ಪುಟ:ಜಗನ್ಮೋಹಿನಿ .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಜಗನೊಹಿನೀ

  • * * * * * * * * * * * * *

• • • • • ಹೋಗಿ ಆದರಿಸಿ ಯೋಗ್ಯವಾದ ಆಸನಗಳಲ್ಲಿ ಕುಳ್ಳಿರಿಸಿದಳು, ಈ ಮುನಿಗಳು, ಪೂಜ್ಯರಾದ ಕುಶನಾಭರು ಮತ್ತು ಅವರ ಸಹವಾಸಿ ಗಳಾದ ತಪಸ್ವಿಗಳು ಅಲ್ಲದೆ ಮತ್ಯಾರೂ ಅಲ್ಲ. ಮಹಾರಾಣಿಯು ಈ ತಪೋನಿಧಿಗಳನ್ನು ಯಥಾವಿಧಿಯಾಗಿ ಪೂಜಿಸಿ ಅವರಿದಿರಿಗೆ ವಿಧೇಯಳಾಗಿ ವಿನಯದಿಂದ ಕೈ ಕಟ್ಟಿ ಕೊ೦ಡು ನ ತಸಿರಳಾಗಿ ನಿಂತು “ ಮಹಾಸ್ಕಾ ಾ, ಇಂದು ತಮ್ಮ ಪಾದೋದಕದಿಂದ ನನ್ನ ಜನ್ಮವು ಸಾರ್ಥಕವಾಯಿತು; ಇಂದು ತಮ್ಮ ಪಾದಧೂಳಿಯ ಸಂಪರ್ಕದಿಂದ ಈ ಪದ್ಮ ದ್ವೀಪವು ಪವಿತ್ರವಾಯಿತು; ಇಂದು ನಮ್ಮ ಪ್ರಜೆಗಳೆಲ್ಲರೂ ಪುನೀತರಾದರು. ' ಎಂದಳು. ಕುಶನಾಭ: - ಎತ್, ನೀನು ಅಸಮೃದ್ದ ಪ್ರಲಾಪವನ್ನು ಮಾಡುತ್ತಿರುವೆ. ಆದರೆ, ಇದು ನಿನ್ನ ದೋ ಷವೆಂದು ನಾವು ಭಾವಿಸುವುದಿಲ್ಲ ;ಅದೇ ತಕ್ಕೆ೦ದರೆ, ಸಜ್ಜನರು ಕಾರುಣ್ಯಾತಿಶಯದಿಂದ ತಮ್ಮ ಇಷ್ಟ ಜನರಲ್ಲಿ ಇಲ್ಲದ ಗುಣಗಳನ್ನು ಕಣ್ಣು ಕೊಂಡಾಡು ವುದು ಸಹಜವಾಗಿದೆ. ಸ್ವಭಾವತಃ ಪಾವನವಾದ ವಸ್ತುಗಳು ಮತ್ತಾವುದರಿಂದಲೂ ಶುದ್ದಿ ಯನ್ನು ಹೊಂದುವುದಿಲ್ಲ , ಗಂಗಾ ಜಲವು ಮತ್ತಾವ ಕಾರಣದಿಂದಲಾದರೂ ಶುದ್ಧವಾಯಿತು ಎನ್ನ ಬಹುದೆ ? ಆ ಮಹಾತ್ಮರಾದ ಅರವಿನ್ದ ಬಾನ್ದ ವರ ತಪಃ ಪ್ರಭಾವ ದಿಂದ ನಿರ್ಮಿತವಾದ ಈ ಪುಣ್ಯ ದ್ವೀಪವು ಸ್ವಭಾವತಃ ಪರಿಶುದ್ಧ ವಾದುದು. ಹೀಗಿರುವ, ಅವರ ಚಿರಸವುತಿಯಾದ ನಿನ್ನ ಪಾರಿಶುದ್ದ ಕ್ಕೆ ಎಣೆಯುಂಟಿ ಜಗನ್ನೊ ಹಿನೀ:- ಪಿತೃವಿನ ಪಾಣಿತ್ಯದಿಂದ ಪುತ್ರನು ಪಣಿ ತನೆನ್ನಿಸಿಕೊಳ್ಳುವುದಿಲ್ಲ. ಕುಶನಾಭ:- ಸಿಂಹದ ಉದರದಲ್ಲಿ ಸಿಂಹವಲ್ಲ ದೇ ತೋ ಇವು ಜನಿಸುವುದೇ ?