ಪುಟ:ಜಗನ್ಮೋಹಿನಿ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ • • • • • • • .. • • ••••••••• ಜಗಹಿನೀ, ಸಮೇತನಾಗಿ ಕಿರಾಕನಂತೆ ಪಾಣಿವರ್ಗವನ್ನು ಬೇಟೆಯಾಡು ತಿದ್ದಾ ಗೂ ಮಾಯಾ ಎಮೋ ಹಿತರಾದ ಮಾನವರು ನರಕ ವಾಸದಂತೆ ಮಲಮ ತಾದಿಗಳಲ್ಲಿ ವ್ಯರ್ಥವಾಗುವ ಬಾಲ್ಯ ದಿಂದಲೂ, ಪರಿಣಾಮದಲ್ಲಿ ವಿರಸವಾದ ಪ್ರಕನ್ನವನಿತಾದಿ ವಿಷಯಾಭಿಲಾಷೆಯಲ್ಲಿ ವ್ಯರ್ಥವಾಗುವ ಯಣವನದಿಂದಲೂ ತಲೆನರತು, ಹಲ್ಲು ಬಿದ್ದು, ಜೊಲ್ಲು ಸುರಿದು, ಕುಗ್ಗಿ, ಬಗ್ಗೆ, ನೆಗ್ಗಿ, ವಿಕಾರವಾಗಿ ಇಂದ್ರಿಯ ಪಾಟವವಿಲ್ಲದೇ ಒರಗಿ, ಸೊರಗಿ ಪುತ್ರ, ಪೌತ್ರ ಕಳತಾದಿಗಳಿಂದಲೂ ಕೂಡಾ ಪರಿಹಸಿತವಾದ ಲೌಕಿಕವಸ್ತು ಗಳಲ್ಲಿ ಅಪಾರವಾದ ಆಶೆಯನ್ನು ಸೂಚಿಸುವ ಅಸ್ಸುಟ ವಚನಗಳಿಂದ ಅಸಹ್ಯ ವಾದ, ವಾರ್ಧ ಕ್ಯದಿಂದಲೂ, ಒಡಕು ಮಡಿ ಕೆಯಲ್ಲಿ ತುಂಬಿಟ್ಟ ನೀರಿನಂತೆ ಪ್ರತಿಕ್ಷಣವೂ ಪರಿಕ್ಷೀಣವಾಗು ತಿರುವ ಆಯುಸಿನಿಂದಲೂ ಕೂಡಿರುವ ಅನಿತ ವಾದ ಶರೀರದ ಮೇಲಣ ಮಮತೆಯನ್ನು ಬಿಡದೇ ಹೊಡೆದಾಡುತ್ತಿರುವುದನ್ನು ನೋಡಿ ನೋಡಿ ನನಗೆ ಐಹಿಕ ವಿಷಯಗಳಲ್ಲಿ ಜುಗುಪೈಯ೦ಟಾಗಿ ರುವುದರಿಂದ, ನಾನು ಈ ಜನ್ಮವನ್ನು ಬ್ರಹ್ಮಚರ್ಯ ವ್ರತದಲ್ಲಿ ಯೇ ಕಳೆಯಬೇಕೆಂದು ಸಂಕಲ್ಪ ಮಾಡಿಕೊಂಡಿರುವೆನು. ಕುಶನಾಭರು, ಆದಿತ್ಯವರ್ಮ ನ ನೀತಿವಚನಗಳನ್ನು ತಲೆ ದೂಗುತ್ತಾ ಮನ ಹಾಸದಿಂದ ಕೇಳಿ " ಎಲೈ, ನೀನು ಸಾಕ್ಷಾ ದೌ ತಮನ ಅಪರಾವತಾರದಂತೆ ಕಾಣುತ್ತೀಯೆ, ಮಹಾ ತಪಸ್ವಿ ಗಳಾದ ವಿಶ್ವಾಮಿತ್ರಾದಿ ಮಹರ್ಷಿಗಳು ತಮ್ಮ ಅಪರವಯಸ್ಸಿನಲ್ಲಿ ಯ ಕೂಡಾ ವಿಷಯೋಪ ಭೋಗಗಳ ಲೋಭನೆಯನ್ನು ನಿವಶ ರಣೆ ಮಾಡಲಾರದೇ ಸುರಸುನ್ನರಿಯರ ದಾಸಾನುದಾಸರಾದರು, ಅಂಥವರ ಪಾಡೇ ಹಾಗಾದಮೇಲೆ, ನಿನ್ನಂತಹ ಬಾಲಕನ ಮಾತೇ ನು ? ದೈವಸಂಕಲ್ಪಕ್ಕೆ ಪ್ರತಿಕೂಲವಾಗಿ ಅವನು ತಾನೇ ಪ್ರವರ್ತಿ