ಪುಟ:ಜಗನ್ಮೋಹಿನಿ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೫ಗಿ ಗಿಗಿ \/* \\ \fff \ / \ ತಿ ಹೆಸರನ್ನು ಕೊಟ್ಟು ಪುಷ್ಪಕವನ್ನೇರಿ ಆತನ ಮೇಲೆ ಪುಷ್ಪವೃಷ್ಟಿಯನ್ನು ಕರೆಯುತ್ತಾ ಸುರನಗರಿಗೆ ತೆರಳಿದರು. ಈ ಚರಿತ್ರೆಯಿಂದ ನೀನು ಇವ ನನ್ನು ನಿರ್ಗ೦ಗ್ಲ ಕುಸುಮದಂತೆ ಕೇವಲ ಸೌಂದರ್ಯಶಾಲಿಯೆಂದು ತಿಳಿಯಲಾಗದು : ಈತನು ಕ್ಷತ್ರಿಯೋಚಿತಗಳಾದ ಧೈರ್ಯಸ್ಥೆರ್ಯಾದಿ ಗಣಗಣ ಪರಿಪೂರ್ಣನೆಂದೂ ಪ್ರಖ್ಯಾತನಾಗಿರುವನು. ನಿನ್ನಂಥವಳ ಮನಸ್ಸನ್ನು ಅಪಹರಿಸುವುದಕ್ಕೆ ಇವನ ಹೊರತು ಮತ್ತಾರೂ ಶಕ್ತರಾಗಿ ರಲಾರರು. ಮೋಹೀನಿ: ಎಲ್‌, ಚಿತ್ರಲೇಖೆ, ನೀನು ನನ್ನನ್ನು ಮಾತಿ ನಿಂದ ಮರುಳುಮಾಡಿ ನಿನ್ನ ಆಲಸ್ಯವನ್ನು ಮರೆಮಾಡುತ್ತಿರುವೆ, ನಿನ್ನ ಚಿತ್ರವು ಯುಗಾಂತ್ಯದಲ್ಲಿ ಮುಗಿಯುವ ಹಾಗೆ ಕಾಣುವುದಿಲ್ಲ. ಎಲ್ಲಿ ? ಬರದಷ್ಟು ಸಾಕು ; ತೋರಿಸು ನೋಡುವ ”ಎನ್ನು ಚಿತ್ರ ಲೇಖೆಯು ಚಿತ್ರಿಸುತ್ತಿದ್ದ ಕಾಗದವನ್ನು ಕಿತ್ತು ಕೊಳ್ಳುವುದಕ್ಕೆ ಕೈ ಚಾಚಿದಳು. ಚಿತ್ರಲೇಖೆ: -ಚಿತ್ರವು ಮೋಹಿನಿಯ ಕೈಗೆ ಸಿಗದ ಕೈಯೆತ್ತಿ ಮನ್ದಹಾಸದಿಂದ, 64ಒಡತಿಯೇ, ಆಯಿತು, ಒನ್ನು ನಿಮಿಷತಡೆ, ನಿನ್ನ ಈ ಆತುರಭಾವವು, ಈತನೇ ನಿನ್ನ ಮನಸಾಪಹಾರಿಯೆಂದು ಸೂಚಿಸು ತದೆ. "ಎನ್ನು ಮೋಹಿನಿಯು ಕೊಂಚ ಹಿಂದಾಗಲು ತಾನು ಚಿತ್ರ ವನ್ನು ಬರೆಯತೊಡಗಿದಳು. ಚಿತ್ರಲೇಖೆಯ ಮಾತನ್ನು ಕೇಳಿದ ಕೂಡಲೇ, ಮೋಹನಿಯ ಮನದಲ್ಲಿ, ಉತ್ತರಕ್ಷಣದಲ್ಲಿ ತಮ್ಮ ವಲ್ಲಭ ನನ್ನು ನೋಡುವ ಪ್ರತೀಕ್ಷೆಯುಳ್ಳ ಕನ್ನಿಕೆಯರಿಗೆ ಸಾಧಾರಣವಾಗಿ ಉಂಟಾಗುವ ಲಜ್ಞಾದಿವಿಕಾರಗಳು ಒಮ್ಮಿತ್ತೊಮ್ಮೆ ತಲೆದೋರಿದುವು. ಆದರೂ ಆತನಕೆಯು ಅದನ್ನು ಸಾಧ್ಯವಾದ ಮಟ್ಟಿಗೂ ಹೃದಯ