ಪುಟ:ಜಗನ್ಮೋಹಿನಿ .djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೩೬ ಜಗನ್ನೊಹಿನಿ 14/VAr\\\ \ f\ #\/\ \ # \ \ \ # \/ # / * * #\\ \ \ # \ \ \h ಚಿತ್ರಲೇಖೆ: ಮೋಹಿನೀ, ಸಕಲಕಲಾಪ್ರವೀಣಳಾದ ನೀನು ಈ ಸರ್ವ ಸಾಧಾರಣವಾದ ಸಣ್ಣ ಒಗಟನ್ನು ಒಡೆಯಲಾರದೇ ಇಷ್ಟು ವ್ಯಾಕುಲಳಾಗಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ, ಓಹೋ ! ಸರ್ವಜ್ಞನಿಗೂ ಸ್ವವಿಷಯದಲ್ಲಿ ಸಂಶಯವು ಸಹಜವಾಗಿದೆ. ಆದುದ ರಿಂದ ನಾನು ನಿನ್ನ ವಿಷಯದಲ್ಲಿ ಆಶ್ಚರ್ಯ ಪಡಬೇಕಾ ದುದಿಲ್ಲ, ನಾನು ಈ ನಿನ್ನ ವ್ಯಾಕುಲತೆಗೆ ಏನೋ ಮಹತ್ಕಾರಣವಿರಬಹುದೆಂದು ತಿಳಿದಿ ದೈನು, ಇದು ಸರ್ವಸಾಧಾರಣವಾದ ಸ್ವಪ್ನ ವಲ್ಲದೇ ಬೇರೆಯಲ್ಲ. ಇದಕ್ಕೆ ನೀನಿಷ್ಟು ಕಾತರಸಡಬೇಕೇ ? ಮೋಹಿನೀ :-ಚಿತ್ರಲೇಖೆಯ ಭಾಷಣದಿಂದ ಕೊಂಚ ಸಮಾ ಹಿತಚಿತ್ತಳಾಗಿ, " ಲೇಖೇ, ಈ ವಿಷಯವನ್ನು ಸ್ವಷ್ಟವೆಂದು ನಿರ್ಧರಿಸು ವುದು ಹೇಗೆ ? ಅಂತಹ ವಾಸನೆಯೇ ನನಗಿಲ್ಲವಲ್ಲ ! ಸ್ವಪ್ನ ವೆಲ್ಲಿಂದ ಬಂತು ? ಮನಸ್ಸಿನವಾಸನೆಯಲ್ಲವೇ ಸ್ವಪ್ನಕ್ಕೆ ಮುಖ್ಯ ಕಾರಣ ? ಚಿತ್ರಲೇಖೆ:-ಸ್ವಪ್ನಕ್ಕೆ ವಾಸನೆಯೊಂದೇ ಕಾರಣವಲ್ಲ. ಅದಕ್ಕೆ ಅನೇಕ ಕಾರಣಗಳಿವೆ. ರಕ್ತ ಪರಿಚಲನೆಯ ವ್ಯತ್ಯಾಸದಿಂದಲೂ ಅಜೀರ್ಣ ದಿಂದಲೂ ಸ್ವಪ್ನಗಳಾಗುವುದುಂಟು. ಆದರೆ, ಈ ಕಾರಣಗಳಿಂದ ಉಂಟಾದ ಸ್ವಪ್ನವು ನಿರರ್ಥಕವಾದುದು ; ಶರೀರ ಸಂಬಂಧವಾದ ಕಾರ ಣಗಳಿಲ್ಲದೆ ಆಗುವ ಸ್ವಪ್ನಗಳು ಸಾಧಾರಣವಾಗಿ ಆಸ್ತಿಕರಾಗಿಯೂ, ಸದಾಚಾರಿಗಳಾಗಿಯೂ, ಭೂತದಯೆಯುಳ್ಳವರಾಗಿಯೂ, ಇರುವ ಸಾಧುಗಳಿಗೆ ಆಗುವುವು, ತತ್ರಾಪಿ, ಅಂತಹ ಸಾರ್ಥಕವಾದ ಸ್ವಪ್ನಗಳು ಎಚ್ಚರವಾದಮೇಲೆ ನೆನಪಿಗೆ ಬರಬೇಕಾದರೆ, ಬಹುಪುಣ್ಯವಿರಬೇಕು. ಇಂತಹ ಸ್ವಪ್ನದಲ್ಲಿ ಭೂತಭವಿಷ್ಯದ್ವರ್ತಮಾನಕಾಲಗಳ ಸಂಗತಿಗಳು ಪ್ರತ್ಯಕ್ಷವಾಗಿ ವಾಣಬರುವುವು, ಜ್ಞಾನಿಗಳು ಇಂತಹ ಸ್ವಪ್ನಗಳಿಂದ