ಪುಟ:ಜಗನ್ಮೋಹಿನಿ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಜಗನ್ನೋಹಿನಿ. \\r\ * \ n r\ / \/\\\n ಕುಮಾರನನ್ನು ಚಿತ್ರಿಸುವೆನು' ಎನ್ನು ಕುರ್ಚಿಯಿಂದ ವರ್ಣಸಂಮ್ಮೇಳ ನವನ್ನು ಮಾಡಿಕೊಂಡು ಬರೆಯಲಾರಂಭಿಸಿ, 66ಒಡತಿಯೇ, ಈ ರಾಜ ಕುಮಾರನ ಚರಿತ್ರೆಯು ಬಹು ವಿನೋದಕರವಾಗಿರುವುದು; ಹೇಳುವೆನು ಕೇಳು; ಈತನು ಹನ್ನೆರಡು ವರುಷ ವಯಸ್ಸಿನವನಾಗಿದ್ದಾಗ ಪಾರಸೀಕರು ಹೇಮನಗರದಮೇಲೆ ದಂಡೆತ್ತಿ ಬನ್ನರು: ಅಲ್ಲಿ ಆ ದೇಶದವರಿಗೂ, ಅವ ರಿಗೂ ಹನ್ನೆರಡು ದಿನ ಬೆಟ್ಟದ ಸಾಲಿನಲ್ಲಿ ಭಯಂಕರವಾದ ಯುದ್ದವು ನಡೆಯಿತು. ಜಯಲಕ್ಷ್ಮಿ ಯು ಮಿಂಚಿನಂತೆ ಚಂಚಲಳಾಗಿ ಉಭಯ ಪಕ್ಷದಲ್ಲಿಯೂ ಹೊಳೆಯುತ್ತಿದ್ದಳು. ಆಗ ಈ ಬಾಲಕನು ಸ್ತ್ರೀವೇಷ ವನ್ನು ಹಾಕಿಕೊಂಡು ಸಂಚವರ್ಣದ ಕುದುರೆಯಮೇಲೆ ಏರಿಕೊಂಡು ಮಿಂಚಿನ ವೇಗದಿಂದ ಪಾರಸೀಕರಸಿಬಿರದೊಳಕ್ಕೆ ಪ್ರವೇಶಮಾಡಿದನು. ಜಗನ್ನೋಹಿನಿಯಂತೆ ಲೋಕಮೋಹಕವಾದ ಈತನ ಆಕಾರಕ್ಕೆ ಅಲ್ಲಿಯ ದ್ವಾರಪಾಲಕಾದಿ ಸೈನಿಕರೆಲ್ಲರೂ ಬೆಕ್ಕಸಬೆರಗಾಗಿ ದಾರಿಬಿಟ್ಟು ಓರೆಯಾಗಿ ಏನೂತೋಚದೇ ಸ್ಪಬ್ಬರಾಗಿ ನಿಂತರು. ಬಾಲಕನು ಕುದುರೆಯನ್ನು ನೆಟ್ಟಗೆ ಮಹಾರಾಜನಿದ್ದೆಡೆಗೆ ಬಿಟ್ಟನು. ಮಹಾರಾಜನು ಈ ದಿವ್ಯ ಬಾಲಕಿಯನ್ನು ನೋಡಿ, ಅಚ್ಚರಿಗೊಂಡು, 66 ಎಲೌ ಕನ್ಯಾಮಣಿಯೇ, ನೀನಾರು ? "ಎಂದು ಕೇಳಿದನು. ಅದಕ್ಕೆ ಬಾಲಕನು ಮೃದುಮಧುರ ಸ್ವರದಿಂದ ಗಂಭೀರವಾಗಿ, “ಎಲೈ, ನಾನು ಜಯಲಕ್ಷ್ಮಿಯು. ನೀನು ಹೇಮನಗರಿಯ ಸಿಂಹಾಸನವನ್ನು ಏರುವ ಮುಹೂರ್ತವು ಸವಿಾಪವಾಗುತ್ತಾ ಬಂದಾಗೂ ಧೈರ್ಯಗೊಂಡು ಕೋಟೆಯೊಳಕ್ಕೆ ಪ್ರವೇಶಮಾಡಲಾರದೇ ಎದೆಗುಂದಿರುವ ನಿನ್ನ ಆಲಶ್ಯವನ್ನು ಸೈರಿಸಲಾ ರದೇ ನಿನ್ನನ್ನು ಸಿಂಹಾಸನದ ಸವಿಾಪಕ್ಕೆ ಸಾಗಿಸಿಕೊಂಡು ಹೋಗುವು ದಕ್ಕೋಸುಗ ನಾನೇ ಬಂದಿರುವೆನು ಇನ್ನಾದರೂ ತಡಮಾಡಬೇಡ,