ಪುಟ:ಚೋರಚಕ್ರವರ್ತಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಂಭವಾದುವು. ಅಮರನು ತನ್ನ ಹೃದಯದ ಆವೇಗವನ್ನು ತಡೆಯಲಾಗದೆ ಅಪರಿಚಿತನನ್ನು ಕುರಿತು-ಸ್ವಾಮಿ ! ಒಂದು ವೇಳ ಪರಿಚಿತರಾದವರು ಶರಚ್ಚ ಂದ್ರನಮೇಲೆ ಅಪವಾದ ವನ್ನು ಹೊರಿಸಿ ದೂಪಿಸಿದರೂ ನಾನು ನಂಬುವುದಿಲ್ಲ; ಹೀಗಿ ರುವಲ್ಲಿ ಅಪರಿಚಿತರಾದ ತಾವು ಹೇಳುವ ಮಾತಿನಲ್ಲಿ ನನಗೆ ನಂಬುಗೆಯೆಂದರೇನು ? ತಾವು ಶರತ್ತಿನ ಸ್ವಭಾವವನ್ನು ಅರಿ ತವರಲ್ಲವೆಂದು ತೋರುವುದು, ಇನ್ನು ಮುಂದೆ ತಮ್ಮ ಮಾತನ್ನು ಕೇಳಲು ನನಗೆ ಇಷ್ಟವಿಲ್ಲ, ಎಂದು ಹೇಳಿದನು. ಅಪರಿಚಿತ-ತಾವು ನನ್ನ ಮಾತನ್ನು ಕೇಳಬೇಕೆಂದಲ್ಲ. ಪ್ರಮಾಣವು ಕಂಡುಬರುವುದಾದರೆ, ತಮಗೇ ನಂಬುಗಯುಂ ಟಾಗುವುದು. ಮೇಲಿನ ಪ್ರಭಾವದಿಂದ ಮನುಷ್ಯನನ್ನು ತಿಳಿಯಲಾ:ುವುದಿಲ್ಲ. ಶರಚ್ಚಂದ್ರನು ನೋಡುವುದಕ್ಕೆ ಯೊ ಗನಂತಿದ್ದರೂ ಕೃತ್ರಿಮಿಯಾಗಿರುವನು, ಪ್ರಕೃತ ಅವನು ನಿನಗೆ ಸರ್ವನಾಶವನ್ನುಂಟುಮಾಡಿ ಎಲ್ಲಿಯೋ ಪಲಾಯನ ವಾಗಿರುವನು. ಆದು ಮಾತ್ರ ಖಂಡಿತವಾದುದು ಅಮರ-ತಾವು ಹೇಳುವ ಮಾತಾವುದೂ ನನಗೆ ಗೊ ತಾಗುವುದಿಲ್ಲ. ಅಪರಿಚಿತ.-ತಮುಗ ಗೊತ್ತಾಗಲು ಕಾರಣವೇನಿರು ವುದು? ನಿನ್ನೆಯ ರಾತ್ರಿ ನಾನು ಅವನನ್ನು ನೋಡಿದ್ದೆನು. ಈ ದಿನ ಬೆಳಗ್ಗೆ ಅವನು ನನಗೆ ಹಣ ಕೊಡುವುದಾಗಿ ಮಾತು ಕೊಟ್ಟಿದ್ದನು. ಅಮರ-ಆತನು ತನಗೆ ಹಣ ಕೊಡುವುದಾಗಿ ಮಾತು ಕೊಟ್ಟದ್ದನೇ? ಅದೇಕೆ? ಅಪರಿಚಿತ ಅವನಿಂದ ನನಗೆ ಬಾಕಿ ಬರಬೇಕು. (