕಿ ನೋಡಿದಾಗ ಇದು ಸಿಕ್ಕಲು, ಇದನ್ನು ನೋಡಿ ಯಾ ರಾದರೂ ಕಂಡರೆ ಸಂದೇಹಸಟ್ಟಾರೆಂಬ ಭಯದಿಂದ ನಾನು ಹೊರಗೆ ಬಿಸಾಡಿದೆನು. ಅರಿಂದಮಸಿನ್ನ ಜೀಪಿನಲ್ಲಿ ಇದು ಹೇಗೆ ಬಂದಿತು ? ರಾಮಅದು ಗೊತ್ತಾಗಿದ್ದರೆ ನಿನಗೆ ನಾನು ಇಷ್ಟು ತೊ೦ ದರೆ ಕೊಡುತ್ತಿರಲಿಲ್ಲ. ಅರಿಂದಮ-ಒಳ್ಳೆಯದು, ಇಲ್ಲಿನವರೆಗೂ ನೀವು ಹೇಳ್ ದ್ದನ್ನು ನಾನು ಸತ್ಯವೆಂದು ನಂಬುವೆನು, ನನ್ನಿಟರಿನಲ್ಲಿ ಸುಳ್ಳ ಹೇಳುವುದಾದರೆ, ನಿಮ್ಮ ಪ್ರಾಣವು ನಿಮ್ಮ ಹಲ್ಲವೆಂದು ತಿಳಿಯಿರಿ ನಾನು ಕೆಲವು ಪ್ರಶ್ನೆಗಳನ್ನು ಕೇಳುವೆನು. ಅದಕ್ಕೆಲ್ಲಾ ಸುತ್ತರ ವನ್ನು ಕೊಡಬೇಕು, ಅದರಲ್ಲಿ ಕಿಂಚಿತ್ತೂ ಸುಳ್ಳಿರಬಾರದು. ಪ್ರಮಾಣವಾಗಿ ಹೇಳಿರಿ. ರಾಮ-ನಾನು ಪ್ರಮಾಣಮಾಡಿ ಕೊಡಲಾರೆನು. ಅರಿಂದಮಅದೇಗೆ ? ರಾಮ-ಕೆಲವು ಪ್ರಕಾಶಕ್ಕೆ ಯೋಗ್ಯವು; ಕೆಲವು ಪ್ರಕಾ ಶಕ್ಕೆ ಯೋಗ್ಯವಲ್ಲವು, ಹೀಗಿರುವಲ್ಲಿ ನಾನು ಪ್ರಮಾಣವನ್ನು ಹೇಗೆ ಮಾಡಲಿ ? ಅರಿಂದಮ-ಪ್ರಕಾಶಕ್ಕೆ ಯೋಗ್ಯವಲ್ಲದ್ದನ್ನು ಹೇಳಬೇಡಿರಿ, ಆದರೆ ಪ್ರಕೃತ ಸಂದರ್ಭದಲ್ಲಿ ಎಲ್ಲವನ್ನೂ ತಿಳಿಸುವುದು ಉಚಿತವಾ ದುದು, ನಾನು ಕೇಳುವುದಕ್ಕೆಲ್ಲಾ ನೀವು ಸರಿಯಾಗಿ ಉತ್ತರ ಕೊಡದೇ ಹೋದರೆ, ನಾನು ನಿಮ್ಮನ್ನು ದಸ್ತಗಿರಿ ಮಾಡುವೆನು ರಾಮಕೇಳೊಣಾಗಲಿ.