ಪುಟ:ಚೋರಚಕ್ರವರ್ತಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫. ಹೋಗಿಯ ಇರುವುದಿಲ್ಲ, ಅಲ್ಲಿಂದ ತಮಗೆ ಜವಾಬೂ ಬರುವುದಿಲ್ಲ. ರಾಮನಾರಾಯಣ-ಶರಚ್ಛಂದನು ಮಧುವನಕ್ಕೆ ಹೋಗಿಲ್ಲವೆಂದು ತೋರುವ್ರದು. ಮತ್ತೊಬ್ಬ ಮನುಷ್ಯನು ತಮ್ಮ ಮಾತುಗಳ ಮಧ್ಯ ದಲ್ಲಿ ತಲೆಹಾಕಿದ್ದನ್ನು ಕಂಡು, ಅರಿಂದಮನು ಆತನನ್ನು ನೋ ಡಿ-ನ ಹಾಶಯ ! ಶರಚ್ಚಂದ್ರನು ದೋಷಿಯೆಂದು ತಾವು ಖಂಡಿತವಾಗಿಯೂ ಹೇಳುವಿರಲ್ಲವೇ? ಎಂದನು. ರಾಮ-ಖಂಡಿತವಾಗಿಯೂ ಆತನು ದೋಷಿ ಸರಿ. ಆತುರ...ಆದೇಕೆ ಹಾಗೆ ಹೇಳುವಿರಿ? ನಾನು ಬಾಲ್ಯ ದಿಂದಲೂ ಆತನನ್ನು ಬಲ್ಲೆನು, ಆತನ ಗುಣಗಳಲ್ಲಿ ಕಿಂಚಿತ್ತಾ ದರೂ ದೋಪವಿಲ್ಲ, ಆತನು ನಿರ್ದೋಷಿಯೆಂದೇ ನನಗೆ ನಂಬುಗೆ. ರಾಮ-ಒಳ್ಳೆಯವರೆಂಬುವರೇ ಒಂದೊಂದು ವೇಳೆ ಇಂತಹ ಕೆಲಸವನ್ನು ವ :ಡಿಬಿಡುವರು. ಅರಿಂದಮ-(ರಾಮನಾರಾಯಣನನ್ನು ನೋಡಿ) ಶರ ಚಂದ್ರನು ತಮ್ಮ ಹೆಸರಿನಲ್ಲಿ ಅಲ್ಲವೇ ಒಂದು ಲಕ್ಷ ರೂಪಾ ಯೇ ಖರ್ಚನ್ನು ತೋರಿಸಿರುವನು. ರಾಮ-ಅಹುದು. ಅರಿಂದಮ-ಒಳ್ಳೆಯದು, ಆತನು ಬರೆದಿರುವ ಲೆಕ್ಕಗೆ ಳೆಲ್ಲವನ್ನೂ ನೋಡಿದೆನು; ಅದರಲ್ಲಿ ಕೊಂಚವಾದರೂ ತಪ್ಪೆಂ ಬುದಿಲ್ಲ, ಹೀಗಿರುವಲ್ಲಿ ಈಗ ಮಾತ) ಅವನು ಲೆಕ್ಕಗಳನ್ನು ತಪ್ಪಾಗಿ ಬರೆಯಲು ಕಾರಣವೇನಿರುವುದು?