ಪುಟ:ಚೋರಚಕ್ರವರ್ತಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೆ ಯಲ್ಲಿ ಸೇರಿಕೊಂಡು, ಇಂದಿನವರೆಗೂ ಯಾರಿಗೂ ವಿರೋ೪ ಧವಿಲ್ಲದಂತೆ ಕೆಲಸಮಾಡಿಕೊಂಡಿದ್ದನು. ಆದುದರಿಂದಲೇ ಯಜಮಾನನಿಗೆ ಆತನಲ್ಲಿ ಪರಮಪ್ರೀತಿಯಿದ್ದಿತು. ಶರಶ್ಚಂದ್ರನು ಯಜಮಾನನ ಅಪ್ಪಣೆಯನ್ನು ತೆಗೆದು ಕೊಂಡು ಮಧುವನದ ಕಡೆ ತೆರಳಿದನು. ಅಮರನ ಥನು ತನ್ನ ಕೆಲಸದ ಮೇಲೆ ಕುಳಿತುಕೊಂಡು ಲೆಕ್ಕ ಪತ್ರಗಳನ್ನು ನೋಡಲಾರಂಭಿಸಿದನು. ಈ ರೀತಿಯಲ್ಲಿ ಒಂದೆರಡು ಗಂಟೆಗಳು ಕಳೆದುಹೋದುವು. ಆ ಸಮಯಕ್ಕೆ ಸರಿಯಾಗಿ ಅಪರಿಚಿತನೊಬ್ಬನು ಆತನಿದ್ದಲ್ಲಿಗೆ ಬಂದನು. ಅಪ್ಪಣೆಯಿಲ್ಲದೆ ಅಮರನಾಧನ ಕೋಣೆಯೊಳಗೆ ಯಾ ರೂ ಸ ವೇಶಮಾಡಕೂಡದೆಂದು ನಿಯಮವಿದ್ದಿತು, ಈ ಅಪರಚಿತನು ಹಠಾತ್ತಾಗಿ ತಾನಿದ್ದಲ್ಲಿಗೆ ಬಂದುದನ್ನು ನೋಡಿ, ಅಮರನಾಥನು ಅಪರಿಚಿತನಾರೆ ಮಾನವಾದೆಗಳನ್ನರಿ ಯದ ಸಾಮಾನ್ಯ ಮನುಷ್ಯನಾಗಿರಬೇಕೆಂದು ತಿಳಿದು-ದಯೆ ಮಾಡೋಣಾಗಲಿ, ಎಂದು ಹೇಳಿದನು, ಅಪರಿಚಿತ - ಅಮರನಾಥಮಹಾಶಯರು ತಾವೇ ಅಲ್ಲವೆ ? - ಅಮರ-ಅಕದು, ತಾವು ಆರೋ ಗೊತ್ತಾಗಲಿಲ್ಲ. ಅಪರಿಚಿತ-ಗೊತ್ತಾಗಲು ಕಾರಣವಿಲ್ಲ. ನಾನು ತ ಮೃನ್ನು ನೋಡಲು ಬಂದವನಲ್ಲ. ಅಮರತಾವು ಯಾರನ್ನು ನೋಡಬೇಕೆಂದಿರುವಿರಿ? ಅಪರಿಚಿತ-ತಮ್ಮಲ್ಲಿ ಕೆಲಸಕ್ಕೆ ಇದ್ದ ಶರಚ್ಚಂದ್ರನ ನ್ನು ನಾನು ನೋಡಬೇಕೆಂದು ಬಂದೆನು. ಅಮರ-ಆತನು ಈಗತಾನೆ ಹೊರಟುಹೋದನು.