ಪುಟ:ಚೋರಚಕ್ರವರ್ತಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ದೋ ಸಿಯೆಂಬುದಕ್ಕೆ ಸಾಕಾದಷ್ಟು ಕಾರಣಗಳು ಸಿಕ್ಕಿರು ತವೆಯಾಗಲಿ, ಅವನು ನಿರ್ದೋಷಿಯೆಂಬುದಕ್ಕೆ ಯಾವ ಕಾ ರಣವೂ ಸಿಕ್ಕಿಲ್ಲ. ಮುತ್ತೂ ಅವನಿಗೆ ಒತ್ತಾಸೆಯಾಗಿ ಮಾತ ನಾಡುವವರೂ ಯಾರೂ ಇಲ್ಲ. - ಇಂದಿರಾ-ಆತನಮೇಲೆ ಅಪರಾಧವನ್ನು ಹೊರಿಸುವು ದಕ್ಕೆ ಮತ್ತಾವ ಕಾರಣವೇನಾದರೂ ಉಂಟೆ? ಅವರ ಉಂಟು. ಇಂದಿರಾ-ಹಾಗಾದರೆ ಹೇಳು. ಅಮರ-ಶರತ್ತು ಹಣವನ್ನು ಅಪಹರಿಸುವುದಕ್ಕೆ ಮು ತೊಂದು ಕಾರಣವಿರಬೇಕೆಂದು ನಾನು ಊಹಿಸುವೆನು. ಇಂದಿರಾ--ದೆಂತಹದು? ಅಮರಅ ನಿಗೆ ವಿಶೇಷವಾದ ಸಾಲವಿರುವುದಂತೆ, ಆತನು ಈ ನಡುವೆ ದುರ್ಮಾರ್ಗದಲ್ಲಿ ಪ್ರವರ್ತಿಸಿ ಜೂಜಿನ ಆಟವನ್ನು ಆಡುತ್ತಾ ದಿನೇ ದಿನೇ ಹಣವೆಲ್ಲವನ್ನೂ ಕಳೆಯು ತಿರುವನಂತೆ, ಸ್ನೇಚ್ಛೆಯಾಗಿ ಹ 'ವನ್ನು ಕಳೆಯುವವನಿಗೆ ಹಣ ಬೇಕಾಗಿರುವುದರಿಂದ ಈ ರೀತಿಯಲ್ಲಿ ಪ್ರವರ್ತಿಸಿರ ಬೇಕು. ಅದನ್ನು ಕೇಳಿದ ಇಂದಿರೆಯ ಮುಖದಲ್ಲಿ ಕಂಪೇರಿತು. ನಾಳಗಳಲ್ಲಿ ರಕ್ತವು ಕುದಿಯಲಾರಂಭಿಸಿತು, ಆಕಳು ತಂ ದೆಯ ಮಾತನ್ನು ಇನ್ನು ಕೇಳಲಾರದವಳಾಗಿ ಆಸನದಿಂದೆದ್ದು, ಅಪ್ಪ, ಸಾಕುಸಾಕು ನಿನ್ನ ಮಾತು, ನಾನು ಕೇಳಲಾರೆ. ನಿ ನಗೆ ಯಾರೋ ಸುಳ್ಳು ಹೇಳಿ ನಿನ್ನನ್ನು ಭಯಪಡಿಸಿರಬೇಕು, ಮೂರು ಹೊತ್ತೂ ಮನೆಯಲ್ಲಿಯೇ ಇದ್ದು ಕೆಲಸವನ್ನು ಮಾ ಡಿಕೊಂಡಿರತಕ್ಕವನಿಗೆ ಜೂಜಾಡುವುದಕ್ಕೆ ಹೊತ್ತಲ್ಲಿಯದು?