ಪುಟ:ಜಗನ್ಮೋಹಿನಿ .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೫. • • • • • m ಪದ್ಮದ್ವೀಪ ಅಕ್ಷಣವನ್ನು ಹೇಳುತ್ತಾನೆ ? ಆದನ್ನು ನೆನಪಿಗೆ ತಂದುಕೊಂಡು ನಂತೈಸಿಕೋ, ನೀನು ಈ ದ್ವೀಪಕ್ಕೆ ಮಹಾರಾಣಿಯಾಗಿ ನಿನ್ನ ವಿರಾಮ ಕಾಲಗಳಲ್ಲೆಲ್ಲಾ ಭಗವದ್ಗೀತೆಯನ್ನು ಪಾರಾಯಣ ಮಾಡು ಆರು, ದೇವರು ನಿನ್ನನ್ನು ಕಾಪಾಡುತ್ತಾನೆ, ಹೆದರಬೇಡ, ') ಎಂದು ಓಮ್ಮಿಂದೊಮ್ಮೆ ಅದೃಶ್ಯರಾದರು. ಅವರನ್ನು ನಾನು ಏನೇನೋ ಕೇಳಬೇಕೆಂದು ಎತಡವೆ ಪ್ರಯತ್ನ ಪಟ್ಟೆನು ; ಒಂದು ತಡವೆಯಾದರೂ ನಿರ್ಭಾಗ್ಯಾ : ನನಗೆ ಅವರಿದಿರಿಗೆ ನಿಂತು ಮಾತನಾಡುವುದಕ್ಕೆ ನಾಲಿಗೆಯೇ ಬರಲಿಲ್ಲ, ಅವರು ನನ್ನ ಸಂಗಡ ಆವಾಗಲೂ ಮತ್ತಾವ ವಿಷಯ ವಾಗಿಯೂ ಏನೂ ಹೇಳಲಿಲ್ಲ. ಅವರ ಸುದ್ದಿಯನ್ನು ತಿಳಿಯಬೇಕೆಂದು ಅಂದಿನಿಂದಲ ಆತುರ ಪಡುತ್ತಿರುವೆನು; ಆದರೆ, ಇದುವರೆಗೂ ಅವರ ಸಂಗತಿಯನ್ನು ತಿಳಿದು ಹೇಳುವ ಮಹಾತ್ಮರ ಸಮಾಗಮ ವೇ ನನಗೆ ದುರ್ಲಭ ವಾಗಿದ್ದಿ ತು, ಇಂದು ದೈವ ಯೋಗದಿಂದ ತಮ್ಮ ಸಮಾಗಮದ ಪುಣ್ಯವು ಲಭಿಸಿರುವುದರಿಂದ ತಮ್ಮಿಂದ ನಮ್ಮ ತಂದೆಗಳ ಸಮಾ ಚಾರವನ್ನು ತಿಳಿಯಬೇಕೆಂದು ನನ್ನ ಮನವು ತವಕ ಪಡುತ್ತಿದೆ. ಆದುದರಿಂದ, ತಾವು ನನ್ನಲ್ಲಿ ಅನುಗ್ರಹಮಾಡಿ ನಮ್ಮ ತಂದೆಗಳ ಇತಿ ವೃತ್ತವನ್ನು ನನಗೆ ವಿವರವಾಗಿ ಹೇಳಬೇಕು. ಕುಶನಾಭ:- ವತ್ಸೆ , ನಿಮ್ಮ ತಂದೆಗಳು ತಮ್ಮ ತಪಸ್ಸನ್ನು ಪರಿಸಮಾಪ್ತಿ ಮಾಡುವುದಕ್ಕೆ ಸಲುವಾಗಿ ಹಿಮವತ್ಪಾಂತಕಾಂತಾ ರಕ್ಕೆ ಹೊರಟು ಹೋದರು, ಹೋಗುವುದಕ್ಕೆ ಮುಂಚಿತವಾಗಿ ತಮ್ಮ ಆಶ್ರಮದಲ್ಲಿ ನನ್ನನ್ನು ಕರದು : ನಮ್ಮ ಮೋಹನೆಯನ್ನು ಧರ್ಮವರ್ಮನ ಮಗನಾದ ರವಿವರ್ಮನಿಗೆ ಕೊಟ್ಟು ವಿವಾಹವಾ ಡಿಸು. ಎಂದು ಅಪ್ಪಣೆ ಕೊಡಿಸಿದರು. ಆ ಮಹದಾಜ್ಞೆಯನ್ನು ನೆರ ವೇರಿಸುವುದಕ್ಕೋಸ್ಕರವಾಗಿಯೇ ಆ ರಾಜಕುಮಾರನನ್ನು ನನ್ನ