ಪುಟ:ಜಗನ್ಮೋಹಿನಿ .djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ** - * - * * ೧೦೨ ಜಗನ್ನೊಹಿನೀ ಈ ಗೃಹದ ನಡುವೆ ಹಂಸತೂಲಿಕಾತಲ್ಪದಿಂದ ಪರಿಷತ ವಾಗಿದ್ದ ನವರತ್ನದ ಮಂಚ ಒಂದಿದ್ದಿ ತು ಇದರಮೇಲೆ ಯುವತಿಯೊ ಬೃಳು ಕುಸುಮೈ ಬಣ್ಣದ ಹಸನಾದ ಶಾಲನ್ನು ಅಸಡ್ಡೆಯಾಗಿ ಹೊದ್ದು ಕೊಂಡು ಮಲಗಿ ಮೈ ಮರೆತು ನಿದ್ರೆ ಮಾಡುತ್ತಿದ್ದಳು. ಇವಳ ಮಂಚದ ಸುತ್ತಲೂ ಸ್ವಲ್ಪ ದೂರದಲ್ಲಿ ಚಕ್ರಾ ಕಾರ ವಾಗಿ ಹಾಕಲ್ಪಟ್ಟಿದ್ದ ಚಿಕ್ಕ ಚಿಕ್ಕ ಪರ್ಯ೦ಕಗಳ ಮೇಲೆ ದೇವ ಕನೈಯರಂತೆ ರೂ ಸಲಾವಣ್ಯ ಸನ್ನನ್ನೆ ಯರಾದ, ಇನ್ನೂ ಕನ್ಯಾವಸ್ಥೆ ಯು ವಿಾರಿತೋ ಮಾರಲಿಲ್ಲ ವೋ ಎಂಬ ಸಂಶಯಕ್ಕೆ ಆಸ್ಪದ ವಾದ ವಯಸ್ಸಿನ ಕನೈಯರು ಮಲಗಿದ್ದರು. ಈ ವೇಳೆಯಲ್ಲಿ ಆ ಕೊಠಡಿಯ ದೇವಮೂಲೆಯಲ್ಲಿ ಒಮ್ಮೆ ನೊ ಮ್ಮೆ ಇಬ್ಬರು ಮುನೀಶ್ವರರು ಹೇಗೋ ಬಸ್ಸು ನಿಂತರು. - ಇವರು ಆಕಾರದಲ್ಲಿ ಸುಮಾರು ಏಳಡಿ ನೀಳವಾಗಿದ್ದಾಗ್ಯೂ ಕೃಶವಾಗಿ ಅಸ್ಥಿ ಪಂಜರಗಳನ್ನೆ ಕಾಣುತ್ತಿದ್ದರು. ಇವರ ತಲೆಯಿ ಈ ಪಾದದವರೆಗೂ ಕಮ್ಪನೀ ಕೋ ಪೈಹಾಕಿಕೊಣಿ ದಂತೆ ಲವ್ಯಾಯಮಾನವಾದ ಜಟೆಗಳು ಜೋಲಾಡುತ್ತಿದ್ದುವು. ಇವರ ಬಿಳೀ ಗಡವು ಇವರ ಎದೆಗೂಡಿಗೆ ಹೊದಿಕೆಯ ಕಠಿಣುತ್ತಿ, ದಿ ತು, ಮೈಗೆಲ್ಲಾ ದಟ್ಟ ವಾಗಿ ಭಸ್ಮವನ್ನು ಬಳದುಕೊಂಡಿದ್ದ ರು. ಇವರ ಶುಭ್ರವಾದ ಕೊವಣವು ಕಾಣದೇ ಹೋಗಿದ್ದರೆ, ಅವರು ದಿಗಮ್ಪರರಾಗಿದ್ದರೆಂದೇ ಹೇಳಬೇಕಾಗಿತ್ತು. ಈ ಜಟಾಧಾರಿಗಳಾದ ಮುನೀಶ್ವರರಾರೋ ಎನ್ನು ರಸಿಕ ರಾದ ನಮ್ಮ ವಾಚಕಮಹಾಶಯರು ಕೊಂಚವಾದರೂ ಯೋಚಿಸಿ ಬೇಕಾದುದಿಲ್ಲ, ಇವರು ಹಿನ್ನಿನ ಪ್ರಕರಣದಲ್ಲಿ ಆಖ್ಯಾತರಾದ ಕುಶನಾಭರು ಮತ್ತು ಅವರ ಜತೆಗಾರರಾದ ತಪಸ್ವಿಗಳು ಅಲ್ಲದೆ ಮತ್ತಾರೂ ಅಲ್ಲ.