ಪುಟ:ಚೋರಚಕ್ರವರ್ತಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ನ್ನರಿವುದು ಸಾಧ್ಯವಾಗಿಲ್ಲವಾದರೂ, ಆತನು ಅಣ್ಣನಂತೆ ತೋರ್ಪ ಡಿಸಿಕೊಳ್ಳುತ್ತಾ ಇದ್ದರೂ ಇರಬಹುದು ; ಮುದುಕನಾದ ನನಗೆ ಅರುಳು ಮರುಳು ಸಹಜವಾದುದೆ, ಆದರೆ ಪ್ರಕೃತದಲ್ಲಿ ನನಗೆ ಭ್ರಾಂತಿಯುಂಟಾಗಿಲ್ಲವೆಂದು ನಂಬುಗೆಯುಂಟು. ರಾಮರತ್ನನು ಇಲ್ಲಿಗಾಗಲಿ, ಇದರ ಪಕ್ಕದ ಮನೆಗಾಗಲಿ ಪದೇಪದೇ ಬರುತ್ತಿ ರುತ್ತಾನೆಂದು ನನಗೆ ಅನುಭವದಾರರು ತಿಳಿಸಿರುವರು. ನಾನು ಸು ೪ಾದ - ಅವರು ಸುಳ್ಳೇ ? ನಿನ್ನ ಮುಖವನ್ನು ನೋಡಿದರೆ, ನಿನಗೆ ರಾಮರತ್ನನ ವಿಷಯವು ಚೆನ್ನಾಗಿಯೇ ಗೊತ್ತಿರುವುದೆಂದು ತೋರು ವುದು, ಅನ್ಯಾಯವಾಗಿ ಮುದುಕನಾದ ನನ್ನನ್ನು ಏತಕೆ ಸಂಕಟ ಪಡಿಸುವೆ ? ಆತನ ವಿಷಯದಲ್ಲಿ ನಿನಗೆ ತಿಳಿವಂಶವನ್ನು ನನಗೆ ತಿಳಿಸ ಬಾರರೆತಕೆ ? ಹೇಳು ಈಗಲಾದರೂ ಹೇಳು, ರಾವತ್ರನೆಲ್ಲಿ ? ನನಗೆ ವೃಥಾ ಮೋಸಮಾಡುವುದರಿಂದ ನಿನಗೆ ಬಂದ ಭಾಗ್ಯವೇನು? ಹೆಂಗಸರಿಗೆ ಹುಟ್ಟು ತಬಂದ ಚಾಲಾಕನ್ನು ದೂರತಳ್ಳಿ ನಿಜವನ್ನು ಹೇಳು, ಎಂದು ಕೇಳಲಾಗಿ, ಹೆಂಗಸು ಕೋಪಗೊಂಡು ಸಾ- ಮಿ, ತಾವು ಈರೀತಿಯಲ್ಲಿ ಮಾತನಾಡಲು ಕಾರಣವೇನು ? ಎಂದಳು. ಅರಿಂದಮ-ಮುದುಕರನ್ನು ಕಂಡರೆ ಹುಡುಗರಿಗೆ ಹಾಸ್ಯ ಮಾಡುವುದು ಸ್ವಭಾವವಾದ್ದರಿಂದ, ನಾನು ಹೀಗೆಲ್ಲ ಕೆಳಬೆಕಾ ಯಿತು. ಆ ಹೆಂಗಸು ನಾನಲ್ಲವೆ ನಿನಗೆ ಮೋಸಮಾಡುವಳು ? ನೀವು ಅಸಭ್ಯರಾದ ಮನುಷ್ಯರಂತೆ ಕಾಣಿಸುವಿರಿ, ನನ್ನ ಮನೆಗೆ ಬಂದು ಮನಬಂದಂತೆ ಮಾತನಾಡಿ ನನ್ನನ್ನು ಅಪಮಾನಪಡಿಸುವಿರಿ, ನೀವೀಗ ನಮ್ಮ ಮನೆಯನ್ನು ಬಿಟ್ಟು ಹೊರಟುಹೊಗಬಾರದೇತಕೆ ? ಅರಿಂದಮ-ರಾಮರತ್ನನು ಇಲ್ಲಿರುವನೇ ಇಲ್ಲವೇ ನನಗೆ ಮೊದಲು ಹೇಳು, ನಿನ್ನ ಮಾತುಗಳಲ್ಲಿ ನನಗೆ ವಿಶ್ವಾಸಹುಟ್ಟಲಿಲ್ಲ.