ಪುಟ:ಚೋರಚಕ್ರವರ್ತಿ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ಮಹಾಶಯ ! ತಾವು ನನ್ನನ್ನು ವೇಷಧಾರಿಯೊಂದು ತಿಳಿಯೋಣಾ ಯತೆ ? ಎಂದನು. ಜೀಮೂತ-ನಾನು ಹಾಗೆಯೇ ಯೋಚಿಸುತ್ತಿರುವೆನು. ಅರಿಂದಮ-(ಭಯವನ್ನು ನಟಿಸಿ) ತಾವು ಯೋಚಿಸಿದ್ದು ನಿಜ, ನಾನು ತಮಗೆ ವಂಚಿಸಲು ಕಾರಣವೇನಿರುವುದು ? ನಾನು ದೊಡ್ಡ ವಿಪತ್ತಿನಲ್ಲಿ ಸಿಕ್ಕಿಬಿದ್ದು, ತಲೆಯನ್ನು ತಪ್ಪಿಸಿಕೊಂಡು ತಿರು ಗಬೇಕಾಗಿರುವುದು. ಅರಿಂದಮನು ಹೇಳಿದ ಭಯ ಚಕಿತವಾದ ಮಾತನ್ನು ಕೇಳಿ, ಜೀಮ ತನು ತನ್ನ ಸಂದೇಹವನ್ನು ಕಳೆದುಕೊಂಡನು. ಅರಿಂದ ಮನು, ತನ್ನ ಪ್ರಕೃತ ರೂಪದಿಂದ ವಂಚಿತನಾಗಿರುವನೆಂದು ತನ್ನಲ್ಲಿ ತಾನೇ'ಆಕ್ಷ ಪಡುತ್ತಾ ನಿಂತಿದ್ದನು. ಜೀನತ-ತಮಗೆ ವಿಪತ್ತೆಂತಹದು ? ಅರಿಂದವನು ನಿಜವಾದ ಅಪರಾಧಿಯಂತೆ ಹಿಂದೆ ಮುಂದೆ ನೋಡ ತ್ಯಾ ನಾನು ತನಗೆ ಹೇಗೆ ತಿಳಿಸಲಿ ? ಎಲ್ಲಿ ನೋಡಿದರೂ ಪೋಲೀಸಿನವರ ಕಾಟ, ಅವರು ನನ್ನನ್ನು ನೋಡಿದ ಕೂಡಲೇ, ನನ್ನ ಪ್ರಾಣವು ಹಾರಿಹೋಗುವುದು, ಪೊಲೀಸಿನವರ ಕಾಟದಿಂದ ಪಾರಾಗುವುದಕ್ಕಾಗಿಯೇ ನಾನು ವೇಷಂತರವನ್ನು ಧರಿಸಿಕೊಂಡಿ ರುವುದು, ಎಂದನು. ಜೀವ..ಹೀಗೆ ಹೇಳಿದ್ದರಿಂದ ತಮ್ಮ ವಿಪತ್ತು ಎಂತಹ ದೆಂಬುದು ಗೊತ್ತಾಗಲಿಲ್ಲ. - ಅರಿಂದಮ-ನನ್ನ ವಿಪತ್ತನ್ನು ಇತರರ ಮುಂದೆ ಹೇಳುವು ದಕ್ಕೆ ನನಗೆ ಧೈರವೇ ಉಂಟಾಗುವುದಿಲ್ಲ, ಆದರೆ ಒಬ್ಬನಿಗಾದರೂ ಹೇಳದೇ ಹೋದರೆ, ಮನಸ್ಸು ಸುಸ್ಥಿರವಾಗಿರುವುದಿಲ್ಲ. ನನಗೆ ಉಲ್ಲಾಸವನ್ನುಂಟವಾಡುವ ಮನುಷ್ಯನು ಒಬ್ಬನಾದರೂ ಇರ