ಪುಟ:ಚೋರಚಕ್ರವರ್ತಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಧೈವೂ ಬೇಕೆ ?ಎಂದು ಹೇಳಿ ಒಂದು ಮೃದುಮಧುರವಾದ ನಗೆಯನ್ನು ನಕ್ಕಳು. - ಅರಿಂದಮನು ಈ ನಗೆಯನ್ನು ನೋಡಿ ಕೊಂಚ ಲಜ್ಜಿತನಾ ದನು. ಈ ವಿಧವಾದ ಮಾತನ್ನು ಬದಲಾಯಿಸಬೇಕೆಂದು ಅರಿಂದ ಮನು--ನಿಮ್ಮ ತಾಯಿ ಇರುವುದೆಲ್ಲಿ ? ಎಂದು ಕೇಳಿದನು. ಹೆಂಗಸು-ಪಕ್ಕದ ಮನೆಯಲ್ಲಿ ಆಕೆಯಿರುವಳು ; ಈ ಮನೆ ಯಲ್ಲಿ ನಾನಿರುವೆನು, ಅರಿಂದಮುನಿನ್ನ ಹೆಸರೇನು ? ಹೆಂಗಸು ನನ್ನ ಹೆಸರು ಶಶಿರೇಖೆಯೆನ್ನುವರು. ಅರಿಂದಮಶತಿರೇಖೆ ! ಇದೇನು ಇಂತಹ ದುಷ್ಟವಾದ ಸ್ಥಳದಲ್ಲಿ ವಾಸವಾಗಿರುವೆ ? ನಿನ್ನ ಹೆಸರು ನೋಡಿದರೆ ಪ್ರಪಂಚ ವೆಲ್ಲಾ ಹರಡಿಕೊಂಡಿರುವುದು. ಆ ಹೆಂಗಸು ಅದರಿಂದಲೇ ನಾನು ಭಯಪಟ್ಟು ಇಂತಹ ಅಪ್ಪ ಶಸ್ತವಾದ ಸ್ಥಳದಲ್ಲಿ ವಾಸವಾಗಿರುವೆನು. ಅರಿಂದಮ-ಬೇರೊಂದು ಪ್ರಶಸ್ತವಾದ ಸ್ಥಳದಲ್ಲಿ ನೀನು ವಾ ಸವಾಗಿರುತ್ತಿದ್ದರೆ, ಹಣದ ಮಳೆಯೇ ನಿನ್ನ ಮೇಲೆ ಸುರಿಯುತ್ತಿತ್ತು. ಆ ಹೆಂಗಸು-ನನಗೆ ಅದು ಇಪ್ಪವಿಲ್ಲ. ಹಣಕ್ಕಾಗಿ ನಾನು ವಾರವಿಲಾಸಿನಿ (ಸೂಳೆ) ಯಾಗಲು ಇಷ್ಟಪಡಲಾರೆನು, ಹತ್ತಾರು ಜನರ ಅತ್ಯಾಚಾರವು ನನಗೆ ಸರಿಬೀಳದು, ಒಬ್ಬ ಪುರುಷನನ್ನು ಕೈ ಹಿಡಿದು ನಾನು ಸುಖಪಡಬೇಕೆಂದಿರುವೆನು. ಆದುದರಿಂದಲೇ ನಾನು ರಾಮರತ್ನನಿಗೆ ನನ್ನ ಪರಿಚಯವನ್ನು ಕೊಟ್ಟೆನು, ಏತಮ್ಮಣಪ ರೈಂತವಾಗಿಯೂ ನಾನು ಪುರುಷನ ಸಹವಾಸವನ್ನೇ ಮಾಡಿಲ್ಲ. ನನ್ನ ನ್ನು ಯಾರಾದರೂ ಶಾಸ್ತ್ರಕ್ಕನುಸಾರವಾಗಿ ವಿವಾಹವಾಗುವವರೆಗೂ ಪುರುಷನ ಸಂಸರ್ಗವನ್ನು ಮಾಡುವುದಿಲ್ಲವೆಂದು ವೀರಪ್ರತಿಜ್ಞೆಯನ್ನು